ನಗುವಿನ ಲೋಕದಲ್ಲಿ ಛಾಪು ಮೂಡಿಸಿದ ಕಾಮಿಡಿ ಕಿಲಾಡಿ ಪ್ರವೀಣ್, 55 ವಿದ್ಯಾರ್ಥಿಗಳಿಗೆ ನಟನೆಯ ಧಾರೆ ಎರೆದ ಹಾಸ್ಯ ಕಲಾವಿದ

ಪ್ರವೀಣ್ ಕಾಮಿಡಿ ಕಿಲಾಡಿ ಶೋ ಸೀಸನ್ 3ಕ್ಕೆ ಆಡಿಷನ್ ನೀಡಿ ಆಯ್ಕೆ ಆಗುತ್ತಾರೆ. ಕಾಮಿಡಿ ಕಿಲಾಡಿಯ ಚಾಂಪಿಯನ್ ಶಿಪ್ ನಲ್ಲಿಯು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ, ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.

ನಗುವಿನ ಲೋಕದಲ್ಲಿ ಛಾಪು ಮೂಡಿಸಿದ ಕಾಮಿಡಿ ಕಿಲಾಡಿ ಪ್ರವೀಣ್, 55 ವಿದ್ಯಾರ್ಥಿಗಳಿಗೆ ನಟನೆಯ ಧಾರೆ ಎರೆದ ಹಾಸ್ಯ ಕಲಾವಿದ
ಪ್ರವೀಣ್ ಜೈನ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2023 | 8:13 AM

ಕಾಲ್ಪನಿಕ ಕಥೆಗಳ ಪ್ರಕಾರಗಳಲ್ಲಿ ಹಾಸ್ಯವು ಒಂದು. ದೇಶ ಭಾಷೆಗಳ ಎಲ್ಲೆ ಮೀರಿ ಸ್ಪಂದಿಸಬಲ್ಲ ಕಲಾ ಪ್ರಕಾರವೇ ಹಾಸ್ಯ. ಮನಸ್ಸನ್ನು ಉಲ್ಲಾಸಿತಗೊಳಿಸಿ, ಹಾಯಾಗಿಸುವ ಮಾಯೆ ಈ ಕಲೆಯ ಹೆಗ್ಗಳಿಕೆ. ಹಾಸ್ಯ ಒಂದು ಪ್ರಧಾನ ಕಲೆಯಾಗಿದೆ. ನಗು ಆಯಸ್ಸನ್ನು ಹೆಚ್ಚಿಸಿದರೆ, ನಗಿಸುವವರು ಜೀವನದಲ್ಲಿ ಉತ್ತಮ ಹಾಸ್ಯಗರಾರಾಗುತ್ತಾರೆ. ನಾಟಕ ಕ್ಷೇತ್ರದಲ್ಲಿ ಹಲವಾರು ಪಾತ್ರಗಳಿವೆ ಅದರಲ್ಲಿ ಕಾಮಿಡಿ ಪಾತ್ರ ಬಹುಮುಖ್ಯವಾದದ್ದು ಜನರಿಗೆ ಹೆಚ್ಚಾಗಿ ಆಸಕ್ತಿಯನ್ನು ವ್ಯಕ್ತಪಡಿಸುವುದು ಕಾಮಿಡಿಯಂತಹ ನಾಟಕಗಳು. ಕಾಮಿಡಿಯ ಮುಖಾಂತರ ಉತ್ತಮ ಸಾಧನೆ ಮಾಡುತ್ತಿದ್ದು ಜನ ಮನ ಗೆದ್ದಿರುವ ‘ಕಾಮಿಡಿ ಕಿಲಾಡಿ ‘ ಖ್ಯಾತಿಯ ಪ್ರವೀಣ್ ಜೈನ್ ಕೂಡ ಒಬ್ಬರು.

ಚಂದ್ರ ನಿಲಯ ಜನತ ಕಾಲನಿ ಪಡ್ಡಂದಡ್ಕ ಮೂಡಬಿದಿರೆಯ ನಿವಾಸಿಯಾದ ಪ್ರವೀಣ್ ಜೈನ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು ತಮ್ಮ ಪದವಿಯನ್ನು ದವಳ ಕಾಲೇಜಿನಲ್ಲಿ ಪೂರ್ಣಗೋಳಿಸಿದ್ದರು. ರಂಗಕ್ಷೇತದ ಅರಿವು ಇಲ್ಲದ ಇವರು ಕಾಲೇಜಿನಲ್ಲಿ ಎನ್ ಎಸ್ ಎಸ್ ನ ಮೂಲಕ ಸ್ವಯಂ ಸೇವಕನಗಿದ್ದು ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾನೇ ಸ್ಕ್ರೀಪ್ಟ್​ಗಳನ್ನು ರಚಿಸಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಸಮಯದಲ್ಲೇ ತನ್ನಲ್ಲಿಯು ಸಾಮರ್ಥ್ಯವಿದೆ ತಾನು ಕೂಡ ಕಲಾವಿದನಾಗಬಹುದು ಎನ್ನುವ ಮನೋಭಾವವನ್ನು ಹೊಂದರು. ಊರಿನ ಆಸುಪಾಸಿನಲ್ಲಿ ನಡೆಯುವ ಕಾರ್ಯಕ್ರದಲ್ಲಿ ಸಾಮಾಜಿಕ ನಾಟಕಗಳನ್ನು ಮಾಡುತ್ತಿದ್ದರು. ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ‘ಪೆಟ್ಟ್ ಕಮ್ಮಿ’ಹೆಸರಿನ ತುಳು ಚಿತ್ರಕ್ಕೆ ಆಡಿಷನ್ ಕೊಡುತ್ತಾರೆ, ಆಯ್ಕೆಯು ಆಗುತ್ತಾರೆ ಆದರೆ ಅಂತಿಮ ವರ್ಷದ ಪರೀಕ್ಷೆ ಇದ್ದ ಕಾರಣ ಶೂಟಿಂಗ್ ಹೋಗಲು ಸಾಧ್ಯವಾಗುವುದಿಲ್ಲ.

ನಂತರ ಜಿ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಸೀಸನ್ ಎರಡರಲ್ಲಿ ಆಡಿಷನ್ ನೀಡಿದ್ದರು ಅದರಲ್ಲಿ ಕೂಡ ಇವರು ಆಯ್ಕೆ ಆಗುವುದಿಲ್ಲ, ಕೊನೆಗೆ ಬಿ ಕಾಮ್ ಮುಗಿಸಿ ಪಾರ್ಲೊ ಆಗ್ರೋ ಕಂಪೆನಿಯಲ್ಲಿ ಸೇಲ್ಸ್ ಮಾರ್ಕೆಟಿಂಗ್​​ನಲ್ಲಿ ಕೆಲಸವನ್ನು ಮಾಡುತ್ತಿದ್ದರು. ಒಂದುವರೆ ವರ್ಷದ ನಂತರ ಕಾಮಿಡಿ ಕಿಲಾಡಿ ಶೋ ಸೀಸನ್ 3ಕ್ಕೆ ಆಡಿಷನ್ ನೀಡಿ ಆಯ್ಕೆ ಆಗುತ್ತಾರೆ. ಕಾಮಿಡಿ ಕಿಲಾಡಿಯ ಚಾಂಪಿಯನ್ ಶಿಪ್ ನಲ್ಲಿಯು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ, ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಪ್ರವೀಣ್ ಜೈನ್ ನಟಿಸುತ್ತಿರುವ ಧಾರವಾಹಿಗಳು ಪುಟ್ಟಕ್ಕನ ಮಕ್ಕಳು ಮತ್ತು ಮನಸ್ಸೆಲ್ಲಾ ನೀನೆ. ಜೊತೆಗೆ ಐದು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಸಿನಿ ಪ್ರೀಯರಿಗೆ ಮನರಂಜನೆ ನೀಡಲಿದ್ದಾರೆ. ಇವರು ಈಗ ನಟಿಸುತ್ತಿರುವ ಸಿನಿಮಾಗಳು ವೀಕೆಂಡ್ ವಿದ್ ಲವ್ವರ್ಸ್ , ಅಭೆಧ್ಯಂ, ಲವ್ ಮಿ ಆರ್ ಹೇಟ್ ಮಿ, ಪ್ರೊಡಕ್ಷಣ್ ನಂ 1 ಮತ್ತು ಆರ್ಟ್ ಮೂವಿಯಾದ ‘ವೃಷ್ಟಿ ‘ ಮೂವಿಗಳ ಮೂಲಕ ಟಿ. ವಿ ಪರದೆಯಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ:Friendship Value: ಕೇವಲ ಪ್ರೀತಿ ಮಾತ್ರವಲ್ಲ ಸ್ನೇಹವೆಂಬುದು ಕೂಡ ಒಂದು ಮಾಯೆಯೇ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬೂಸ್ಟರ್

ತಾನು ಬೆಳೆಯುವುದರ ಜೊತೆಗೆ ತನ್ನ ಊರಿನ ಜನರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಪ್ರವೀಣ್ ಜೈನ್ ಹಾಗೂ ವಿಶ್ವನಾಥ ಶೆಟ್ಟಿ ಇದೀಗ ಯುವಶೆಟ್ಟಿ ತೋಡರ್ ಎಂಬ ಹೆಸರಿನಿಂದ ಪ್ರಸಿದ್ದಿಯನ್ನು ಹೊಂದಿದ್ದಾರೆ. ಇವರಿಬ್ಬರ ಆಶ್ರಯದಿಂದ ಮೂಡಬಿದಿರೆಯಲ್ಲಿ ‘ಆಂಗಿಕಂ ‘ ಎಂಬ ಹೆಸರಿನಲ್ಲಿ ಕ್ಯಾಮರಾ ಫೇಸಿಂಗ್, ವಾಯ್ಸ್ ಮಾಡ್ಯೂಲೇಷನ್, ಸಿನಿಮಾ ಮತ್ತು ಧಾರವಾಹಿ, ಕಿರುಚಿತ್ರ, ರಿಯಾಲಿಟಿ ಶೋ ಆಡಿಷನ್ಸ್, ಸೆಲೆಬ್ರೇಟಿ ವರ್ಕ್ ಶಾಪ್ ಗಳನ್ನು ಒಳಗೊಂಡು ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಪ್ರವೀಣ್ ಜೈನ್ ಅವರಿಗೆ ಶೂಟಿಂಗ್ ಇದ್ದು ಬೆಂಗಳೂರಿನಲ್ಲಿರುವ ಕಾರಣದಿಂದ ಯುವಶಕ್ತಿ ತೋಡರ್ ತರಬೇತಿಯನ್ನು ಮುಂದುವರಿಸುತ್ತಿದ್ದಾರೆ. ಮೊದಲಿಗೆ ಆಕ್ಟಿಂಗ್ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದಾರೆ. ಈಗಾಗಲೇ ಮೊದಲ ತಂಡದಲ್ಲಿ 40 ವಿದ್ಯಾರ್ಥಿಗಳು ಎರಡನೇ ಹಂತದಲ್ಲಿ 15 ವಿದ್ಯಾರ್ಥಿಗಳು ಒಟ್ಟು 55 ವಿದ್ಯಾರ್ಥಿಗಳನ್ನು ಒಳಗೊಂಡಿದ್ದಾರೆ. ಇದರಲ್ಲಿ ಎರಡು ತಂಡಗಳಾಗಿ ವಿಂಗಡಿಸಿದ್ದಾರೆ ಮೊದಲ ತಂಡದವರಿಗೆ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಎರಡನೇ ತಂಡದವರಿಗೆ ಇನ್ನೇನು ಸಧ್ಯದಲ್ಲೆ ಆರಂಭವಾಗಲಿದೆ.

ಕಾಮಿಡಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ಪ್ರತಿಭೆಗೆ ಇಡಿ ಕರ್ನಾಟಕ ಮನಸೋತಿದೆ. ಕಲಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಅವಿರತ ಪ್ರಯತ್ನದಿಂದ ಸಾಧ್ಯ. ತಂದೆ ಧರ್ಣೇಂದ್ರ, ತಾಯಿ ಪ್ರಮೀಳಾ, ಅಣ್ಣ ಪ್ರಣೀತ್. ಈಗಾಗಲೇ ‘ಆಗಿಕಂ’ ಎಂಬ ಕಲಾ ತರಬೇತಿ ಕೇಂದ್ರದಿಂದ ಅದ್ಭುತ ಪ್ರತಿಭೆಗಳು ತರಬೇತಿ ನೀಡುವ ಮೂಲಕ ತಯಾರು ಮಾಡುತ್ತಿದ್ದಾರೆ. ಧಾರವಾಹಿ, ಸಿನಿಮಾ ಕ್ಷೇತ್ರದಲ್ಲಿ ಹಾಸ್ಯ ನಟನಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

ಲೇಖನ: ಧರ್ಮಶ್ರೀ ಧರ್ಮಸ್ಥಳ

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ