Jawa Yezdi: ಜಾವಾ ಯೆಜ್ಡಿ ಬೈಕ್ ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ
ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಕಂಪನಿಯು ದೀಪಾವಳಿ ಕೊಡುಗೆಗಳನ್ನು ಪ್ರಕಟಿಸಿದ್ದು, ಜಾವಾ ಮತ್ತು ಯೆಜ್ಡಿ ಹೊಸ ಬೈಕ್ ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
ದೀಪಾವಳಿ ವಿಶೇಷತೆಗಾಗಿ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ (Jawa Yezdi Motorcycles) ಕಂಪನಿಯು ಅತ್ಯುತ್ತಮ ಆಫರ್ ಘೋಷಣೆ ಮಾಡಿದ್ದು, ಸೀಮಿತ ಅವಧಿಯ ಕೊಡುಗೆಗಳಲ್ಲಿ ಗ್ರಾಹಕರು ಹೆಚ್ಚಿನ ಉಳಿತಾಯಕ್ಕೆ ಅವಕಾಶ ನೀಡಲಾಗುತ್ತಿದೆ. ಹೊಸ ಆಫರ್ ಗಳು ಜಾವಾ ಬೈಕ್ ಸರಣಿಯಲ್ಲಿರುವ ಜಾವಾ, ಜಾವಾ 42, ಜಾವಾ 42 ಬಾಬ್ಬರ್, ಜಾವಾ ಪೆರಾಕ್ ಬೈಕ್ ಮತ್ತು ಯೆಜ್ಡಿ ಮೋಟಾರ್ ಸೈಕಲ್ ಸರಣಿಯಲ್ಲಿರುವ ಯೆಜ್ಡಿ ರೋಡ್ ಸ್ಟರ್, ಯೆಜ್ಡಿ ಸ್ಕ್ರಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಗಳನ್ನು ಒಳಗೊಂಡಿದೆ.
ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಹೊಸ ಆಫರ್ ಗಳಲ್ಲಿ ಗ್ರಾಹಕರು ಕನಿಷ್ಠ ತಮ್ಮ ನೆಚ್ಚಿನ ಬೈಕ್ ಮಾದರಿಯನ್ನು ರೂ.1,888 ಪ್ರಾರಂಭವಾಗುವ ಇಎಂಐ ಸೌಲಭ್ಯಗಳೊಂದಿಗೆ ಖರೀದಿಸಬಹುದಾಗಿದ್ದು, ನಾಲ್ಕು ವರ್ಷಗಳ ಅಥವಾ 50,000 ಕಿ.ಮೀ ವಿಶೇಷ ವಿಸ್ತರಿತ ವಾರಂಟಿ ನೀಡಲಾಗುತ್ತದೆ. ಈ ಮೂಲಕ ಹೊಸ ಬೈಕ್ ಖರೀದಿಗೆ ಆಕರ್ಷಕ ಇಎಂಐ ಸೌಲಭ್ಯವು ಸಾಕಷ್ಟು ಸಹಕಾರಿಯಾಗಲಿದ್ದು, ಹೆಚ್ಚುವರಿ ವಾರಂಟಿ ಸೌಲಭ್ಯವು ಬೈಕಿಗೆ ಹೆಚ್ಚಿನ ಸುರಕ್ಷತೆ ನೀಡುತ್ತದೆ ಎನ್ನಬಹುದು.
ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ
ಇನ್ನು ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಇತ್ತೀಚೆಗೆ ನವೀಕೃತ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳು ಕ್ರಮವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.98 ಲಕ್ಷ ಮತ್ತು ರೂ. 2.08 ಲಕ್ಷ ಆರಂಭಿಕ ಬೆಲೆ ಹೊಂದಿವೆ.
ಹೊಸ ಜಾವಾ 42 ಆವೃತ್ತಿಯು ಡ್ಯುಯಲ್ ಟೋನ್ ರೂಪಾಂತರದೊಂದಿಗೆ ಸ್ಪಷ್ಟವಾದ ಲೆನ್ಸ್ ಇಂಡಿಕೇಟರ್‌ಗಳು, ಶಾರ್ಟ್-ಹ್ಯಾಂಗ್ ಫೆಂಡರ್‌ಗಳು ಮತ್ತು ಹೊಸ ಡಿಂಪಲ್ ಫ್ಯೂಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರೀಮಿಯಂ ಲುಕ್ ನೀಡುವುದಕ್ಕಾಗಿ ಹೊಸ ಬೈಕಿನಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇದಲ್ಲದೆ ಹೊಸ ಬೈಕ್ ಕಾಸ್ಮಿಕ್ ರಾಕ್, ಇನ್ಫಿನಿಟಿ ಬ್ಲ್ಯಾಕ್, ಸ್ಟಾರ್‌ಶಿಪ್ ಬ್ಲೂ ಮತ್ತು ಸೆಲೆಸ್ಟಿಯಲ್ ಕಾಪರ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಡ್ಯುಯಲ್ ಬಣ್ಣಗಳಿಗೆ ಪೂರಕವಾಗಿ ಎಂಜಿನ್ ಮತ್ತು ಎಕ್ಸಾಸ್ಟ್ ಘಟಕಗಳಿಗೆ ರಾವೆನ್ ಟೆಕ್ಸ್‌ಚರ್ ಫಿನಿಶ್ ನೀಡಲಾಗಿದ್ದು, ಸ್ಪೋರ್ಟಿಯರ್ ವಿನ್ಯಾಸಕ್ಕಾಗಿ ಹೊಂದಿಕೆಯಾಗುವಂತೆ ಮರುವಿನ್ಯಾಸಗೊಳಿಸಲಾದ ಆಸನ, ಬ್ಯಾಶ್ ಪ್ಲೇಟ್, ಹ್ಯಾಂಡಲ್‌ಬಾರ್ ಮೌಂಟೆಡ್ ಮಿರರ್‌ಗಳು ಮತ್ತು ಹ್ಯಾಂಡಲ್‌ಬಾರ್ ಗ್ರಿಪ್‌ಗಳನ್ನು ನೀಡಲಾಗಿದೆ. ಇದರಲ್ಲಿ 294.7 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 27.3 ಹಾರ್ಸ್ ಪವರ್ ಮತ್ತು 26.8 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!
ಹಾಗೆಯೇ ನವೀಕೃತ ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಯು ಈ ಬಾರಿ ಗುರುತರವಾದ ವಿನ್ಯಾಸ ನವೀಕರಣಗಳನ್ನು ಹೊಂದಿದ್ದು, ಸ್ಪೋರ್ಟಿಯರ್ ಲುಕ್ ನೊಂದಿಗೆ ಮೊಣಕಾಲಿಗೆ ಆಯಾಸವಾಗದಂತೆ ಅರಾಮದಾಯಕವಾದ ವಿರಾಮಕ್ಕಾಗಿ ಪಟ್ಟಿ ನೀಡಲಾಗಿದೆ. ಜೊತೆಗೆ ಪ್ರೀಮಿಯಂ ಆಗಿರುವ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಮತ್ತು ಎಂಜಿನ್ ಮತ್ತು ಎಕ್ಸಾಸ್ಟ್ ಮೇಲೆ ರಾವೆನ್ ಟೆಕ್ಸ್‌ಚರ್ ಫಿನಿಶ್ ಸೇರಿಸಲಾಗಿದೆ. ಹೀಗಾಗಿ ಈ ಹೊಸ ಬೈಕ್ ಗ್ರಾಹಕರ ಬೇಡಿಕೆ ಆಧರಿಸಿ ಸುಧಾರಣೆ ಮಾಡಲಾದ ಆವೃತ್ತಿಯಾಗಿದ್ದು, ಮರುವಿನ್ಯಾಸಗೊಳಿಸಲಾದ ಹ್ಯಾಂಡಲ್‌ಬಾರ್ ಗ್ರಿಪ್‌ಗಳು, ಹ್ಯಾಂಡಲ್‌ಬಾರ್-ಮೌಂಟೆಡ್ ಮಿರರ್‌ಗಳು, ಸ್ಪೋರ್ಟಿಯಾಗಿರುವ ಎಕ್ಸಾಸ್ಟ್ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ರಶ್ ಅವರ್ ರೆಡ್, ಫಾರೆಸ್ಟ್ ಗ್ರೀನ್ ಮತ್ತು ಲೂನಾರ್ ವೈಟ್ ಎಂಬ ಮೂರು ಡ್ಯುಯಲ್ ಟೋನ್ ಮತ್ತು ಒಂದು ಸಿಂಗಲ್ ಟೋನ್ ಬಣ್ಣಗಳ ಆಯ್ಕೆ ಲಭ್ಯವಿದೆ.
ಇನ್ನು ಹೊಸ ಬೈಕ್ ಮಾದರಿಗಳಲ್ಲಿ 334 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 29.5 ಹಾರ್ಸ್ ಪವರ್ ಮತ್ತು 28.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಇದು 1440 ಎಂ.ಎಂ ವ್ಹೀಲ್ ಬೇಸ್ ನೊಂದಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕವಾದ ಆವೃತ್ತಿಯಾಗಿದೆ.