Maruti E-Vitara: ಹೊಸ ಕಾರು ಖರೀದಿಸ್ತೀರ?: ಮಾರುತಿಯ ಬಹುಬೇಡಿಕೆಯ ಮೊದಲ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಪ್ರಾರಂಭ

ಗ್ರಾಂಡ್ ವಿಟಾರಾದಂತೆ, ಇ ವಿಟಾರಾ ಕೂಡ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಡೆಲ್ಟಾ, ಝೀಟಾ ಮತ್ತು ಆಲ್ಫಾ ಮಾದರಿಗಳನ್ನು ಒಳಗೊಂಡಿದೆ. ಕಂಪನಿಯು ತನ್ನ ಮೂಲ ರೂಪಾಂತರದಲ್ಲಿ 49-kWh ಬ್ಯಾಟರಿ ಪ್ಯಾಕ್ ಅನ್ನು ಒದಗಿಸಬಹುದು. ಉನ್ನತ ರೂಪಾಂತರವು 61-kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಬಹುದು.

Maruti E-Vitara: ಹೊಸ ಕಾರು ಖರೀದಿಸ್ತೀರ?: ಮಾರುತಿಯ ಬಹುಬೇಡಿಕೆಯ ಮೊದಲ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಪ್ರಾರಂಭ
Maruti E Vitara
Follow us
ಮಾಲಾಶ್ರೀ ಅಂಚನ್​
| Updated By: Vinay Bhat

Updated on: Feb 04, 2025 | 2:38 PM

ಮಾರುತಿ ಸುಜುಕಿ ಇತ್ತೀಚೆಗಷ್ಟೆ ತನ್ನ ಮೊದಲ ಎಲೆಕ್ಟ್ರಿಕ್ ಗ್ಲಿಂಪ್ಸ್ ಅನ್ನು ಆಟೋ ಎಕ್ಸ್‌ಪೋದಲ್ಲಿ ತೋರಿಸಿದೆ. ಮಾರುತಿ ಸುಜುಕಿ ಇ-ವಿಟಾರಾ ನೋಡಿದ ಮೇಲೆ ಕಂಪನಿಯ ಬಗ್ಗೆ ಜನರ ನಿರೀಕ್ಷೆ ಕೂಡ ಹೆಚ್ಚಿದೆ. ಎಲ್ಲರೂ ಇದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನೀವು ಸಹ ಈ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈಗಲೇ ಬುಕ್ ಮಾಡಬಹುದು. ಈ ಕಾರಿಗೆ ಅನಧಿಕೃತ ಬುಕ್ಕಿಂಗ್ ಆರಂಭವಾಗಿದೆ. 25,000 ಟೋಕನ್ ಮೊತ್ತವನ್ನು ಪಾವತಿಸಿ ನೀವು ಈ ಕಾರನ್ನು ಬುಕ್ ಮಾಡಬಹುದು.

ಮಾರುತಿ ಸುಜುಕಿ ಇ-ವಿಟಾರಾ ಕಾರು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಆದರೆ, ಕಂಪನಿಯು ಕಾರಿನ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಬೆಲೆ ತಿಳಿಯದೆಯೂ ಬುಕ್ ಮಾಡಬಹುದಾದ ಆಯ್ಕೆ ನೀಡಲಾಗಿದೆ.

ಇ-ವಿಟಾರಾ ಮೂರು ರೂಪಾಂತರಗಳಲ್ಲಿ ಲಭ್ಯ:

ಗ್ರಾಂಡ್ ವಿಟಾರಾದಂತೆ, ಇ ವಿಟಾರಾ ಕೂಡ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಡೆಲ್ಟಾ, ಝೀಟಾ ಮತ್ತು ಆಲ್ಫಾ ಮಾದರಿಗಳನ್ನು ಒಳಗೊಂಡಿದೆ. ಕಂಪನಿಯು ತನ್ನ ಮೂಲ ರೂಪಾಂತರದಲ್ಲಿ 49-kWh ಬ್ಯಾಟರಿ ಪ್ಯಾಕ್ ಅನ್ನು ಒದಗಿಸಬಹುದು. ಉನ್ನತ ರೂಪಾಂತರವು 61-kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಬಹುದು. ಇದರ ವ್ಯಾಪ್ತಿಯು 500 ಕಿಲೋಮೀಟರ್ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬ್ಯಾಟರಿ ಪ್ಯಾಕ್ ಅನ್ನು ಉತ್ತಮ ಕಾರ್ಯಕ್ಷಮತೆ ಮತ್ತು ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್​ಗಳಿಗೆ ಭರ್ಜರಿ ಬೇಡಿಕೆ: ಜನವರಿಯಲ್ಲಿ ಸೇಲ್ ಆಗಿದ್ದು ಎಷ್ಟು ಗೊತ್ತೇ?

ಇ ವಿಟಾರಾ ಬ್ಯಾಟರಿ ಪ್ಯಾಕ್ 120 ಲಿಥಿಯಂ-ಐಯಾನ್ ಆಧಾರಿತ ಕೋಶಗಳನ್ನು ಹೊಂದಿದೆ. -30 C ನಿಂದ 60 C ವರೆಗಿನ ತಾಪಮಾನದಲ್ಲಿಯೂ ಸಹ ಕಾರ್ಯನಿರ್ವಹಿಸಲು ಇವುಗಳನ್ನು ಪರೀಕ್ಷಿಸಲಾಗಿದೆ. ಇದು ಸುಧಾರಿತ ಉಷ್ಣ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಇದು ಮಾತ್ರವಲ್ಲ, ಇದು ಕಡಿಮೆ-ಐಯಾನ್ ಕೂಲಂಟ್ ಅನ್ನು ಒಳಗೊಂಡಿದೆ. ಕಂಪನಿಯು ಇದನ್ನು ವಿವಿಧ ಸಂದರ್ಭಗಳಲ್ಲಿ ಪರೀಕ್ಷಿಸಿದೆ. ಮಾರುತಿ ಇ ವಿಟಾರಾದಲ್ಲಿ ಮೂರು ಡ್ರೈವಿಂಗ್ ಮೋಡ್‌ಗಳು ಲಭ್ಯವಿರುತ್ತವೆ. ಇದು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಇ-ವಿಟಾರಾದ ಒಳ ಮತ್ತು ಹೊರಭಾಗ:

ಮಾರುತಿಯ ಈ ಕಾರಿನಲ್ಲಿ ನೀವು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತೀರಿ. 10.25 ಇಂಚಿನ ಮಲ್ಟಿ ಇನ್ಫೋ ಡಿಸ್​ಪ್ಲೇ ಒದಗಿಸಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಏರ್ ಸೀಟ್ ಸಾಕಷ್ಟು ಆರಾಮದಾಯಕವಾಗಿವೆ. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ, ಹರ್ಮನ್ ಸೌಂಡ್ ಸಿಸ್ಟಂ ಕೂಡ ನೀಡಲಾಗಿದೆ. ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಹ ಈ ಕಾರಿನಲ್ಲಿ ಲಭ್ಯವಿದೆ.

ಇದು ಲೆವೆಲ್ 2 ಎಡಿಎಎಸ್ ಮತ್ತು ಏಳು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಇ-ವಿಟಾರಾ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ, ಇದು ನೋಡಲು ಸಾಕಷ್ಟು ಆಕರ್ಷಕವಾಗಿದೆ. ಕಂಪನಿಯು ಯುರೋಪ್ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ಇ ವಿಟಾರಾವನ್ನು ರಫ್ತು ಮಾಡಲು ಯೋಜಿಸಿದೆ ಎಂದು ಘೋಷಿಸಿದೆ. ಇದು ಭಾರತಕ್ಕೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಈ ಕಾರು ಟಾಟಾ ಕರ್ವ್ EV, MG ZS EV, ಹ್ಯುಂಡೈ ಕ್ರೆಟಾ EV ಮತ್ತು ಮಹೀಂದ್ರ BE06 ನೊಂದಿಗೆ ಸ್ಪರ್ಧಿಸಲಿದೆ. ಇದರ ಆರಂಭಿಕ ಬೆಲೆ 15 ರಿಂದ 20 ಲಕ್ಷ ರೂಪಾಯಿಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?