ಥಾರ್ ಅರ್ಮಾಡ್ 5 ಡೋರ್ ವರ್ಷನ್ ಉತ್ಪಾದನೆ ಆರಂಭಿಸಿದ ಮಹೀಂದ್ರಾ
ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಥಾರ್ ಅರ್ಮಾಡ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಉತ್ಪಾದನೆಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಿದೆ.
ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ಮುಂಬರುವ ಕೆಲವೇ ತಿಂಗಳ ಅಂತರದಲ್ಲಿ ತನ್ನ ಬಹುನೀರಿಕ್ಷಿತ ಥಾರ್ ಅರ್ಮಾಡ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಥಾರ್ ಕಾರಿನಲ್ಲಿ 3 ಡೋರ್ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಇದೀಗ ಥಾರ್ ಆರ್ಮಾಡ್ ಆವೃತ್ತಿಯು ಹೆಚ್ಚಿನ ವ್ಹೀಲ್ ಬೆಸ್ ಸೌಲಭ್ಯದೊಂದಿಗೆ 5 ಡೋರ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದು ಸದ್ಯ ಖರೀದಿಗೆ ಲಭ್ಯವಿರುವ ಥಾರ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಉದ್ದಳತೆಯೊಂದಿಗೆ ಆರಾಮದಾಯಕ ಒಳಾಂಗಣ ಸೌಲಭ್ಯವನ್ನು ಪಡೆದುಕೊಳ್ಳಲಿದೆ.
5 ಡೋರ್ ಸೌಲಭ್ಯದೊಂದಿಗೆ ಹೊಸ ಆವೃತ್ತಿಯು ಎಸ್ ಯುವಿ ಇಷ್ಟಪಡುವ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಸಾಮಾನ್ಯ ಮಾದರಿಗಿಂತಲೂ ಇದು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಆವೃತ್ತಿಯೊಂದಿಗೆ ಮಹೀಂದ್ರಾ ಕಂಪನಿಯು ಪ್ರತಿ ತಿಂಗಳು ಗರಿಷ್ಠ 6 ಸಾವಿರ ಯುನಿಟ್ ಥಾರ್ ಮಾರಾಟಮಾಡುವ ಗುರಿಹೊಂದಿದ್ದು, ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದೆ.
ಇದನ್ನೂ ಓದಿ: ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುವ ವಾಹನ ಮಾಲೀಕರಿಗೆ ಭಾರೀ ದಂಡ ಫಿಕ್ಸ್
ಥಾರ್ ಕಾರು ಮಾದರಿಯು ಸದ್ಯ 3 ಡೋರ್ ಸೌಲಭ್ಯದೊಂದಿಗೆ ಆಫ್ ರೋಡ್ ಇಷ್ಟಪಡುವ ಗ್ರಾಹಕರನ್ನೇ ಹೆಚ್ಚು ಸೆಳೆಯುತ್ತಿದ್ದು, ಇದೀಗ 5 ಡೋರ್ ಮಾದರಿಯೊಂದಿಗೆ ಆಫ್ ರೋಡ್ ಜೊತೆಗೆ ಕುಟುಂಬ ಸಮೇತವಾಗಿ ಪ್ರಯಾಣ ಇಷ್ಟಪಡುವ ಗ್ರಾಹಕರನ್ನು ಸಹ ಸೆಳೆಯಲಿದೆ. ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ 5 ಡೋರ್ ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯದೊಂದಿಗೆ ಪನೊರಮಿಕ್ ಸನ್ ರೂಫ್ ನೀಡುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
3 ಡೋರ್ ಮಾದರಿಯ ಥಾರ್ ಹೆಸರಿನಲ್ಲಿ ಮಾರಾಟವಾಗಲಿದ್ದರೆ 5 ಡೋರ್ ಮಾದರಿಯು ಥಾರ್ ಅರ್ಮಾಡ್ ಹೆಸರಿನಲ್ಲಿ ಮಾರಾಟಗೊಳ್ಳಲಿದ್ದು, ಹೊಸ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಯನ್ನೇ ಪಡೆದುಕೊಂಡಿರಲಿವೆ. ಹಾಗೆಯೇ ಹೊಸ ಆವೃತ್ತಿಯು 4X2 ಮತ್ತು 4X4 ಡ್ರೈವ್ ಸಿಸ್ಟಂನೊಂದಿಗೆ ಮಾರಾಟಗೊಳ್ಳಲಿದ್ದು, 1.5 ಲೀಟರ್ ಡೀಸೆಲ್, 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಹೊಸ ಆವೃತ್ತಿಯು ಸಾಮಾನ್ಯ ಮಾದರಿಗಿಂತ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.