Longest Car: 75 ಸೀಟ್ಸ್, 100 ಅಡಿ ಉದ್ದ, ಈಜುಕೊಳ: ಇದುವೇ ನೋಡಿ ವಿಶ್ವದ ಅತಿ ಉದ್ದದ ಕಾರು
Longest Car In The World: ವಿಶ್ವದ ಅತಿ ಉದ್ದದ ಕಾರನ್ನು "ದಿ ಅಮೇರಿಕನ್ ಡ್ರೀಮ್" ಎಂದು ಕರೆಯಲಾಗುತ್ತದೆ, ಇದು 100 ಅಡಿಗಳಿಗಿಂತ ಹೆಚ್ಚು ಉದ್ದವಾಗಿದೆ ಮತ್ತು 75 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ಒಟ್ಟು 26 ಚಕ್ರಗಳನ್ನು ಹೊಂದಿದೆ ಮತ್ತು ಹೆಲಿಪ್ಯಾಡ್, ಈಜುಕೊಳ, ಮಿನಿ ಗಾಲ್ಫ್ ಕೋರ್ಸ್‌ವರೆಗೆ ಎಲ್ಲವೂ ಇದೆ. ಇದನ್ನು 1986 ರಲ್ಲಿ ಜೇ ಓಹ್ಬರ್ಗ್ ಎಂಬ ವ್ಯಕ್ತಿ ತಯಾರಿಸಿದ್ದಾರೆ.

ಬೆಂಗಳೂರು (ಡಿ. 10): ನೀವು ಅನೇಕ ಕಾರುಗಳನ್ನು (Car) ನೋಡಿರಬಹುದು, ಆದರೆ ಎಂದಾದರೂ ವಿಶ್ವದ ಅತಿ ಉದ್ದದ ಕಾರು ಯಾವುದು ಎಂದು ತಿಳಿಯಲು ಪ್ರಯತ್ನಿಸಿದ್ದೀರಾ? ಇಲ್ಲದಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ವಿಶ್ವದ ಅತಿ ಉದ್ದದ ಕಾರು 100 ಅಡಿಗಳಿಗಿಂತ ಹೆಚ್ಚು, ಅಂದರೆ 30 ಮೀಟರ್ ಉದ್ದವಿದೆ. ಈ ಕಾರಿನ ಹೆಸರು ದಿ ಅಮೇರಿಕನ್ ಡ್ರೀಮ್ ಮತ್ತು ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದ ಅತಿ ಉದ್ದದ ಕಾರು ಎಂಬ ಬಿರುದನ್ನು ಪಡೆದುಕೊಂಡಿದೆ. ಈ ಕಾರನ್ನು ಪ್ರಸ್ತುತ ಅಮೆರಿಕದ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿರುವ ಡೆಸರ್ಟ್ ಪಾರ್ಕ್ ಕಾರ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
ಇದನ್ನು 1986 ರಲ್ಲಿ ಜೇ ಓಹ್ಬರ್ಗ್ ಎಂಬ ವ್ಯಕ್ತಿ ತಯಾರಿಸಿದ್ದಾರೆ. 1976 ರ ಮಾದರಿಯ ಕ್ಯಾಡಿಲಾಕ್ ಎಲ್ಡೊರಾಡೊ ಕಾರಿನ ಆಧಾರದ ಮೇಲೆ, ದಿ ಅಮೇರಿಕನ್ ಡ್ರೀಮ್ ಅನ್ನು ಸ್ಕ್ರ್ಯಾಪ್‌ನಿಂದ ತಯಾರಿಸಲಾಯಿತು. ಇದು ಕೇವಲ ಅದರ ಗಾತ್ರ ಮತ್ತು ನಿರ್ಮಾಣಕ್ಕಾಗಿ ಮಾತ್ರವಲ್ಲದೆ, ಅದರ ವೈಶಿಷ್ಟ್ಯಗಳಿಗಾಗಿಯೂ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಇದು ಒಟ್ಟು 26 ಚಕ್ರಗಳನ್ನು ಹೊಂದಿದೆ ಮತ್ತು ಇದರ ಕ್ಯಾಬಿನ್ 75 ಜನರನ್ನು ಕೂರಿಸಬಹುದು. ವಿಐಪಿಗಳಿಗಾಗಿ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ.
ಈ ಕಾರು ಹೆಲಿಕಾಪ್ಟರ್ ಇಳಿಯಲು ಸರಿಯಾದ ಹೆಲಿಪ್ಯಾಡ್ ಅನ್ನು ಸಹ ಹೊಂದಿದೆ. ಇದರೊಂದಿಗೆ, ಮಿನಿ ಗಾಲ್ಫ್ ಕಾರ್ಟ್, ಏಕಕಾಲದಲ್ಲಿ 6 ಜನರಿಗೆ ಅವಕಾಶ ಕಲ್ಪಿಸಬಹುದಾದ ಈಜುಕೊಳ ಮತ್ತು ಜಕುಝಿಯಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ.
Indian Railway: ರೈಲ್ವೆ ಬೋಗಿಗಳಲ್ಲಿ ಹಳದಿ, ನೀಲಿ ಮತ್ತು ಬಿಳಿ ಪಟ್ಟೆಗಳು ಏಕೆ ಇವೆ?, ಏನಿದರ ಅರ್ಥ?
ಇಷ್ಟು ದೊಡ್ಡ ಕಾರು ತಿರುವು ಹೇಗೆ ನಿಭಾಯಿಸುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಅಮೇರಿಕನ್ ಡ್ರೀಮ್ ಲಿಮೋಸಿನ್ ಮಧ್ಯದಲ್ಲಿ ಹಿಂಜ್ ಅನ್ನು ಹೊಂದಿದ್ದು ಎರಡು ಭಾಗಗಳಲ್ಲಿ ನಿರ್ಮಿಸಲಾಗಿದೆ. ಇದು ಸುಲಭವಾಗಿ ತಿರುವು ಪಡೆಯಲು ಅನುವು ಮಾಡಿಕೊಡುತ್ತದೆ. ಇದರ ಪುನಃಸ್ಥಾಪನೆ 2022 ರಲ್ಲಿ ಪೂರ್ಣಗೊಂಡಿತು ಮತ್ತು ಅದನ್ನು ಆಟೋ ಮ್ಯೂಸಿಯಂನಲ್ಲಿ ಇರಿಸಲಾಯಿತು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




