Hyundai Verna: ಬಹುನೀರಿಕ್ಷಿತ 2023ರ ಹ್ಯುಂಡೈ ವೆರ್ನಾ ಸೆಡಾನ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ವೆರ್ನಾ ಸೆಡಾನ್ ಹೊಸ ತಲೆಮಾರಿನ ಆವೃತ್ತಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Hyundai Verna: ಬಹುನೀರಿಕ್ಷಿತ 2023ರ ಹ್ಯುಂಡೈ ವೆರ್ನಾ ಸೆಡಾನ್ ಬಿಡುಗಡೆ
2023ರ ಹ್ಯುಂಡೈ ವೆರ್ನಾ ಸೆಡಾನ್ ಬಿಡುಗಡೆ
Follow us
|

Updated on:Mar 21, 2023 | 3:50 PM

ಮಧ್ಯಮ ಕ್ರಮಾಂಕದ ಕಾರು ಮಾದರಿಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಹ್ಯುಂಡೈ ಇಂಡಿಯಾ(Hyundai India) ಕಂಪನಿ ತನ್ನ ಹೊಸ ತಲೆಮಾರಿನ ವೆರ್ನಾ(Verna) ಸೆಡಾನ್ ಮಾದರಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಬಲಿಷ್ಠ ಎಂಜಿನ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವೆರಿಯೆಂಟ್ ಗಳು ಮತ್ತು ಬೆಲೆ

ಹೊಸ ವೆರ್ನಾ ಕಾರು ಮಾದರಿಯು ಇಎಕ್ಸ್, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯು ರೂ. 17.38 ಲಕ್ಷ ಬೆಲೆ ಹೊಂದಿದ್ದು, ಪ್ರಮುಖ ಎರಡು ಎಂಜಿನ್ ಆಯ್ಕೆ ಹೊಂದಿದೆ.

Hyundai Verna (1)

ಎಂಜಿನ್ ಮತ್ತು ಪರ್ಫಾಮೆನ್ಸ್

ವೆರ್ನಾ ಹೊಸ ಆವೃತ್ತಿಯಲ್ಲಿ ಹ್ಯುಂಡೈ ಕಂಪನಿ ಈ ಬಾರಿ ಡೀಸೆಲ್ ಎಂಜಿನ್ ಆಯ್ಕೆಯನ್ನ ಸ್ಥಗಿತಗೊಳಿಸಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡ ಪೂರೈಸಿರುವ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನ ನೀಡಲಾಗಿದೆ.

ಹೊಸ ಕಾರಿನ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದು 115 ಹಾರ್ಸ್ ಪವರ್ ಮತ್ತು 144 ಎನ್ಎಂ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗರಿಷ್ಠ 19.6 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದು 160 ಹಾರ್ಸ್ ಪವರ್ ಮತ್ತು 253 ಎನ್ಎಂ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗರಿಷ್ಠ 20.6 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ವೆರ್ನಾ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಉದ್ದಳತೆ ಹೊಂದಿದ್ದು, ಪ್ರತಿ ಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಬೂಟ್ ಸ್ಪೆಸ್ ಪಡೆದುಕೊಂಡಿದೆ. ಹೊಸ ಕಾರು ಒಟ್ಟು 4,535 ಎಂಎಂ ಉದ್ದಳತೆಯೊಂದಿಗೆ 2,670 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, 528 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ. ಇದರೊಂದಿಗೆ ಹೊಸ ಸೆಡಾನ್ ಕಾರು ಸ್ಪೋರ್ಟಿ ಲುಕ್ ಹೊಂದಿರುವ ಮುಂಭಾಗದ ವಿನ್ಯಾಸದೊಂದಿಗೆ ಎಲ್ಇಡಿ ಸೆಟಪ್ ಹೊಂದಿದ್ದು, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಬ್ಲೂಟೂಥ್ ಕನೆಕ್ಟಿವಿಟಿ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸನ್ ರೂಫ್, ವೆಂಟಿಲೆಟೆಡ್ ಸೀಟ್, ಬಿಡ್ಜ್ ಬ್ಲ್ಯಾಕ್ ಇಂಟಿರಿಯರ್ ಮತ್ತು ಸಾಫ್ಟ್ ಟಚ್ ಮೆಟಿರಿಯಲ್ ಗಳು ಹೊಸ ಕಾರಿಗೆ ಐಷಾರಾಮಿ ಲುಕ್ ನೀಡಿವೆ.

Hyundai Verna (2)

ಸುರಕ್ಷಾ ಸೌಲಭ್ಯ ಮತ್ತು ವಾರಂಟಿ

ವೆರ್ನಾ ಹೊಸ ಆವೃತ್ತಿಯಲ್ಲಿ ಹ್ಯುಂಡೈ ಕಂಪನಿ ಈ ಬಾರಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನ ಜೋಡಣೆ ಮಾಡಿದ್ದು, ಆರು ಏರ್ ಬ್ಯಾಗ್, ಇಬಿಡಿ ಸೌಲಭ್ಯಗಳನ್ನ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಹಾಗೆಯೇ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಇದು ಫ್ರಂಟ್ ಅಂಡ್ ರಿಯರ್ ಕ್ಯಾಮೆರಾ ಮತ್ತು ರಡಾರ್ ಸೌಲಭ್ಯದೊಂದಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಇನ್ನು ಹೊಸ ಕಾರು ಖರೀದಿಯ ಮೇಲೆ ಹ್ಯುಂಡೈ ಕಂಪನಿಯು 3 ವರ್ಷ ಅಥವಾ ಅನ್ ಲಿಮಿಟೆಡ್ ಕಿ.ಮೀ ಮೇಲೆ ವಾರಂಟಿ ನೀಡುತ್ತಿದ್ದು, ಹೊಸ ಕಾರಿನ ವಿತರಣೆಯು ಇದೇ ತಿಂಗಳಾಂತ್ಯಕ್ಕೆ ಚಾಲನೆ ಪಡೆದುಕೊಳ್ಳಲಿದೆ.

Published On - 3:50 pm, Tue, 21 March 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ