5 ಡೋರ್ ಜೊತೆ ಭರ್ಜರಿ ಫೀಚರ್ಸ್ ಹೊಂದಿರುವ ಮಹೀಂದ್ರಾ ಥಾರ್ ರಾಕ್ಸ್ ಬಿಡುಗಡೆ

ಮಹಿಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಥಾರ್ ರಾಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು 5 ಡೋರ್ ಸೌಲಭ್ಯದೊಂದಿಗೆ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

5 ಡೋರ್ ಜೊತೆ ಭರ್ಜರಿ ಫೀಚರ್ಸ್ ಹೊಂದಿರುವ ಮಹೀಂದ್ರಾ ಥಾರ್ ರಾಕ್ಸ್ ಬಿಡುಗಡೆ
ಮಹೀಂದ್ರಾ ಥಾರ್ ರಾಕ್ಸ್
Follow us
Praveen Sannamani
|

Updated on: Aug 16, 2024 | 5:58 PM

ಮಧ್ಯಮ ಗಾತ್ರದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ತನ್ನ ಬಹುನೀರಿಕ್ಷಿತ ಥಾರ್ ರಾಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ಪ್ರಮುಖ ಐದು ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12.99 ಲಕ್ಷದಿಂದ ರೂ. 20.49 ಲಕ್ಷ ಬೆಲೆ ಹೊಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಮಾನ್ಯ ಥಾರ್ ಕಾರು ಮಾದರಿಯು ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾದ 3 ಡೋರ್ ಆವೃತ್ತಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹಿಂಬದಿಯ ಆಸನವನ್ನು ಬಳಕೆ ಮಾಡುವ ಪ್ರಯಾಣಿಕರಿಗೆ ಕೆಲವು ಅನಾನುಕೂಲಗಳಿವೆ. ಹೀಗಾಗಿ ಲೈಫ್ ಸ್ಟೈಲ್ ಜೊತೆಗೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ಅನುಕೂಲಕರವಾಗುವಂತೆ ಮಹೀಂದ್ರಾ ಕಂಪನಿಯು ಸಾಮಾನ್ಯ ಥಾರ್ ಜೊತೆ ಹೊಸದಾಗಿ ಥಾರ್ ರಾಕ್ಸ್ ಮಾದರಿಯನ್ನು ಸಹ ಮಾರಾಟ ಮಾಡಲು ನಿರ್ಧರಿಸಿದೆ.

Mahindra Thar Roxx (2)

ಹೊಸ ಥಾರ್ ರಾಕ್ಸ್ ಕಾರು ಎಂಎಕ್ಸ್1, ಎಂಎಕ್ಸ್3, ಎಎಕ್ಸ್3 ಎಲ್, ಎಂಎಕ್ಸ್5, ಎಎಕ್ಸ್5 ಎಲ್ ಮತ್ತು ಎಎಕ್ಸ್7 ಎಲ್ ಎನ್ನುವ ಆರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ 5 ಡೋರ್ ಜೊತೆ ಹಲವು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳಲ್ಲೂ ಖರೀದಿಗೆ ಲಭ್ಯವಿದ್ದು, ಹೊಸ ಆವೃತ್ತಿಯು ಸಾಮಾನ್ಯ ಥಾರ್ ಕಾರಿಗಿಂತಲೂ ರೂ. 1.64 ಲಕ್ಷದಷ್ಟು ದುಬಾರಿಯಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಥಾರ್ ರಾಕ್ಸ್ ಕಾರು ಖರೀದಿಗಾಗಿ ಮಹೀಂದ್ರಾ ಕಂಪನಿಯು ಸೆಪ್ಟೆಂಬರ್ 14ರಿಂದ ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ಡ್ರೈವ್ ಆಯೋಜಿಸುತ್ತಿದ್ದು, ಅಕ್ಟೋಬರ್ 3 ರಂದು ಅಧಿಕೃತವಾಗಿ ಬುಕಿಂಗ್ ಆರಂಭಿಸಲಿದೆ. ನಂತರ ಅಕ್ಟೋಬರ್ 14ರಂದು ದಸರಾ ಸಂಭ್ರಮದಲ್ಲಿ ಹೊಸ ಕಾರಿನ ವಿತರಣೆಯ ಭರವಸೆ ನೀಡಲಾಗಿದ್ದು, ಹೊಸ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರೇರಿತ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

Mahindra Thar Roxx (4)

ಆಕರ್ಷಕವಾದ ವಿನ್ಯಾಸದೊಂದಿಗೆ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಸಿ ಆಕಾರದ ಹೋಲುವ ಎಲ್‌ಇಡಿ ಡಿಆರ್‌ಎಲ್ಸ್, ಸರ್ಕ್ಯೂಲರ್ ಆಗಿರೋ ಫಾಗ್ ಲೈಟ್ಸ್ ಜೊತೆಗೆ ಸ್ಪೋರ್ಟಿಯಾಗಿ ಬಂಪರ್ ನೀಡಲಾಗಿದೆ. ಜೊತೆಗೆ 19 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಹ್ ಗಳು, ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್, ಎಲ್ಇಡಿ ಟೈಲ್‌ಲೈಟ್ಸ್ ನೀಡಲಾಗಿದೆ.

ಹೊರಭಾಗದಂತೆ ಕಾರಿನ ಒಳಗೂ ಹಲವಾರು ಫೀಚರ್ಸ್ ಗಳಿದ್ದು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸರ್ಪೊಟ್ ಮಾಡುವ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಲಭ್ಯವಿದೆ. ಇದಲ್ಲದೇ ಸಂಪೂರ್ಣ ಡಿಜಿಟಲ್ ಆಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಆಸನಗಳು, ಪನೊರಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಎಸಿ ವೆಂಟ್ಸ್ ನೀಡಲಾಗಿದೆ.

ಇದನ್ನೂ ಓದಿ: ಅಚ್ಚರಿಯ ಬೆಲೆಗೆ ಭರ್ಜರಿ ಫೀಚರ್ಸ್ ಹೊಂದಿರುವ ಸಿಟ್ರನ್ ಬಸಾಲ್ಟ್ ಬಿಡುಗಡೆ

Mahindra Thar Roxx (3)

ಥಾರ್ ರಾಕ್ಸ್ ಕಾರಿನಲ್ಲಿ ಸುರಕ್ಷತೆಗಾಗಿ ಮಹೀಂದ್ರಾ ಕಂಪನಿಯು ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳು, ಇಎಸ್ಇ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ ಲೈಟ್ ಅಂಡ್ ವೈಪರ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ನೀಡಲಾಗಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವಿದ್ದು, ಇದು ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ