Ola Scooter: ಓಲಾದಿಂದ ಬಂತು ಮತ್ತೊಂದು ಹೊಸ ಸ್ಕೂಟರ್: ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ. ಪ್ರಯಾಣ
ಓಲಾ ಕಂಪನಿಯು ಈ ಸರಣಿಗೆ S1 X, S1 X+, S1 Pro ಮತ್ತು S1 Pro+ ಗಳನ್ನು ಸೇರಿಸಿದೆ. ಕಂಪನಿಯು ತನ್ನ ಪೋರ್ಟ್‌ಫೋಲಿಯೊಗೆ ಪ್ಲಸ್ ರೂಪಾಂತರವನ್ನು ಸೇರಿಸುತ್ತಿರುವುದು ಇದೇ ಮೊದಲು. ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 2 kWh ಬ್ಯಾಟರಿ ಪ್ಯಾಕ್‌ನಿಂದ 5.3 kWh ಬ್ಯಾಟರಿ ಪ್ಯಾಕ್‌ವರೆಗಿನ ವಿವಿಧ ಆಯ್ಕೆಗಳೊಂದಿಗೆ ಖರೀದಿಸಬಹುದು.

ಓಲಾ ಎಲೆಕ್ಟ್ರಿಕ್ ತನ್ನ ಹೊಸ ಮೂರನೇ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿತು. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮಧ್ಯೆ, ಕಂಪನಿಯು ಹೊಸ ಶ್ರೇಣಿಯ ಶಕ್ತಿಶಾಲಿ ಸ್ಕೂಟರ್ ಮಾದರಿಗಳನ್ನು ಅನಾವರಣ ಮಾಡಿದೆ. ಕಂಪನಿಯು ಈ ಪೋರ್ಟ್‌ಫೋಲಿಯೊದಲ್ಲಿ ಒಟ್ಟು ನಾಲ್ಕು ರೂಪಾಂತರಗಳನ್ನು ಹೊಂದಿದೆ. ಇದರ ಆರಂಭಿಕ ಬೆಲೆ ರೂ. 79,999 ಆಗಿದೆ. ಇದರೊಂದಿಗೆ, ಓಲಾ ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ S1 ಪ್ರೊ ಪ್ಲಸ್ ಅನ್ನು ಸಹ ಬಿಡುಗಡೆ ಮಾಡಿತು. ಇದು ಚಾಲನಾ ಶ್ರೇಣಿಯ ವಿಷಯದಲ್ಲಿ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಪ್ರಮುಖ ಮಾದರಿಯು ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ. ವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಬಿಡುಗಡೆಯ ಕುರಿತು ಮಾತನಾಡಿದ ಕಂಪನಿಯ ಮಾಲೀಕ ಭವಿಶ್ ಅಗರ್ವಾಲ್, ಹೊಸದಾಗಿ ಬಿಡುಗಡೆಯಾದ ಮೂರನೇ ತಲೆಮಾರಿನ ಸ್ಕೂಟರ್ ಅನ್ನು ಹಲವಾರು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದ್ದೇವೆ ಎಂದು ಹೇಳಿದರು.
ಹೊಸದೇನಿದೆ?:
ಕಂಪನಿಯು ಈ ಸರಣಿಗೆ S1 X, S1 X+, S1 Pro ಮತ್ತು S1 Pro+ ಗಳನ್ನು ಸೇರಿಸಿದೆ. ಕಂಪನಿಯು ತನ್ನ ಪೋರ್ಟ್‌ಫೋಲಿಯೊಗೆ ಪ್ಲಸ್ ರೂಪಾಂತರವನ್ನು ಸೇರಿಸುತ್ತಿರುವುದು ಇದೇ ಮೊದಲು. ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 2 kWh ಬ್ಯಾಟರಿ ಪ್ಯಾಕ್‌ನಿಂದ 5.3 kWh ಬ್ಯಾಟರಿ ಪ್ಯಾಕ್‌ವರೆಗಿನ ವಿವಿಧ ಆಯ್ಕೆಗಳೊಂದಿಗೆ ಖರೀದಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ, ಕಂಪನಿಯು ಜೆನ್ 3 ರಲ್ಲಿನ ಹೊಸ ‘ಬ್ರೇಕ್ ಬೈ ವೈರ್’ ತಂತ್ರಜ್ಞಾನದಿಂದಾಗಿ ಸ್ಕೂಟರ್‌ನಿಂದ ಬಹಳಷ್ಟು ವೈರಿಂಗ್ ಅನ್ನು ತೆಗೆದುಹಾಕಿದೆ. ಇದರೊಂದಿಗೆ, ಹಳೆಯ ಪೀಳಿಗೆಗೆ ಹೋಲಿಸಿದರೆ 3 ನೇ ತಲೆಮಾರಿನ ವ್ಯಾಪ್ತಿಯು ಗಮನಾರ್ಹವಾಗಿ ಹೆಚ್ಚಾಗಿದೆ.
S1 X (ಜನರೇಷನ್ 3)
ನೀವು 3 ಬ್ಯಾಟರಿ ಪ್ಯಾಕ್‌ಗಳನ್ನು ಖರೀದಿಸಬಹುದು: 2 kW, 3 kW, 4 kW.
ಗರಿಷ್ಠ ವೇಗ ಗಂಟೆಗೆ 123 ಕಿಲೋಮೀಟರ್.
ವ್ಯಾಪ್ತಿ- 242 ಕಿ.ಮೀ.
ಬೆಲೆ- 2 kWh ಬ್ಯಾಟರಿ ಪ್ಯಾಕ್ ಎಕ್ಸ್ ಶೋ ರೂಂ ಬೆಲೆ ರೂ. 79,999. 3 kWh ಬ್ಯಾಟರಿ ಪ್ಯಾಕ್ ರೂ. 89,999 ಹಾಗೂ 4 kWh ಬ್ಯಾಟರಿ ಪ್ಯಾಕ್ ರೂ. 99,999 ಆಗಿದೆ.
TATA Cars Offer: ಟಾಟಾ ಮೋಟಾರ್ಸ್ ಕಾರುಗಳ ಮೇಲೆ ಬಂಪರ್ ರಿಯಾಯಿತಿ: ಎಷ್ಟು?, ಇಲ್ಲಿದೆ ಡಿಟೇಲ್ಸ್
S1 X+ (ಜನರೇಷನ್ 3):
1 ಬ್ಯಾಟರಿ ಪ್ಯಾಕ್- 4 ಕಿ.ವ್ಯಾ.
ಗರಿಷ್ಠ ವೇಗ ಗಂಟೆಗೆ 125 ಕಿ.ಮೀ.
ವ್ಯಾಪ್ತಿ- 242 ಕಿ.ಮೀ.
ಬೆಲೆ – ರೂ. 1,07,999
ಎಸ್1 ಪ್ರೊ (ಜನರೇಷನ್ 3):
2 ಬ್ಯಾಟರಿ ಪ್ಯಾಕ್‌ಗಳು – 3 kW, 4 kW
ಗರಿಷ್ಠ ವೇಗ ಗಂಟೆಗೆ 125 ಕಿ.ಮೀ.
ವ್ಯಾಪ್ತಿ – 242 ಕಿ.ಮೀ.
ಬೆಲೆ – 3 kW ಎಕ್ಸ್ ಶೋ ರೂಂ ಬೆಲೆ ರೂ. 1,14,999, 4 kW ಬ್ಯಾಟರಿ ಪ್ಯಾಕ್ ಬೆಲೆ ರೂ. 1,34,999
S1 ಪ್ರೊ+ (ಜನರೇಷನ್ 3):
2 ಬ್ಯಾಟರಿ ಪ್ಯಾಕ್‌ಗಳು – 4 kW, 5.3 kW
ಗರಿಷ್ಠ ವೇಗ ಗಂಟೆಗೆ 141 ಕಿ.ಮೀ.
ವ್ಯಾಪ್ತಿ 320 ಕಿ.ಮೀ.
ಬೆಲೆ – 4 kW ಬ್ಯಾಟರಿ ಪ್ಯಾಕ್ ಎಕ್ಸ್ ಶೋ ರೂಂ ಬೆಲೆ ರೂ. 1,54,999, 5.3 kW ಬ್ಯಾಟರಿ ಪ್ಯಾಕ್ ಬೆಲೆ ರೂ. 1,69,999 ಆಗಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




