Upcoming Electric Scooters: ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಇವಿ ಸ್ಕೂಟರ್ ಗಳಿವು!
ಭಾರತದಲ್ಲಿ ಇವಿ ವಾಹನಗಳ ಮಾರಾಟ ತೀವ್ರವಾಗಿ ಬೆಳವಣಿಗೆ ಕಾಣುತ್ತಿದ್ದು, ಪ್ರಮುಖ ವಾಹನ ಉತ್ಪಾದನಾ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿವೆ.
ಎಲೆಕ್ಟ್ರಿಕ್ ವಾಹನಗಳ(Electric Vehicles) ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್ ಗಳಿಗೆ(Electric Scooters) ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರಮುಖ ಕಂಪನಿಗಳ ಹಲವು ಹೊಸ ಇವಿ ಸ್ಕೂಟರ್ ಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಳ್ಳುತ್ತಿವೆ. ಹೊಸ ಇವಿ ಸ್ಕೂಟರ್ ಗಳು ಈ ಬಾರಿ ಪ್ರಮುಖ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಿಂದ ಬಿಡುಗಡೆಯಾಗುತ್ತಿದ್ದು, ಹೊಸ ಇವಿ ಸ್ಕೂಟರ್ ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿಂಪಲ್ ಒನ್
ಸಿಂಪಲ್ ಎನರ್ಜಿ ಕಂಪನಿಯು ತನ್ನ ಹೊಸ ಸಿಂಪಲ್ ಒನ್ ಇವಿ ಮಾದರಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ವಿತರಣೆಯನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ಹೊಸ ಇವಿ ಸ್ಕೂಟರ್ ಬಿಡುಗಡೆಗಾಗಿ ಈಗಾಗಲೇ ಭಾರೀ ಪ್ರಮಾಣ ಹೂಡಿಕೆಯೊಂದಿಗೆ ಉತ್ಪಾದನೆ ಆರಂಭಿಸಲಾಗಿದ್ದು, ಹೊಸ ಸಿಂಪಲ್ ಒನ್ ಮುಂಬರುವ ಜನವರಿಯಲ್ಲಿ ವಿತರಣೆಯಾಗಬಹುದಾಗಿದೆ. ಹೊಸ ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಹೊಂದಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೊಸ ಇವಿ ಸ್ಕೂಟರ್ ಮಾದರಿಗೆ ರೂ. 1.44 ಲಕ್ಷ ಪಾವತಿಸಬೇಕಾಗುತ್ತದೆ. ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ನಲ್ಲಿ 4.8 kWh ಬ್ಯಾಟರಿ ಹೊಂದಿದ್ದು, ಇದು 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ. ಇದರಲ್ಲಿ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ಹಿಂದಿರುಗಿಸುತ್ತದೆ.
ಇದನ್ನೂ ಓದಿ: ಪ್ರತಿ ಚಾರ್ಜ್‌ಗೆ 307 ಕಿ.ಮೀ ಮೈಲೇಜ್ ನೀಡುವ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಬಿಡುಗಡೆ
ಎಲ್ಎಂಎಲ್ ಸ್ಟಾರ್
ಲೋಹಿಯಾ ಮೋಟಾರ್ಸ್ ಲಿಮಿಟೆಡ್(LML) ಕಂಪನಿಯು ಶೀಘ್ರದಲ್ಲಿಯೇ ಪ್ರಮುಖ ಎರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಯೋಜನೆ ಅಡಿ ಮೊದಲ ಹಂತದಲ್ಲಿ ಕಂಪನಿಯು ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಮುಂದಾಗಿದ್ದು, ಹೊಸ ಸ್ಕೂಟರ್ ಮಾದರಿಗಾಗಿ ಇದೀಗ ಕಂಪನಿಯು ಅಧಿಕೃತ ಬುಕಿಂಗ್ ಆರಂಭಿಸಿದೆ. ಹೊಸ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಕಂಪನಿಯು ತನ್ನ ಹಳೆಯ ಸ್ಟಾರ್ ಪೆಟ್ರೋಲ್ ಮಾದರಿಯ ಹೆಸರನ್ನು ಇದೀಗ ಇವಿ ಸ್ಕೂಟರ್ ಮಾದರಿಗಾಗಿ ಬಳಕೆ ಮಾಡುತ್ತಿದ್ದು, ಮ್ಯಾಕ್ಸಿ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಯು ಸ್ಪೋರ್ಟಿ ಎಡ್ಜ್ ಜೊತೆಗೆ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರಲಿದೆ. ಹೊಸ ಸ್ಕೂಟರಿನ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕುರಿತಾಗಿ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.
ಹಸ್ಕ್‌ವರ್ನಾ ವೆಕ್ಟೋರ್
ಹಸ್ಕ್‌ವರ್ನಾ ಕಂಪನಿಯು ತನ್ನ ಬಹುನೀರಿಕ್ಷಿತ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಿದ್ದು, ಇ-01 ಕಾನ್ಸೆಪ್ಟ್ ಮಾದರಿಯನ್ನೇ ಕಂಪನಿಯು ಇದೀಗ ವೆಕ್ಟೋರ್ ಹೆಸರಿನೊಂದಿಗೆ ಮಾರುಕಟ್ಟೆ ಪರಿಚಯಿಸುತ್ತಿದೆ. ಹೊಸ ಇವಿ ಸ್ಕೂಟರ್ ಸ್ವೀಡಿಷ್ ಡಿಸೈನ್ ಹೊಂದಿದ್ದರೂ ಬಹುತೇಕ ತಾಂತ್ರಿಕ ಅಂಶಗಳನ್ನು ಬಜಾಜ್ ಚೇತಕ್ ಇವಿ ಮಾದರಿಯೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹಸ್ಕ್‌ವರ್ನಾ ಕಂಪನಿಯು ಹೊಸ ಇವಿ ಸ್ಕೂಟರ್ ಅನ್ನು ಪುಣೆಯಲ್ಲಿರುವ ಬಜಾಜ್ ಕಂಪನಿಯ ಚಾಕನ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಿದೆ.
ಇದನ್ನೂ ಓದಿ: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!
ಯಮಹಾ ಇವಿ ಸ್ಕೂಟರ್
ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಯಮಹಾ ಕಂಪನಿಯು ಕೂಡಾ ಶೀಘ್ರದಲ್ಲಿಯೇ ತನ್ನ ಇವಿ ಸ್ಕೂಟರ್ ಕಾನ್ಸೆಪ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಇವಿ ಸ್ಕೂಟರ್ ಅನ್ನು ಈ ಹಿಂದೆ ಅನಾವರಣಗೊಳಿಸಲಾಗಿದ್ದ ಇ-01 ಮತ್ತು ಇಸಿ-05 ಕಾನ್ಸೆಪ್ಟ್ ಮಾದರಿಗಳನ್ನು ಆಧರಿಸಿ ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ. ಯಮಹಾ ಹೊಸ ಇವಿ ಸ್ಕೂಟರ್ ಉತ್ತಮ ಬೆಲೆಯೊಂದಿಗೆ ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದ್ದಲ್ಲಿ 120 ಕಿ.ಮೀ ನಿಂದ 150 ಕಿ.ಮೀ ಮೈಲೇಜ್‌ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿವೆ ಎನ್ನಲಾಗಿದೆ.
ಹೋಂಡಾ ಇವಿ ಸ್ಕೂಟರ್
ಹೋಂಡಾ ಟು ವ್ಹೀಲರ್ ಕಂಪನಿಯು ಭಾರತದಲ್ಲಿ ಇವಿ ಸ್ಕೂಟರ್ ಬಿಡುಗಡೆಗಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಕಂಪನಿಯು ಶೀಘ್ರದಲ್ಲಿ ತನ್ನ ಹೊಸ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೋಂಡಾ ಕಂಪನಿಯು ತನ್ನ ಜನಪ್ರಿಯ ಆಕ್ಟಿವಾ ಮಾದರಿಯನ್ನು ಆಧರಿಸಿ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡುತ್ತಿದ್ದು, ಮುಂಬರುವ 2023ರ ವೇಳೆಗೆ ಅಧಿಕೃತವಾಗಿ ಉತ್ಪಾದನೆ ಆರಂಭಿಸಲಿದೆ.
Published On - 3:03 pm, Sat, 3 December 22