Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಧಾರಿತ ತಂತ್ರಜ್ಞಾನ ಪ್ರೇರಿತ ಟಾಟಾ ಹಿಟಾಚಿ ಜಾಕ್ಸಿಸ್ 38ಯು ಬಿಡುಗಡೆ

ಟಾಟಾ ಹಿಟಾಚಿ ಕಂಪನಿಯು ತನ್ನ ಸುಧಾರಿತ ತಂತ್ರಜ್ಞಾನ ಪ್ರೇರಿತ ಜಾಕ್ಸಿಸ್ 38ಯು ಬಿಡುಗಡೆ ಮಾಡಿದ್ದು, ಇದು ನಿರ್ಮಾಣ ಉದ್ಯಮದಲ್ಲಿ ವಿಕಸನದ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಲಿದೆ.

ಸುಧಾರಿತ ತಂತ್ರಜ್ಞಾನ ಪ್ರೇರಿತ ಟಾಟಾ ಹಿಟಾಚಿ ಜಾಕ್ಸಿಸ್ 38ಯು ಬಿಡುಗಡೆ
ಟಾಟಾ ಹಿಟಾಚಿ ಜಾಕ್ಸಿಸ್ 38ಯು
Follow us
Praveen Sannamani
|

Updated on: Sep 04, 2024 | 9:13 PM

ನಿರ್ಮಾಣ ಉದ್ಯಮದಲ್ಲಿ ವಿಕಸನದ ಅಗತ್ಯತೆಗಳನ್ನು ಪೂರೈಸಲು ಟಾಟಾ ಹಿಟಾಚಿ ಕಂಪನಿಯು ತನ್ನ ಸುಧಾರಿತ ತಂತ್ರಜ್ಞಾನ ಪ್ರೇರಿತ ಮಿನಿ ಎಕ್ಸ್‌ಕಾವೇಟರ್ ಜಾಕ್ಸಿಸ್ 38ಯು ಬಿಡುಗಡೆ ಮಾಡಿದ್ದು, ಇದು ಸಾಟಿಯಿಲ್ಲದ ಕಾರ್ಯಕ್ಷಮತೆ, ದಕ್ಷತೆ ಮತ್ತು ಬಾಳಿಕೆಯನ್ನು ದೃಡಪಡಿಸುತ್ತದೆ. ಇದು ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಆಯ್ಕೆಯಾಗಿದ್ದು, ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಶಾರ್ಟ್ ಟೈಲ್ ಸ್ವಿಂಗ್ ತ್ರಿಜ್ಯದೊಂದಿಗೆ ನಿರ್ಮಾಣಗೊಂಡಿದೆ.

ಕಾಂಪ್ಯಾಕ್ಟ್ ವಿನ್ಯಾಸದಿಂದಾಗಿ ನಿರ್ಮಾಣ ಉದ್ಯಮದಲ್ಲಿನ ಜಾಕ್ಸಿಸ್ 38ಯು ಮಾದರಿಯನ್ನು ಕಠಿಣ ಸ್ಥಳಗಳಲ್ಲೂ ಸುಲಭ ಕಾರ್ಯಾಚರಣೆಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಇದು ನಗರ ನಿರ್ಮಾಣ, ಭೂಮಿ ಸಮತಟ್ಟ ಮಾಡಲು ಮತ್ತು ಇತರೆ ಉಪಯುಕ್ತಕ ನಿರ್ಮಾಣ ಕಾಮಗಾರಿಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

3.5-ಟನ್ ತೂಕದ ಜಾಕ್ಸಿಸ್ 38ಯು ಮಾದರಿಯ ಕಾರ್ಯಕ್ಷಮತೆ ಹೆಚ್ಚಳಕ್ಕಾಗಿ ಟಾಟಾ ಹಿಟಾಚಿ ಕಂಪನಿಯು ಜಪಾನೀಸ್ ತಂತ್ರಜ್ಞಾನ ಪ್ರೇರಿತ ಎಂಜಿನ್‌ ಆಯ್ಕೆ ನೀಡಿದ್ದು, ಇದು ಉನ್ನತ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಹಾಗೆಯೇ ಹೊಸ ವಾಹನದಲ್ಲಿರುವ ಸುಧಾರಿತ ಹೈಡ್ರಾಲಿಕ್ ಸಿಸ್ಟಂನಿಂದಾಗಿ ಸುಗಮ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಖಾತ್ರಿಗೊಳಿಸುತ್ತದೆ. ಈ ಮೂಲಕ ಇದು ಕೆಲಸದ ಸ್ಥಳದಲ್ಲಿನ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಿ ಆದಾಯ ಪ್ರಮಾಣವನ್ನು ಸುಧಾರಿಸುತ್ತದೆ.

ಜೊತೆಗೆ ಮಿನಿ ಎಕ್ಸ್‌ಕಾವೇಟರ್ ನಲ್ಲಿ ಟಾಟಾ ಹಿಟಾಚಿ ಕಂಪನಿಯು ಆಪರೇಟರ್ಸ್ ಸೌಕರ್ಯಗಳು ಮತ್ತು ಸುರಕ್ಷತೆಗೆ ಬಲವಾದ ಒತ್ತು ನೀಡಿದ್ದು, ಸುಧಾರಿತ ದಕ್ಷತಾಶಾಸ್ತ್ರದ ನಿಯಂತ್ರಣಗಳೊಂದಿಗೆ ವಿಶಾಲವಾದ ಮೇಲಾವರಣವನ್ನು ನೀಡಲಾಗಿದೆ. ಇದು ದೀರ್ಘ ಕೆಲಸದ ಸಮಯದಲ್ಲಿ ಆಪರೇಟರ್ ಗಳ ಆಯಾಸವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸಲಿದ್ದು, ಸುರಕ್ಷತೆಗಾಗಿ ರಿಯರ್ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಸುರಕ್ಷಾ ಫೀಚರ್ಸ್ ಗಳನ್ನು ನೀಡಲಾಗಿದೆ.

ಇನ್ನು ಹೊಸ ಜಾಕ್ಸಿಸ್ 38ಯು ಮಾದರಿಯಲ್ಲಿ ಇಂಧನ ದಕ್ಷತೆಯನ್ನು ಸುಧಾರಿಸಲು ಇತ್ತೀಚೆಗೆ ಜಾರಿಗೆ ಬಂದಿರುವ ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸುವ ಎಂಜಿನ್ ನೀಡಲಾಗಿದ್ದು, ಪರಿಸರದ ಮೇಲಿನ ಪ್ರಭಾವವನ್ನು ಕಡಿಮೆ ಮಾಡಲು ಇದು ಸಾಕಷ್ಟ ಸಹಕಾರಿಯಾಗಲಿದೆ. ಈ ಕುರಿತಾಗಿ ಮಾತನಾಡಿರುವ ಟಾಟಾ ಹಿಟಾಚಿ ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಸಿದ್ಧಾರ್ಥ್ ಚತುರ್ವೇದಿ ಅವರು ಹೊಸ ತಲೆಮಾರಿನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಉತ್ಪನ್ನವು ನವೀನ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ತಲುಪಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.