ಭರ್ಜರಿ ಮೈಲೇಜ್ ಜೊತೆ ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಓಕಿ-90 ಇವಿ ಸ್ಕೂಟರ್ ಬಿಡುಗಡೆ
ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯು ತನ್ನ ಜನಪ್ರಿಯ ಒಕಿ-90 ಇವಿ ಸ್ಕೂಟರ್ ಮಾದರಿಯನ್ನು ನವೀಕೃತ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡಿದೆ.
ಎಲೆಕ್ಟ್ರಿಕ್ ಸ್ಕೂಟರ್(Electric Scooters) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಒಕಿನಾವ(Okinawa) ಕಂಪನಿಯು ಒಕಿ-90(Okhi-90) ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 1.86 ಲಕ್ಷ ಬೆಲೆ ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಹೊಸ ಇವಿ ಸ್ಕೂಟರ್ ಗಳು ಬಿಡುಗಡೆಯಾಗುತ್ತಿರುವುದರಿಂದ ಒಕಿನಾವ ಕಂಪನಿಯು ಸಹ ಇದೀಗ ಒಕಿ 90 ನವೀಕೃತ ಮಾದರಿಯನ್ನು ಪರಿಚಯಿಸಿದ್ದು, ಹೊಸ ಮಾದರಿಯು ಹಲವಾರು ಸುಧಾರಿತ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಹೊಸ ಒಕಿ 90 ವಿಶೇಷತೆಗಳೇನು? ಒಕಿನಾವ ಕಂಪನಿಯು ಹೊಸ ಒಕಿ-90 ಇವಿ ಸ್ಕೂಟರ್ ಮಾದರಿಯನ್ನು ಬೆಲೆ ಹೆಚ್ಚಳದೊಂದಿಗೆ ಹಲವಾರು ಹೊಸ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಸುಮಾರು ರೂ. 50 ಸಾವಿರದಷ್ಟು ದುಬಾರಿಯಾಗಿದೆ. ಆದರೆ ದುಬಾರಿ ಬೆಲೆಗೆ ತಕ್ಕಂತೆ ಹೊಸ ಇವಿ ಸ್ಕೂಟರ್ ನಲ್ಲಿ ಹಲವಾರು ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಬ್ಯಾಟರಿ ಪ್ಯಾಕ್ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಅಭಿವೃದ್ದಿಗೊಂಡಿದೆ.
ಇದನ್ನೂ ಓದಿ: ರೂ. 3 ಲಕ್ಷಕ್ಕೆ ಲಭ್ಯ ಬೆಸ್ಟ್ ಮಾರ್ಡನ್ ಕ್ಲಾಸಿಕ್ ಬೈಕ್ ಗಳಿವು..
ಹೊಸ ಇವಿ ಸ್ಕೂಟರ್ ಗಳನ್ನು ಒಕಿನಾವ ಕಂಪನಿಯು ಇಟಲಿ ಮೂಲದ ಟಾಸಿಟಾ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಪಡಿಸುತ್ತಿದ್ದು, ಹೊಸ ಒಕಿ-90 ಇವಿ ಸ್ಕೂಟರ್ ನಲ್ಲಿ ಫ್ರಂಟ್ ಹೈಡ್ರಾಲಿಕ್ ಹಾಗೂ ರಿಯರ್ ಡ್ಯುಯಲ್ ಸಸ್ಪೆನ್ಷನ್ ಸೆಟಪ್ ನೀಡಲಾಗಿದೆ. ಜೊತೆಗೆ ಹೊಸ ಸ್ಕೂಟರ್ ನಲ್ಲಿ ಎಲೆಕ್ಟ್ರಾನಿಕ್- ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಇದರಲ್ಲಿ IP67 ಮಾನದಂಡಗಳನ್ನು ಒಳಗೊಂಡ 2.0 ಕೆವಿಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ನೀಡಲಾಗಿದೆ.
ನವೀಕೃತ 2.0 ಕೆವಿಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್ ಗೆ ಗರಿಷ್ಠ 160 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಪ್ರತಿ ಗಂಟೆ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಇದರಲ್ಲಿರುವ ಹೊಸ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 4 ರಿಂದ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಇದು ಈ ಸೆಗ್ಮೆಂಟ್ ನಲ್ಲಿಯೇ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.
ಜೊತೆಗೆ ನವೀಕೃತ ಇವಿ ಸ್ಕೂಟರ್ ನಲ್ಲಿ ನ್ಯೂ ಎನ್‌ಕೋಡರ್ ಬೇಸ್ಡ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಡಿಜಿಟಲ್ ಸ್ಪೀಡೋ ಮೀಟರ್, ಆಂಟಿ ಥೆಫ್ಟ್ ಅಲಾರಾಂ, ಜಿಪಿಎಸ್ ನ್ಯಾವಿಗೇಷನ್ ಹಾಗೂ ಬ್ಲೂಟೂಥ್ ಕನೆಕ್ಟಿವಿಟಿ ಜೋಡಿಸಲಾಗಿದ್ದು, ರೆಡ್, ಬ್ಲೂ, ಗ್ರೇ ಹಾಗೂ ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಇನ್ನು ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ಎಂಟು ವರ್ಷಗಳ ಅವಧಿಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಒಕಿನಾವ ಕಂಪನಿ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಯೋಜನೆಗೆ ಪೂರಕವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ರಾಜಸ್ತಾನದ ಗಡಿಭಾಗದಲ್ಲಿರುವ ಭಿವಾಡಿಯಲ್ಲಿನ ಉತ್ಪಾದನಾ ಘಟಕವನ್ನು ವಿಸ್ತರಿಸಿದೆ. ವಿಸ್ತರಿತ ವಾಹನ ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 1.80 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಉತ್ಪಾದನೆಗೊಳಿಸಲು ಯೋಜಿಸಿರುವ ಒಕಿನಾವ ಕಂಪನಿಯು ಹೊಸ ಘಟಕದ ನಿರ್ಮಾಣಕ್ಕಾಗಿ ಬರೋಬ್ಬರಿ ರೂ. 150 ಕೋಟಿ ಹೂಡಿಕೆ ಮಾಡಿದೆ.
Published On - 7:26 pm, Wed, 19 July 23