Renault: ರೆನಾಲ್ಟ್ ಕಾರು ಖರೀದಿಯ ಮೇಲೆ ಭರ್ಜರಿ ಇಯರ್ ಎಂಡ್ ಆಫರ್
ಹೊಸ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ಗಳನ್ನು ಘೋಷಣೆ ಮಾಡಿದೆ.
ಹೊಸ ತಲೆಮಾರಿನ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್(Renault) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಕ್ಯಾಶ್ ಬ್ಯಾಕ್, ಕಾರ್ಪೊರೇಟ್, ಎಕ್ಸ್ ಚೆಂಜ್ ಮತ್ತು ಸ್ಕಾರ್ಪೇಜ್ ನೀತಿ ಅಡಿಯಲ್ಲೂ ವಿವಿಧ ಆಫರ್ ಗಳನ್ನು ನೀಡುತ್ತಿದೆ.
ವರ್ಷಾಂತ್ಯದಲ್ಲಿ ಹೊಸ ಆಫರ್ ಗಳ ಮೂಲಕ ಉತ್ತಮ ಗ್ರಾಹಕರ ಬೇಡಿಕೆಯ ನೀರಿಕ್ಷೆಯಲ್ಲಿರುವ ಪ್ರಮುಖ ಕಾರು ಕಂಪನಿಗಳು ಡಿಸೆಂಬರ್ ಅವಧಿಗಾಗಿ ಅತ್ಯುತ್ತಮ ಆಫರ್ ಗಳನ್ನು ನೀಡುತ್ತಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಗಳನ್ನು ನೀಡುತ್ತಿದೆ. ಹಾಗಾದ್ರೆ ಯಾವ ಕಾರಿನ ಮೇಲೆ ಎಷ್ಟು ಆಫರ್ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
ರೆನಾಲ್ಟ್ ಕಂಪನಿಯು ಹೊಸ ಕಾರುಗಳ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 45 ಸಾವಿರದಿಂದ ರೂ. 60 ಸಾವಿರ ತನಕ ಆಫರ್ ನೀಡುತ್ತಿದ್ದು, ಕ್ವಿಡ್ ಕಾರಿನ ಮೇಲೆ ಕಡಿಮೆ ಆಫರ್ ಲಭ್ಯವಿದ್ದರೆ ಟ್ರೈಬರ್ ಕಾರಿನ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ.
ಕ್ವಿಡ್ ಮೈಕ್ರೊ ಎಸ್ ಯುವಿ
ಹ್ಯಾಚ್ ಬ್ಯಾಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕ್ವಿಡ್ ಕಾರು ಮಾದರಿಯು ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಹೊಸ ಕಾರು ಖರೀದಿಯ ಮೇಲೆ ಕಂಪನಿಯು ರೂ. 45 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 15 ಸಾವಿರದಷ್ಟು ಎಕ್ಸ್ ಚೆಂಜ್, ರೂ. 10 ಸಾವಿರ ಕ್ಯಾಶ್ ಬ್ಯಾಕ್, ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಹಳೆಯ ಕಾರುಗಳನ್ನು ಸ್ಕಾರ್ಪೇಜ್ ನೀತಿಯಡಿ ಗುಜುರಿಗೆ ಹಾಕುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 10 ಸಾವಿರ ಬೋನಸ್ ನೀಡಲಿದೆ.
ಕೈಗರ್ ಕಂಪ್ಯಾಕ್ಟ್ ಎಸ್ ಯುವಿ
ರೆನಾಲ್ಟ್ ಕಂಪನಿಯು ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಹೊಸ ಕಾರು ಖರೀದಿಯ ಮೇಲೆ ರೂ. 45 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 15 ಸಾವಿರದಷ್ಟು ಎಕ್ಸ್ ಚೆಂಜ್, ರೂ. 10 ಸಾವಿರ ಕ್ಯಾಶ್ ಬ್ಯಾಕ್, ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಹಳೆಯ ಕಾರುಗಳನ್ನು ಸ್ಕಾರ್ಪೇಜ್ ನೀತಿಯಡಿ ಗುಜುರಿಗೆ ಹಾಕುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 10 ಸಾವಿರ ಬೋನಸ್ ನೀಡಲಿದೆ. ಇದರೊಂದಿಗೆ ಟ್ರೈಬರ್ ಪ್ರಮುಖ ವೆರಿಯೆಂಟ್ ಗಳ ಮೇಲೆ 2 ವರ್ಷಗಳ ವಿಸ್ತರಿತ ವಾರಂಟಿ ಸಹ ನೀಡಲಾಗುತ್ತಿದೆ.
ಟ್ರೈಬರ್ ಮಿನಿ ಎಂಪಿವಿ
ಹೊಸ ಆಫರ್ ಗಳಲ್ಲಿ ರೆನಾಲ್ಟ್ ಕಂಪನಿಯು ಟ್ರೈಬರ್ ಮಿನಿ ಎಂಪಿವಿ ಕಾರು ಖರೀದಿಯ ಮೇಲೆ ರೂ. 45 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 25 ಸಾವಿರದಷ್ಟು ಎಕ್ಸ್ ಚೆಂಜ್ ಆಫರ್, ರೂ. 15 ಸಾವಿರ ಕ್ಯಾಶ್ ಬ್ಯಾಕ್, ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಹಳೆಯ ಕಾರುಗಳನ್ನು ಸ್ಕಾರ್ಪೇಜ್ ನೀತಿಯಡಿ ಗುಜುರಿಗೆ ಹಾಕುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 10 ಸಾವಿರ ಬೋನಸ್ ನೀಡಲಿದೆ.
Published On - 12:15 pm, Fri, 9 December 22