AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Value: ಕೇವಲ ಪ್ರೀತಿ ಮಾತ್ರವಲ್ಲ ಸ್ನೇಹವೆಂಬುದು ಕೂಡ ಒಂದು ಮಾಯೆಯೇ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬೂಸ್ಟರ್

ಪ್ರತಿಯೊಬ್ಬ ಸ್ನೇಹಿತನೂ ನಿಮ್ಮ ಜೀವನದಲ್ಲಿ ಪ್ರಮುಖಪಾತ್ರವಹಿಸುತ್ತಾರೆ, ನಿಮ್ಮ ಖುಷಿ ಇರಲಿ, ನಿಮ್ಮ ನೋವಿರಲಿ, ನಿಮ್ಮ ಗೆಲುವಿರಲಿ, ನಿಮ್ಮ ಸೋಲಿರಲಿ ಎಲ್ಲವನ್ನೂ ನಿಮ್ಮಂತೆಯೇ ಸಮಾನವಾಗಿ ಸ್ವೀಕರಿಸಿ, ಎಲ್ಲಾ ಏಳು-ಬೀಳಿನಲ್ಲಿ ಕುಟುಂಬಕ್ಕಿಂತ ಮೊದಲು ಸ್ನೇಹಿತ ನಿಲ್ಲುತ್ತಾನೆ.

Friendship Value: ಕೇವಲ ಪ್ರೀತಿ ಮಾತ್ರವಲ್ಲ ಸ್ನೇಹವೆಂಬುದು ಕೂಡ ಒಂದು ಮಾಯೆಯೇ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬೂಸ್ಟರ್
ಸ್ನೇಹImage Credit source: Inc. Magazine
ನಯನಾ ರಾಜೀವ್
|

Updated on: Feb 14, 2023 | 4:11 PM

Share

ಪ್ರತಿಯೊಬ್ಬ ಸ್ನೇಹಿತನೂ ನಿಮ್ಮ ಜೀವನದಲ್ಲಿ ಪ್ರಮುಖಪಾತ್ರವಹಿಸುತ್ತಾರೆ, ನಿಮ್ಮ ಖುಷಿ ಇರಲಿ, ನಿಮ್ಮ ನೋವಿರಲಿ, ನಿಮ್ಮ ಗೆಲುವಿರಲಿ, ನಿಮ್ಮ ಸೋಲಿರಲಿ ಎಲ್ಲವನ್ನೂ ನಿಮ್ಮಂತೆಯೇ ಸಮಾನವಾಗಿ ಸ್ವೀಕರಿಸಿ, ಎಲ್ಲಾ ಏಳು-ಬೀಳಿನಲ್ಲಿ ಕುಟುಂಬಕ್ಕಿಂತ ಮೊದಲು ಸ್ನೇಹಿತ ನಿಲ್ಲುತ್ತಾನೆ. ಸ್ನೇಹವೆಂಬುದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಾಯ ಮಾಡುತ್ತದೆ. ಮಾಧ್ಯಮ ವರದಿಗಳ ಪ್ರಕಾರ, 5 ವಿವಿಧ ವಿಶ್ವವಿದ್ಯಾಲಯಗಳು ಈ ಅಧ್ಯಯನಕ್ಕಾಗಿ 900 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಈ ಸಮಯದಲ್ಲಿ ಕೋವಿಡ್ ನಡೆಯುತ್ತಿತ್ತು. ಲಾಕ್‌ಡೌನ್‌ಗೆ ಮುನ್ನ, ಲಾಕ್‌ಡೌನ್ ಸಮಯದಲ್ಲಿ ಮತ್ತು ಲಾಕ್‌ಡೌನ್ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲಾಗಿದೆ. ಅಧ್ಯಯನ ಮಾಡುವಾಗ, ಸಂಶೋಧಕರು ಕೆಲವು ಅಂಶಗಳನ್ನು ಸಹ ಮಾಡಿದರು. ಆ ಅಂಶಗಳ ಸಹಾಯದಿಂದ, ಇವರಲ್ಲಿ ರಾತ್ರಿಯಲ್ಲಿ ಆತಂಕ, ಸಂಪರ್ಕ, ಖಿನ್ನತೆ, ನಡವಳಿಕೆ ಬದಲಾವಣೆ ಇವೆಲ್ಲಾ ಸಮಸ್ಯೆಗಳಿದ್ದವು.

ಯಾರೊಂದಿಗೂ ಮಾತನಾಡದೇ ಇರುವುದು, ಒಂಟಿಯಾಗಿರುವುದು, ಮೌನವಾಗಿರುವುದು, ಬೇರೆಯವರ ಅಭಿಪ್ರಾಯವನ್ನು ಕೇಳದೇ ಇರುವುದು, ತಮಾಷೆ ಮಾಡಿದರೆ ಗಂಭೀರವಾಗಿ ತೆಗೆದುಕೊಳ್ಳುವುದು ಇವೆಲ್ಲಾ ಸಮ್ಯೆಗಳು ಕೂಡ ಇದ್ದವು. ಸ್ನೇಹಿತರ ಜತೆ ಕಾಲ ಕಳೆಯುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿತ್ತು.

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಅದೇ ರೀತಿ ಸ್ನೇಹವೂ ಒಂದು ರೀತಿಯಲ್ಲಿ ಮಾಯೆಯಂದೇ ಹೇಳಬಹುದು, ಮೊದಲ ನೋಟದಲ್ಲಿ ಪ್ರೀತಿ ಹುಟ್ಟಬಹುದು. ಆದರೆ ಮೊದಲ ನೋಟದಲ್ಲೇ ಸ್ನೇಹ ಹುಟ್ಟುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹ ಹುಟ್ಟುವುದು.

ಮತ್ತಷ್ಟು ಓದಿ:National Hugging Day 2023: ಅಪ್ಪುಗೆಯಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಒಂದು ಬಾರಿ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಸಿದ್ಧರಾಗಿರಬೇಕು. ಪ್ರೀತಿ ಶಾಶ್ವತವಾಗದಿದ್ದರೂ ಸ್ನೇಹ ನಿರಂತರ. ಸ್ನೇಹ ಸಾಗರವೆಂಬುದು ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ.

ಆದರೆ ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ. ಇದು ಅನೇಕ ವರುಷಗಳ ಫಲ. ಸ್ನೇಹದ ವಿಷಯದಲ್ಲಿ ಒಬ್ಬೊಬ್ಬರದ್ದು ಒಂದೊದು ರೀತಿಯ ಅನುಭವವಿರುವುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ