AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mercedes-Benz E-Class LWB: ಬಹುನೀರಿಕ್ಷಿತ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಎಲ್ ಬಿಡಬ್ಲ್ಯು ಅನಾವರಣ

ಮರ್ಸಿಡಿಸ್-ಬೆಂಝ್ ಕಂಪನಿಯು ತನ್ನ ಹೊಸ ತಲೆಮಾರಿನ ಇ-ಕ್ಲಾಸ್ ಲಾಂಗ್ ವ್ಹೀಲ್ ಬೆಸ್ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.

Mercedes-Benz E-Class LWB: ಬಹುನೀರಿಕ್ಷಿತ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಎಲ್ ಬಿಡಬ್ಲ್ಯು ಅನಾವರಣ
ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಎಲ್ ಬಿಡಬ್ಲ್ಯು ಅನಾವರಣ
Praveen Sannamani
|

Updated on: Oct 22, 2023 | 4:29 PM

Share

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್-ಬೆಂಝ್ (Mercedes-Benz) ತನ್ನ ಬಹುನೀರಿಕ್ಷಿತ ಆರನೇ ತಲೆಮಾರಿನ ಇ-ಕ್ಲಾಸ್ ಲಾಂಗ್ ವ್ಹೀಲ್ ಬೆಸ್ (E-Class LWB) ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಭರ್ಜರಿ ಫೀಚರ್ಸ್ ನೊಂದಿಗೆ ಮತ್ತಷ್ಟು ಆರಾಮದಾಯಕ ಡ್ರೈವಿಂಗ್ ಅನುಭವ ನೀಡಲಿದೆ.

ಇ-ಕ್ಲಾಸ್ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿನ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಆರನೇ ತಲೆಮಾರಿನ ಇ-ಕ್ಲಾಸ್ ಲಾಂಗ್ ವ್ಹೀಲ್ ಬೆಸ್ ಸೆಡಾನ್ ಮಾದರಿಯನ್ನು ವಿ214 ಕೋಡ್ ನೇಮ್ ಪ್ಲೇಟ್ ನೊಂದಿಗೆ ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಉದ್ದಳತೆಯೊಂದಿಗೆ ಹಲವಾರು ಫೀಚರ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್..

ಹೊಸ ಇ-ಕ್ಲಾಸ್ ಲಾಂಗ್ ವ್ಹೀಲ್ ಬೆಸ್ ಆವೃತ್ತಿಯು 5,092 ಎಂಎಂ ಉದ್ದಳತೆಯೊಂದಿಗೆ 1,880 ಎಂಎಂ ಅಗಲ, 1,493 ಎಂಎಂ ಎತ್ತರ, 3,094 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನ ಹಿಂಬದಿ ಆಸನದಲ್ಲಿ ಓಟ್ಟೊಮನ್ ಕಾರ್ಯನಿರ್ವಹಣೆಯ ಪವರ್ಡ್ ರೀಕ್ಲೈನ್ ಸೌಲಭ್ಯವನ್ನು ಜೋಡಿಸಲಾಗಿದೆ. ಆದರೆ ಹೊಸ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿ ಎಎಂಜಿ ಆವೃತ್ತಿಯ ಬಿಡುಗಡೆಯ ಕುರಿತಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಹೊಸ ಕಾರಿನಲ್ಲಿ ಹವಲಾರು ಸ್ಪೋರ್ಟಿ ಫೀಚರ್ಸ್ ನೀಡಿದ್ದು, ಕಾರಿನ ಒಳಭಾಗದ ಸೌಲಭ್ಯ ಗಳು ಕೂಡಾ ಗಮನಸೆಳೆಯಲಿದೆ.

ಇ-ಕ್ಲಾಸ್ ಲಾಂಗ್ ವ್ಹೀಲ್ ಬೆಸ್ ಆವೃತ್ತಿಯನ್ನು ಮರ್ಸಿಡಿಸ್-ಬೆಂಝ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಚೀನಾದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಲಗ್ಗೆಯಿಡಲಿದೆ. ಹೊಸ ಕಾರು ಚೈನಾ ಮಾರುಕಟ್ಟೆಗಾಗಿ ವಿನೂತವಾಗಿರುವ ಅಭಿವೃದ್ದಿಗೊಂಡಿದ್ದು, ಸೂಪರ್ ಸ್ಕ್ರೀನ್ ಹೊಂದಿದೆ. ಹೊಸ ಕಾರಿನ ಒಳಭಾಗದಲ್ಲಿ ಸಿಂಗಲ್ ಫೀಸ್‌ ಹೊಂದಿರುವ 12.2 ಇಂಚಿನ ಇನ್ ಸ್ಟ್ರುಮೆಂಟ್‌ ಕ್ಲಸ್ಟರ್, 14.4 ಇಂಚಿನ ಇನ್ಪೋಟೈನ್ ಮೆಂಟ್ ಸೌಲಭ್ಯ ಹೊಂದಿದ್ದು, ಇವು ಹೆಚ್ಚಿನ ಸುರಕ್ಷತೆಯೊಂದಿಗೆ ಖಾತ್ರಿಪಡಿಸುತ್ತವೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಹಾಗೆಯೇ ಹೊಸ ಕಾರಿನಲ್ಲಿ ಪೆಟ್ರೋಲ್ ಆೃವೃತ್ತಿಯನ್ನು ಸಹ ಬಿಡುಗಡೆ ಮಾಡಬಹುದಾಗಿದ್ದು, ಶೀಘ್ರದಲ್ಲಿಯೇ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಬಹಿರಂಗವಾಗಲಿದೆ. ಹೊಸ ಕಾರಿನಲ್ಲಿ ಈ ಹಿಂದಿನ ಮಾದಲ್ಲಿರುವಂತೆ 1.4 ಲೀಟರ್ ಮತ್ತು 2.0 ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹೊಸ ಆವೃತ್ತಿಯ ಹೆಚ್ಚು ಶಕ್ತಿ ಶಾಲಿಯಾಗಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿವೆ.