ಕರ್ನಾಟಕದಲ್ಲಿ ಎಂಟು ತಿಂಗಳಲ್ಲೇ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳ ನೋಂದಣಿ
ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಒಂದು ವರ್ಷದೊಳಗೆ ಒಂದು ಲಕ್ಷ ದಾಟಿದೆ. 2022 ರಲ್ಲಿ 95,929 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದರೆ, ಈ ವರ್ಷ ಇದು ಎಂಟು ತಿಂಗಳಲ್ಲಿ ಒಂದು ಲಕ್ಷದ ಗಡಿ ದಾಟಿದೆ. ಇವಿ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ. ತಾಂತ್ರಿಕ ಪ್ರಗತಿಯಿಂದಾಗಿ, ಎಲೆಕ್ಟ್ರಿಕ್ ವಾಹನಗಳು ಒದಗಿಸುವ ಕಾರ್ಯಕ್ಷಮತೆ ಮತ್ತು ಸೌಕರ್ಯವೂ ಸುಧಾರಿಸಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರು, ಸೆ.11: ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಸಂಖ್ಯೆ ಒಂದು ವರ್ಷದೊಳಗೆ ಒಂದು ಲಕ್ಷ ದಾಟಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MORTH) ಅಂಕಿಅಂಶಗಳ ಪ್ರಕಾರ, 2022 ರಲ್ಲಿ 95,929 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದೆ. ಆದರೆ, ಜನವರಿ 1, 2023 ಮತ್ತು ಸೆಪ್ಟೆಂಬರ್ 7, 2023 ರ ನಡುವೆ, ಅಂದರೆ ಕೇಲವ ಎಂಟು ತಿಂಗಳಲ್ಲಿ ಇ-ವಾಹನ ನೋಂದಣಿ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.
“ಇವಿ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ. ತಾಂತ್ರಿಕ ಪ್ರಗತಿಯಿಂದಾಗಿ, ಎಲೆಕ್ಟ್ರಿಕ್ ವಾಹನಗಳು ಒದಗಿಸುವ ಕಾರ್ಯಕ್ಷಮತೆ ಮತ್ತು ಸೌಕರ್ಯವೂ ಸುಧಾರಿಸಿದೆ. ವೆಚ್ಚ ಸಮಾನತೆಯು ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಲು ಮತ್ತೊಂದು ಪ್ರಮುಖ ಅಂಶವಾಗಿದೆ ” ಎಂದು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ನಿರ್ದೇಶಕ ಪವನ್ ಮುಲುಕುಟ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಎಲೆಕ್ಟ್ರಿಕ್ ಬೈಕ್ ರೆಡಿ ಮಾಡಿದ ಯುವಕ! ಅದರ ಮೈಲೇಜ್ ನೋಡಿದ್ರೆ ಬೆಚ್ಚಿಬೀಳ್ತೀರಾ!
ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದರೂ, ಇದಕ್ಕೆ ತಕ್ಕಂತೆ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಏರಿಕೆಯಾಗಿಲ್ಲ. “ಹೆಚ್ಚುತ್ತಿರುವ ಬೇಡಿಕೆಗೆ ಸರಿಹೊಂದುವಂತೆ ನಾವು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಬಸ್ಸುಗಳು, ಕಾರುಗಳು ಮತ್ತು ದೊಡ್ಡ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಮುಖ್ಯವಾಗಿದ್ದರೂ, ಅಪಾರ್ಟ್ಮೆಂಟ್ಗಳಲ್ಲಿ ಖಾಸಗಿ ಚಾರ್ಜಿಂಗ್ ಸ್ಥಳಗಳನ್ನು ಪ್ರೋತ್ಸಾಹಿಸುವುದು ಮುಖ್ಯ ಎಂದು ಮುಲುಕುಟ್ಲಾ ಹೇಳಿದರು.
ಆಟಫಮೊಬೈಲ್ಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ