ಉಸಿರು ನೀಡಿದ ದೇವರು, ದಾರಿ ತೋರಿದ ಗುರು “ಅಮ್ಮ”
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ, ಭೂಮಿಗೆ ಬಂದ ಮುದ್ದಾದ ಕಂದನ ಅಳುವಿಂದ... ಅನ್ನುವ ಹಾಡು ಎಷ್ಟು ಮಹತ್ವಪೂರ್ಣವಾಗಿದೆ. " ಅಮ್ಮ" ಹೇಳುವ ಪದಕ್ಕೆ ಸಕರಾತ್ಮಕವಾದ ಶಕ್ತಿ ಇದೆ.
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ, ಭೂಮಿಗೆ ಬಂದ ಮುದ್ದಾದ ಕಂದನ ಅಳುವಿಂದ… ಅನ್ನುವ ಹಾಡು ಎಷ್ಟು ಮಹತ್ವಪೂರ್ಣವಾಗಿದೆ. ” ಅಮ್ಮ” ಹೇಳುವ ಪದಕ್ಕೆ ಸಕರಾತ್ಮಕವಾದ ಶಕ್ತಿ ಇದೆ. ಏಕೆಂದರೆ ಆಕೆ ತ್ಯಾಗಮಯಿ, ಪ್ರತಿಯೊಂದನ್ನು ಸಹಿಸುವವಳು, ಕರುಣಾಮಯಿಯು ಹೌದು. ಅಮ್ಮ ಅನ್ನುವ ಪದಕ್ಕೆ ತಾಯಿ, ಮಾತೆ, ಅಲ್ಲದೆ ದೇವರಿಗು ಹೋಲಿಸುತ್ತಾರೆ. ತಾಯಿ ತನ್ನ ದೈಹಿಕ ನೋವನ್ನು ಸಹಿಸಿ ಒಂದು ಮಗುವಿಗೆ ಜನ್ಮವನ್ನು ನೀಡಿದಾಕ್ಷಣದಿಂದ ನೋವನ್ನು ಮರೆತು ಮಗುವಿನ ಅಳುವನ್ನು ಕೇಳಿ ಸಂತೋಷದಿಂದ ನಗುವವಳೇ ಅಮ್ಮ.
ತಾಯಿಯ ಒಲವು ಪ್ರಪಂಚದಸ್ಟೇ ವಿಶಾಲವಾದದ್ದು, ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ತನ್ನ ಗಂಡ ಮತ್ತು ಮಕ್ಕಳ ಔಪಚಾರಿಕದ ಜೊತೆಗೆ ಮನೆಯ ಕೆಲಸಗಳನ್ನು ಮಾಡಿ ಮುಗಿಸುತ್ತಾಳೆ. ಮುಂಜಾನೆ ಎದ್ದು ಗಂಡನ ಸೇವೆಯನ್ನು ಮಾಡಿ, ಮಕ್ಕಳ ಲಾಲನೆ -ಪಾಲನೆ ಮುಗಿಸಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿ ಬಿಡುತ್ತಾಳೆ. ಏಕಕಾಲದಲ್ಲಿ ಮನೆಯವರ ಸೇವೆಯ ಜೊತೆಗೆ ಮನೆಯ ಸೇವೆಯು ಮುಗಿಸುತ್ತಾಳೆ. ಅಂತೆಯೇ ತಾಯಿ ತಾನು ತಿನ್ನುವ ತಿನಿಸುಗಳಲ್ಲಿ ತನ್ನ ಮಕ್ಕಳಿಗೆ ತೆಗೆದಿಡುವಳು. ತನ್ನ ಮಕ್ಕಳಿಗೆ ನೋವಾದರೆ ತನಗು ನೋವಾಯಿತೆಂದು ತಿಳಿಯುವ ಮುಗ್ದೆ ಆ ತಾಯಿ ಒಬ್ಬಳೇ.
ಇದನ್ನೂ ಓದಿ: ಕರಾಟೆ ಚತುರ ವಿ.ಗುಣಶಕ್ತಿ, ಅದ್ವಿತೀಯ ಸಾಧನೆಯತ್ತ ಬಂಟ್ವಾಳದ ಯುವಕ
ಪರಿಶುದ್ಧ ಮನಸುಳ್ಳ ಪ್ರತಿಯೊಬ್ಬರ ತಾಯಿಯು ತನ್ನ ಮಕ್ಕಳು ಈ ಸಮಾಜದಲ್ಲಿ ಉತ್ತಮವಾದ ಪ್ರಜೆಯಾಗಿ ಬಾಳಿ ಬದುಕಬೇಕು ಎನ್ನುವ ಆಸೆ ಇದ್ದೇ ಇರುತ್ತೆ. ಅಂತೆಯೇ ನನ್ನ ತಾಯಿಯು ನನಿಗೊಂದು ಕಿವಿ ಮಾತನ್ನು ಹೇಳಿದ್ದಾಳೆ. ಮಗಳೇ ನಿನ್ನ ಜೊತೆ ಇರುವವರೆಗು ನಾನು ನಿನ್ನ ಎಲ್ಲಾ ನೋವು ನಲಿವಿನಲ್ಲಿ ಭಾಗಿ ಆಗ ಬಲ್ಲೇ. ಈ ಪ್ರಪಂಚದಲ್ಲಿ ಯಾರು ಒಳ್ಳೆವರು, ಕೆಟ್ಟವರು, ಇಲ್ಲಿ ಯಾರು ನಮ್ಮವರು ಎಂದು ಗುರುತಿಸಲು ಅಸಾಧ್ಯ. ಅದಕ್ಕಾಗಿ ಎಲ್ಲರು ನಮ್ಮವರೇ ಅನ್ನುವ ಊಹೆ ಬೇಡ. ನಿನ್ನ ಜೀವನದಲ್ಲಿ ಅದೆಷ್ಟೋ ಸನ್ನಿವೇಷಗಳು ಬಂದರೆ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ನಿನ್ನಲ್ಲಿರಬೇಕು, ಎಲ್ಲಕ್ಕಿಂತಲು ಮಿಗಿಲಾಗಿ ಸಹನೆ ತುಂಬಾ ಅಮೂಲ್ಯವಾದದ್ದು. ಏನೇ ಅವಘಡಗಳು ಸಂಭವಿಸಿದರು ತಾಳ್ಮೆಯಿಂದ ಮುನ್ನಡೆ , ನೀನು ಬೇರೆ ಅನೈತಿಕ ವಿಷಯಗಳಿಗೆ ಮುಖ ಮಾಡದೆ ನಿನ್ನ ಕನಸಿನತ್ತ ಮುಂದುವರಿ ಕಂಡ ಕನಸನ್ನು ನನಸು ಮಾಡುತ್ತ ಸಾಗು. ನೀನು ಇಟ್ಟ ಹೆಜ್ಜೆ ಅಮೃತವಾಗಿರಬೇಕು ಅನ್ನುವುದು ಈ ನಿನ್ನ ಅಮ್ಮನ ಬಯಕೆ, ಅನ್ನುವುದೇ ನನ್ನ ಅಮ್ಮನ ಮಾತು.
ತಾಯಿ ಒಂದು ಮಗುವಿಗೆ ಜನ್ಮ ನೀಡಿ, ಸಾಕಿ ಸಲಹಿ ತನ್ನ ಉಸಿರಿರುವರೆಗು ತನ್ನ ಮಗಳು /ಮಗ ಚೆನ್ನಾಗಿರಬೇಕೆಂದು ಆಶಿಸುವವಳು, ಇಂತಹ ಸಂದರ್ಭದಲ್ಲಿ ಜನ್ಮವೆತ್ತಿದ ತಾಯಿಯ ಸೇವೆ ಹಗಲು ರಾತ್ರಿ ಮಾಡಿದರು, ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ.
ಲೇಖನ: ಧರ್ಮಶ್ರೀ, ಧರ್ಮಸ್ಥಳ
ಮತ್ತಷ್ಟು ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ