ಬಸ್ಸಿನಲ್ಲಿ ವಿದ್ಯಾರ್ಥಿನಿ, ಮಹಿಳೆಯರಿಗೆ ಎಷ್ಟು ಸುರಕ್ಷಿತ? ಪುಂಡರ ಅಸಭ್ಯ ವರ್ತನೆಗೆ ಯಾಕಿಲ್ಲ ಕಡಿವಾಣ?

ಮಹಿಳೆಯರ ಮಾನಕ್ಕೆ ದಕ್ಕೆ ಬರದೇ ಹಾಗೆ ಕಾಪಾಡಿಕೊಳ್ಳುವುದು. 100 ಮಂದಿಯನ್ನು ತುಂಬಿಸಿಕೊಂಡು ತೆರಳುವ ಬಸ್ಸು ಇದೀಗ ಅದಷ್ಟಕ್ಕು ಅಂಕಿಅಂಶ ಮೀರಿಬಿಟ್ಟಿದೆ. ಇದರಿಂದ ಅದೆಷ್ಟೋ ಪುಂಡರ ಅಸಭ್ಯವಾದ ನಡವಳಿಕೆಯನ್ನು ಹೆಚ್ಚಾಗಿ ಕಾಣಬಹುದು.

ಬಸ್ಸಿನಲ್ಲಿ ವಿದ್ಯಾರ್ಥಿನಿ, ಮಹಿಳೆಯರಿಗೆ ಎಷ್ಟು ಸುರಕ್ಷಿತ? ಪುಂಡರ ಅಸಭ್ಯ ವರ್ತನೆಗೆ ಯಾಕಿಲ್ಲ ಕಡಿವಾಣ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 04, 2023 | 9:30 AM

ಸಾಗುವ ದಾರಿ ಎಷ್ಟೇ ದೂರ ಇದ್ದರು ಹಿಂದೆ ಪೂರ್ವಜರು ಕಾಲ್ನಡಿಗೆಯ ಮೂಲಕ ಪ್ರಯಾಣಿಸುತ್ತಿದ್ದರು. ನಂತರ ಕಾಲ್ನಡಿಗೆಯಿಂದ ಎತ್ತಿನ ಗಾಡಿಯ ಮುಖಾಂತರ ಪ್ರಯಾಣ. ಇದೀಗ ಯುಗಗಳು ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಬರಲು ಆರಂಭವಾಯಿತು. ಜನರು ಅವಲಂಬಿತಾರಾಗಿರುವ ಎಂಜಿನ್ ಬಸ್ಸು 1895 ರಲ್ಲಿ ಪರಿಚಯವಾಯಿತು. 100 ಜನರನ್ನು ಸಾಗಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಆಗ ಬಸ್​ ನಾಗರಿಕರ ಆಸ್ತಿ. ಕೊರನಾ ಬಳಿಕ ಬಸ್​ ನಾ ಕಾಣೆಯಂತಿದೆ. ಪ್ರತಿ ದಿನ ಐದು, ಹದಿನೈದು ನಿಮಿಷಕ್ಕೆ ಓಡಾಡುತ್ತಿದ್ದ ಬಸ್ಸು ಇದೀಗ ಎತ್ತ ಹೋಗಿದೆ ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿ ಉಳಿದು ಬಿಟ್ಟಿದೆ. ಬೆಳಗ್ಗೆ ಆಯಿತೆಂದರೆ ಕೆಲಸ, ಶಾಲಾ -ಕಾಲೇಜುಗೆ ಹೋಗುವ ತವಕದಲ್ಲಿ ಪರದಾಡಿಕೊಂಡು ನಿರ್ದಿಷ್ಟ ಸಮಯಕ್ಕೆ ಬಸ್ಸಿನತ್ತ ಪಯಣ ಸಾಗಿಸಿ ಬಸ್ಸು ನಿಲ್ದಾಣದಲ್ಲಿ ಕಾದರೆ ಕಾದೆ ಬಾಕಿ, ಕೆಲಸ -ಶಾಲಾ ಕಾಲೇಜುಗೆ ತಲುಪಲು ತಡವಾಗುವುದು ಈ ಸಮಸ್ಯೆಗೆ ಮೂಲ ಕಾರಣ. ಅಂತೆಯೇ ದಿನದ ದಿನಚರಿ ಮುಗಿಸಿ ಮನೆಗೆ ಹಿಂತಿರುಗುವ ವೇಳೆಗೆ ಪುತ್ತೂರಿನಿಂದ ಧರ್ಮಸ್ಥಳಕ್ಕೆ ಅಪರಾಹ್ನ 3:45ಕ್ಕೆ ಕೊನೆಯಾದರೆ ಸಂಜೆ 5 ಗಂಟೆಯ ಬಸ್ಸಿಗೆ ಹೋಗಬೇಕಾದ ಸ್ಥಿತಿ.

ಮದ್ಯಾಹ್ನದಿಂದ ಕಾದು ಕುಳಿತಂತಹ ಪ್ಯಾಸೆಂಜರ್​​ಗಳಿಗೆ 5 ಗಂಟೆಯ ಬಸ್ಸೇ ಸರಿ ಆಗ ಮಾತ್ರ ಬಸ್ಸಿನಲ್ಲಿ ಕಾಲಿಡಲು ಜಾಗವಿಲ್ಲ. ಒಂದನ್ನೇ ಅವಲಂಬಿತರಾಗಿರುವ ಜನರಿಗೆ ಬಸ್ಸು ತಪ್ಪಿ ಹೋಗುವುದು, ಹಿರಿಯರು -ಕಿರಿಯರೆನ್ನದೆ ನೂಕು -ನುಗ್ಗಲುಗಳು. ಇದರಿಂದ ಪೆಟ್ಟಾಗುವ ಸಾಧ್ಯತೆಯು ಹೆಚ್ಚು, ಡ್ರೈವರ್ ಕಂಡಕ್ಟರ್​ಗಳು, ಪ್ಯಾಸೆಂಜರ್ ಜೊತೆ ಅಲ್ಲದೆ ಜನರ ಮದ್ಯೆಯೇ ಮಾತಿನ ಚಕಾಮಕಿ ಮತ್ತಷ್ಟು ಸಮಸ್ಯೆಗೆ ದಾರಿಯಾಗಿದೆ.

ಇವೆಲ್ಲದರ ಜೊತೆ ಪ್ರಾಮುಖ್ಯತೆಯನ್ನು ಹೊಂದಿರುವುದೆಂದರೆ ಮಹಿಳೆಯರ ಮಾನಕ್ಕೆ ದಕ್ಕೆ ಬರದೇ ಹಾಗೆ ಕಾಪಾಡಿಕೊಳ್ಳುವುದು. 100 ಮಂದಿಯನ್ನು ತುಂಬಿಸಿಕೊಂಡು ತೆರಳುವ ಬಸ್ಸು ಇದೀಗ ಅದಷ್ಟಕ್ಕು ಅಂಕಿಅಂಶ ಮೀರಿಬಿಟ್ಟಿದೆ. ಇದರಿಂದ ಅದೆಷ್ಟೋ ಪುಂಡರ ಅಸಭ್ಯವಾದ ನಡವಳಿಕೆಯನ್ನು ಹೆಚ್ಚಾಗಿ ಕಾಣಬಹುದು. ಜನಜಂಗುಳಿಯನ್ನೇ ನೆಪವಾಗಿಸಿ ದುರುಪಯೋಗ ಪಡೆದುಕೊಳ್ಳುವ ಪುಂಡರು. ಈ ನೋವನ್ನು ಸಹಿಸದೆ ಮುಖಿಯಂತೆ ನಿಂತು ಬಿಡುವ ಮಹಿಳೆಯರ ಪಾಡು ಯಾರಿಗೆ ಬೇಕಾಗಿದೆ.

ಇದನ್ನೂ ಓದಿ: ಗಡಾಯಿಕಲ್ಲು ಹತ್ತುವ ಪರ್ವಕಾಲ, ಇಲ್ಲಿಗೆ ಇನ್ನೊಂದು ಹೆಸರು ಇದೆ? ಚಾರಣ ಹೇಗೆ ಹೋಗಬೇಕು?

ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಎಂದರೆ ಸಾಯಂಕಾಲದ 4 ಮತ್ತು 4:30 ರ ಸಮಯದ ಬಸ್ಸನ್ನು ನೀಡುವುದು ಉತ್ತಮ. ಇದರಿಂದ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ದಾರಿ ಎಂಬುದು ನಮ್ಮೆಲ್ಲರ ಅಭಿಪ್ರಾಯ. ಇಂತಹ ಸಮಸ್ಯೆಗಳು ನಮ್ಮಲ್ಲಿ ಅಲ್ಲದೆ ಅದೆಷ್ಟೋ ಕಡೆಗಳಲ್ಲಿ ಇಂತಹ ಸಮಸ್ಯೆಗಳು ಕಾಣುತ್ತದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಿ ಸೂಕ್ತವಾದ ಪರಿಹಾರವನ್ನು ನೀಡುವುದು ಅತ್ಯಗತ್ಯ. ಪರಿಹಾರವಾದಲ್ಲಿ ಪ್ರಯಾಣವು ನೆಮ್ಮದಿ ಹಾಗೂ ಹಿತಕರವಾಗಿರುವುದಲ್ಲಿ ಯಾವುದೇ ಸಂಶಯವಿಲ್ಲ.

ಲೇಖನ: ಧರ್ಮಶ್ರೀ ಧರ್ಮಸ್ಥಳ

ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ