AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾಟೆ ಚತುರ ವಿ.ಗುಣಶಕ್ತಿ, ಅದ್ವಿತೀಯ ಸಾಧನೆಯತ್ತ ಬಂಟ್ವಾಳದ ಯುವಕ

ತಮ್ಮ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದ ಮೂಲಕ ಸಾಧನೆಯ ಶಿಖರದ ಮೆಟ್ಟಿಲನ್ನು ಏರಲು ಹೆಜ್ಜೆ ಇಡುತ್ತಿರುವವರು ವಿ.ಗುಣಶಕ್ತಿ ರವರಿಗೆ ಕರಾಟೆಯಲ್ಲಿ ಅತೀವ ಆಸಕ್ತಿ ಹೊಂದಿದವರು.

ಕರಾಟೆ ಚತುರ ವಿ.ಗುಣಶಕ್ತಿ, ಅದ್ವಿತೀಯ ಸಾಧನೆಯತ್ತ ಬಂಟ್ವಾಳದ ಯುವಕ
ವಿ.ಗುಣಶಕ್ತಿ
ಅಕ್ಷಯ್​ ಪಲ್ಲಮಜಲು​​
|

Updated on: May 03, 2023 | 8:41 AM

Share

ಸಾಧಿಸುವ ಛಲಯೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಪ್ರತಿಯೊಬ್ಬ ಪ್ರತಿಭೆಗೂ ತನ್ನ ಗುರಿ ತಲುಪಬೇಕೆಂಬ ಆಶಯವಿರುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ವಿ.ಗುಣಶಕ್ತಿ, ಹೆಸರೇ ಹೇಳುವಂತೆ ಒಳ್ಳೆಯ ಮತ್ತು ಪ್ರಬಲ ಶಕ್ತಿಯನ್ನು ಹೊಂದಿದವರು ಇವರು. ತಮ್ಮ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದ ಮೂಲಕ ಸಾಧನೆಯ ಶಿಖರದ ಮೆಟ್ಟಿಲನ್ನು ಏರಲು ಹೆಜ್ಜೆ ಇಡುತ್ತಿರುವವರು ವಿ.ಗುಣಶಕ್ತಿ ರವರಿಗೆ ಕರಾಟೆಯಲ್ಲಿ ಅತೀವ ಆಸಕ್ತಿ ಹೊಂದಿದವರು. ಅದರಲ್ಲಿಯೇ ಸಾಧನೆ ಮಾಡಬೇಕೆಂಬ ಹಂಬಲವಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ನಿವಾಸಿಯಾಗಿರುವ ಇವರು. ಎಂ. ವಿಜಯಕುಮಾರ್ ವಿ. ಸರಳ ದಂಪತಿಗಳ ಸುಪುತ್ರ.

ಕರಾಟೆ ಈಗ ಪ್ರಧಾನಕಲೆಯಾಗಿದ್ದು , ಪ್ರಪಂಚದಾದ್ಯಂತ ಕರಾಟೆಗೆ ವಿಶೇಷಸ್ಥಾನ ಮಾನವಿದೆ. ಇವರು ಕರಾಟೆ ಕಿಂಗ್ ಬ್ರೂಸ್ಲೀಯ ಸಿನೆಮಾಗಳನ್ನು ನೋಡಿ ಮಾರ್ಷಿಯಲ್ ಆರ್ಟ್ಸ್​​ನಲ್ಲಿ ಆಸಕ್ತಿ ಹೊಂದಿದರು. ಸುಮಾರು 10ಕ್ಕಿಂತ ಅಧಿಕ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವುದು ಅಲ್ಲದೇ ವಿ.ಗುಣಶಕ್ತಿ ಅವರು ಕರಾಟೆ ರೆಫ್ರಿಯಾಗಿಯೂ ಭಾಗವಹಿಸಿರುವುದು ಶ್ಲಾಘನೀಯ.

ಬಾಲ್ಯದಿಂದಲೇ ಕರಾಟೆಯಲ್ಲಿ ಒಲವು ಹೆಚ್ಚಿಸಿಕೊಂಡಿರುವ ಇವರಿಗೆ, ಗುರುಗಳಾದ ದಿನೇಶ್ ಕುಲಾಲ್ ನಿರ್ಕಜೆಯವರಿಂದ ತರಬೇತಿ ಪಡೆದರು. ಕುಮಿಟೆ ಅಂದರೆ ಬಲು ಇಷ್ಟ ಎನ್ನುವ ಇವರು ಇದರ ಜೊತೆಗೆ ಕಟಾದಲ್ಲಿಯೂ ಒಲವು ಹೊಂದಿದ್ದಾರೆ. ಶಿಟೋ ರಿಯೋ ಸ್ಟೈಲ್​​​​ನಲ್ಲಿ ಅನುಭವ ಇವರು ಎದುರಾಳಿಯನ್ನು ಮೂಕವಿಸ್ಮಿತರನ್ನಾಗಿ ಮಾಡುವ ಛಲಗಾರ.

ಕರಾಟೆಯಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಕೊಡಗಿನಲ್ಲಿ ನಡೆದ ಓಪನ್ ಕರಾಟೆ ಪಂದ್ಯಾಟದಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಲವಾರು ಪಂದ್ಯಾಟಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳಿಗೆ ಕೊರಲೊಡ್ಡಿರುವ ಇವರ ಸಾಧನೆ ಅದ್ವಿತೀಯ.

ಇದನ್ನೂ ಓದಿ: ಬಸ್ಸಿನಲ್ಲಿ ವಿದ್ಯಾರ್ಥಿನಿ, ಮಹಿಳೆಯರಿಗೆ ಎಷ್ಟು ಸುರಕ್ಷಿತ? ಪುಂಡರ ಅಸಭ್ಯ ವರ್ತನೆಗೆ ಯಾಕಿಲ್ಲ ಕಡಿವಾಣ?

ಕರಾಟೆ ಎಂದ ನಿಜವಾಗಿಯೂ ಒಂದು ಅತ್ಯುತ್ತಮವಾದ ಕಲೆ. ನಮ್ಮ ಮನಸ್ಸಿಗೂ, ದೇಹಕ್ಕೂ, ಹೆಚ್ಚಿನ ಭಾವನಾತ್ಮಕ ಸ್ಥಿರತೆ, ದೃಢತೆ, ಆತ್ಮ ವಿಶ್ವಾಸ ಮತ್ತು ಆಕ್ರಮಣಕಾರಿ ಭಾವನೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಹೇಳುವ ಇವರು ಬ್ರೌನ್ ಸೆಕೆಂಡ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ಪಡೆದುಕೊಳ್ಳವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿಯಾಗಿರುವ ಇವರ, ಅನೇಕ ಸಾಧನೆಗಳು ಮಾಡುವ ಕನಸುಗಳನ್ನು ನನಸು ಮಾಡುವ ಪ್ರಯತ್ನದಲ್ಲಿದ್ದಾರೆ.

ಲೇಖನ:ನೀತಾ ರವೀಂದ್ರ

ಮತ್ತಷ್ಟು ಬ್ಲಾಗ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು