Hyundai: ಹ್ಯುಂಡೈ ಕಾರುಗಳ ಮೇಲೆ ಜೂನ್ ಅವಧಿಯ ಆಕರ್ಷಕ ಡಿಸ್ಕೌಂಟ್ ಘೋಷಣೆ
ಹ್ಯುಂಡೈ ಇಂಡಿಯಾ ಕಂಪನಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಜೂನ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
ಹ್ಯುಂಡೈ ಇಂಡಿಯಾ (Hyundai India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಆಕರ್ಷಕ ಆಫರ್ ಗಳನ್ನು ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಕಂಪನಿಯು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನು ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಗ್ರಾಹಕರ ವಿವಿಧ ಕಾರು ಮಾದರಿಗಳನ್ನು ಆಧರಿಸಿ ರೂ. 10 ಸಾವಿರದಿಂದ ರೂ. 70 ಸಾವಿರ ತನಕ ಆಫರ್ ಪಡೆದುಕೊಳ್ಳಬಹುದಾಗಿದ್ದು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಆಫರ್ ಲಭ್ಯವಿದೆ ಎನ್ನುವ ಮಾಹಿತಿ ಇಲ್ಲಿದೆ.
ಎಕ್ಸ್ ಟರ್, ಗ್ರ್ಯಾಂಡ್ ಐ10 ಮತ್ತು ಔರಾ
ಹ್ಯುಂಡೈ ಕಂಪನಿ ತನ್ನ ಎಂಟ್ರಿ ಲೆವಲ್ ಕಾರು ಮಾದರಿಗಳಾದ ಎಕ್ಸ್ ಟರ್, ಔರಾ ಮತ್ತು ಗ್ರ್ಯಾಂಡ್ ಐ10 ಕಾರುಗಳ ಮೇಲೆ ವಿವಿಧ ಆಧರ್ ನೀಡುತ್ತಿದ್ದು, ಎಕ್ಸ್ ಟರ್ ಖರೀದಿಗಾಗಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್, ಔರಾ ಖರೀದಿ ಮೇಲೆ ರೂ. 48 ಸಾವಿರ ವಿವಿಧ ಆಫರ್ ಗಳು ಮತ್ತು ಗ್ರ್ಯಾಂಡ್ ಐ10 ಕಾರಿನ ಮೇಲೆ ರೂ. 53 ಸಾವಿರ ಮೌಲ್ಯ ಆಫರ್ ನೀಡುತ್ತಿದೆ. ಜೊತೆಗೆ ಈ ಮೂರು ಕಾರುಗಳ ಸಿಎನ್ ಜಿ ಆವೃತ್ತಿಗಳ ಮೇಲೂ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 600 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ3 ಎಸ್ ಯುವಿ ಅನಾವರಣ
ವೆನ್ಯೂ ಮತ್ತು ವೆನ್ಯೂ ಎನ್ ಲೈನ್
ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ರೂ. 50 ಸಾವಿರ ಮೌಲ್ಯದ ವಿವಿಧ ಆಫರ್ ಗಳನ್ನು ನೀಡಲಾಗುತ್ತಿದೆ. ಹೊಸ ಆಫರ್ ಗಳಲ್ಲಿ ಎಕ್ಸ್ ಚೆಂಜ್ ಬೋನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಸಾಮಾನ್ಯ ವೆನ್ಯೂ ಡೀಸೆಲ್ ಹೊರತುಪಡಿಸಿ ಇನ್ನುಳಿದ ಎಲ್ಲಾ ವೆರಿಯೆಂಟ್ ಗಳಿಗೆ ಆಫರ್ ಅನ್ವಯಿಸುತ್ತದೆ.
ಐ20 ಮತ್ತು ವೆರ್ನಾ
ಪ್ರೀಮಿಯಂ ಕಾರು ಮಾದರಿಗಳಾದ ಐ20 ಕಾರು ಖರೀದಿಯ ಮೇಲೆ ರೂ. 50 ಸಾವಿರ ಮೌಲ್ಯದ ಆಫರ್ ಮತ್ತು ವೆರ್ನಾ ಸೆಡಾನ್ ಖರೀದಿಯ ಮೇಲೆ ರೂ. 40 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದೆ. ಐ20 ಕಾರು ಸದ್ಯ 1.2 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಖರೀದಿಗೆ ಲಭ್ಯವಿದ್ದರೆ ವೆರ್ನಾ ಕಾರು 1.5 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಅಲ್ಕಾಜರ್ ಮತ್ತು ಟುಸಾನ್
ಹ್ಯುಂಡೈ ಕಂಪನಿಯು ಅಲ್ಕಾಜರ್ ಎಸ್ ಯುವಿ ಮೇಲೆ ರೂ. 70 ಸಾವಿರದಷ್ಟು ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್ ಚೆಂಜ್ ಬೋನಸ್ ಮತ್ತು ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಲಭ್ಯವಿದೆ. ಹಾಗೆಯೇ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಆವೃತ್ತಿಯಾಗಿರುವ ಟುಸಾನ್ ಮೇಲೆ ರೂ. 50 ಸಾವಿರದಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ಟುಸಾನ್ ಕಾರಿನ ಡೀಸೆಲ್ ಮಾದರಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಮೇಲೆ ರೂ. 50 ಸಾವಿರದಷ್ಟು ಆಫರ್ ಸಿಗಲಿದೆ.