ಕೋಲಾರ: ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ವಿವಾಹವಾದ ಜೋಡಿ

ಮಂತ್ರ ಮಾಂಗಲ್ಯದ ಮದುವೆ ಎಂದಾಗ ಹೆಚ್ಚು ಜನರಿಗೆ ಇದರ ಅರಿವು ಇರುವುದಿಲ್ಲ. ಹೀಗಾಗಿ ಬನ್ನಿ ಮಂತ್ರ ಮಾಂಗಲ್ಯ ಮದುವೆ ಅಂದ್ರೆ ಏನು? ಹೇಗೆ ಸೃಷ್ಠಿಯಾಯಿತು? ಇದರ ಮಹತ್ವವೇನು ತಿಳಿಯೋಣ.

ಕೋಲಾರ: ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ವಿವಾಹವಾದ ಜೋಡಿ
ಮಂತ್ರ ಮಾಂಗಲ್ಯ ಮದುವೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 08, 2023 | 3:29 PM

ನಿನ್ನೆ ನಮ್ ವಿಜಿ ಮದ್ವೆ ಆಯ್ತ ಕಾರ್ಯಗಳಿಗೂ ಗೈರಾಗುವ ನಾನು ಬಹಳ ಉತ್ಸುಕತೆಯಿಂದ ಈ ಮದ್ವೆಗೆ ಹಾಜರಾಗಿದ್ದೂ, ಅಂದ್ರೆ ಸಂತಸವನ್ನು ಹಂಚಿಕೊಂಡಾಗ, ಹಲವರು ಕೇಳಿದ್ದರು ಏನ್ ವಿಶೇಷ, ಈ ಮದ್ವೆಗೆ ಏನು ನಿನ್ನ ವಿಶೇಷ ಕಾಳಜಿ ಅಂತ. ನಾನು ಇದು ಮಂತ್ರ ಮಾಂಗಲ್ಯದ ಮದುವೆ ಎಂದಾಗ ಹೆಚ್ಚು ಜನರಿಗೆ ಇದರ ಅರಿವು ಇಲ್ದೇ ಇರೋದು ನನಗಂತೂ ಬೇಸರ ಮಾಡಿದ್ದಂತೂ ಸತ್ಯ. ಬನ್ನಿ ನಾನು ತಿಳಿದುಕೊಂಡಿರುವಷ್ಟು ಮಂತ್ರ ಮಾಂಗಲ್ಯದ ಕುರಿತು ನಿಮ್ಗೆ ತಿಳಿಸುವೆ.

ವಿಶ್ವಮಾನವ ಎಂದೇ ಖ್ಯಾತಿ ಪಡೆದ ರಸ ಋಷಿ ಕುವೆಂಪುರವರು ವಿಶಿಷ್ಟ ಹಾಗೂ ಅರ್ಥಪೂರ್ಣ ವಿವಾಹ ಮಾದರಿಯನ್ನು ವಿಕಸನಗೊಳಿಸಿದರು. ಆಡಂಬರದ ವಿವಾಹದ ಗೀಳು ತಮ್ಮ ಅದ್ಧೂರಿತನ ಹಾಗೂ ಅಂತಸ್ತಿನ ತೋರ್ಪಡಿಕೆಯ ಸಂಕೇತವಾಗುತ್ತಿರುವಾಗ, ಇದರ ಹಿಂದಿನ ಮದುವೆಯ ವ್ಯಾಪಾರೀಕರಣತೆಯನ್ನು ಅರಿತ ಕುವೆಂಪು, ಎಪ್ಪತ್ತರ ದಶಕದಲ್ಲೇ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಅನುಕೂಲವಾದ ಅರ್ಥಪೂರ್ಣವಾದ‌ ವಿವಾಹ ಪದ್ಧತಿಯನ್ನು ಪರಿಚಯಿಸಿ, ಸ್ವತಃ ತಮ್ಮ ಮಗನಿಗೆ ಮಂತ್ರ ಮಾಂಗಲ್ಯದ ಮದುವೆಯನ್ನು ಬೋಧಿಸಿ ಆದರ್ಶಪ್ರಾಯರಾಗಿದ್ದಾರೆ. ಹಾಗಾದರೆ ಇದರ ಸಂಪೂರ್ಣ ವಿಧಿ ವಿಧಾನಗಳ ಬಗ್ಗೆ ತಿಳಿಯೋಣ..

ಮಂತ್ರ ಮಾಂಗಲ್ಯದಲ್ಲಿ ಯಾವುದೇ ಪೌರೋಹಿತ್ಯ ಇರುವುದಿಲ್ಲ, ವರದಕ್ಷಿಣೆ – ವಧುದಕ್ಷಿಣೆಗೆ ಯಾವುದೇ ಆಸ್ಪದವಿಲ್ಲ. ಅಜ್ಞಾನ ಆಚರಣೆಗಳಿಗೆ ಅವಕಾಶ ಇಲ್ಲ, ಆಡಂಬರತೆಗೆ ಜಾಗವಿಲ್ಲ, ಜಾತಿ-ಧರ್ಮಗಳ ಪರೀಧಿ‌ ಇಲ್ಲ, ಇಲ್ಲಿ ಜಾತಕಗಳು ಲೆಕ್ಕಕ್ಕೇ ಇಲ್ಲ. ಮನುಷ್ಯನ ಜೀವನವೇ ಒಂದು ಒಳ್ಳೇ ಕಾಲವಾಗಿರುವಾಗ ರಾಹುಕಾಲ, ಗುಳಿಕಕಾಲ, ಯಮಗಂಡಕಾಲಗಳೆಂದು ಕಾಲಹರಣ ಮಾಡುವುದು ತರವಲ್ಲವೆಂಬುದಾಗಿ ಇಲ್ಲಿ ಸಮಯಕ್ಕೆ ಅಮೂಲ್ಯ ಆದ್ಯತೆಯನ್ನು ನೀಡಲಾಗಿದೆ. ಹೆಚ್ಚಿನ ಜನಗಳು ಸೇರುವಂತಿಲ್ಲ, ಕೇವಲ ಅತ್ಯಾಪ್ತರಿಗಷ್ಟೇ ಅವಕಾಶ, ಅತ್ಯಂತ ಕಡಿಮೆ ವೆಚ್ಚದಲ್ಲಿ, ವಿವಾಹದ ವಿಧಿ ವಿಧಾನಗಳು ಕುಟುಂಬದ ಹಿರಿಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನಡೆಯುತ್ತದೆ. ವಿವಾಹದ ಮುಂದಾಳತ್ವದಲ್ಲಿ ಆತ್ಮೀಯರೊಬ್ಬರು ಮಂತ್ರ ಮಾಂಗಲ್ಯವನ್ನು ಬೋಧಿಸುತ್ತಾರೆ, ನಂತರ ಈ ವಿವಾಹಕ್ಕೆ ಒಪ್ಪಿ ವಧು-ವರರು ಅವರುಗಳ ತಂದೆ-ತಾಯಿಯರು, ಆತ್ಮೀಯರು ಸಾಕ್ಷಿಗಳಾಗಿ ಸಹಿ ಹಾಕಿ, ಮರುದಿನ ಸಂವಿಧಾನಾತ್ಮಕವಾಗಿ ವಿವಾಹದ ನೋಂದಣಿ ಮಾಡಿಸಲಾಗುವುದು.

ಮಂತ್ರ ಮಾಂಗಲ್ಯದಲ್ಲಿ ಬೋಧಿಸಲಾಗುವ ಪ್ರಮುಖ ಇಪ್ಪತ್ತು ವಿವಾಹ ಸಂಹಿತೆ (ಸ್ತ್ರೋತ್ರಗಳು) ಹೀಗಿವೆ:

ನಿಮ್ಮ ಮದುವೆಯ ದಿನದಂದು, ಸ್ವಾತಂತ್ರ್ಯದ ಕೆಳಗಿನ ಮೂಲಭೂತ ಸಂದೇಶಗಳ ಕುರಿತು ನಾವು ನಿಮಗೆ ಅರಿವು ಮೂಡಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಆಲಿಸಿ.

1. ಇಂದು, ಈ (ಮಂತ್ರ ಮಾಂಗಲ್ಯ) ರೀತಿಯಲ್ಲಿ ವಿವಾಹವಾಗುವುದರ ಮೂಲಕ, ನೀವು ವಿಮೋಚನೆ ಹೊಂದಿದ್ದೀರಿ ಮತ್ತು ಎಲ್ಲಾ ಮಾನಸಿಕ, ಆಧ್ಯಾತ್ಮಿಕ ಕಟ್ಟುಪಾಡುಗಳು ಮತ್ತು ದಾಸ್ಯಗಳಿಂದ ಮುಕ್ತಿ ಪಡೆದಿದ್ದೀರಿ.

2. ಇನ್ನು ಮುಂದೆ, ನೀವು ಈ ಭೂಮಿಯ ಯಾವುದೇ ಜಾತಿ ಅಥವಾ ಜನರಿಗಿಂತ ದೊಡ್ಡವರಲ್ಲ.

3. ಹಾಗೆಯೇ, ನೀವು ಈ ಭೂಮಿಯ ಯಾವುದೇ ಜಾತಿ ಅಥವಾ ಜನರಿಗಿಂತ ಕಡಿಮೆಯಿಲ್ಲ.

4. ಇಂದು, ನೀವು ಮಾನವ ಸಮಾಜದಲ್ಲಿನ ಎಲ್ಲಾ ಕಪಟ ಜಾತಿಗಳಿಂದ ಬಿಡುಗಡೆ ಹೊಂದಿದ್ದೀರಿ.

5. ಇಂದು ನೀವು ಎಲ್ಲಾ ಸಂಕುಚಿತ ಧರ್ಮಗಳಿಂದ ಅನಿರ್ಬಂಧಿತರಾಗಿದ್ದೀರಿ.

6. ನೀವು ಎಲ್ಲಾ ವಿಧಿವಿಧಾನದ ಸಂಪ್ರದಾಯಗಳಿಂದ ಅನಿಯಂತ್ರಿತರು.

7. ನೀವು ಎಲ್ಲಾ ಸುಳ್ಳು ಮತ್ತು ಮೂಢನಂಬಿಕೆಗಳಿಂದ ಅನಿಯಂತ್ರಿತರಾಗಿದ್ದೀರಿ.

8. ವ್ಯಕ್ತಿಯ ಸಂಪೂರ್ಣ ಜೀವನವು ಮಂಗಳಕರ ಸಮಯ. ನೀವು ಬೇರೆ ಯಾವುದೇ ಶುಭ ಸಮಯಗಳನ್ನು ಹುಡುಕಬೇಕಾಗಿಲ್ಲ, ಅಥವಾ “ರಾಹುಕಾಲ” ಅಥವಾ “ಗುಳಿ ಕಾಲ”. ಸಮಯಕ್ಕೆ ಯಾವುದೇ ಗುಣಗಳಿಲ್ಲ.

9. ವ್ಯಕ್ತಿಯ ಜೀವಿತಾವಧಿಯ ಪ್ರತಿಯೊಂದು ಭಾಗವು ಅಮೂಲ್ಯವಾದುದು ಏಕೆಂದರೆ ಸಮಯವನ್ನು ಗಳಿಸಲಾಗುವುದಿಲ್ಲ, ಅಥವಾ ಅದನ್ನು ರಚಿಸಲಾಗುವುದಿಲ್ಲ ಮತ್ತು ಎಂದಿಗೂ ಉಳಿಸಲಾಗುವುದಿಲ್ಲ. ಈ ಸತ್ಯವನ್ನು ಅರ್ಥಮಾಡಿಕೊಳ್ಳುವವರು ತಮ್ಮ ಕರ್ತವ್ಯಗಳು ಮತ್ತು ನಡವಳಿಕೆಗಳಿಂದ ಸಮಯವನ್ನು ‘ಒಳ್ಳೆಯ’ ಮತ್ತು ‘ಕೆಟ್ಟ’ ಸಮಯಗಳಾಗಿ ಪರಿವರ್ತಿಸುತ್ತಾರೆ.

10. ನೀವು ಯಾವುದೇ ಮನೆ ದೇವತೆಗಳ ಅಥವಾ ಸಮುದಾಯ ದೇವರುಗಳ ಗುಲಾಮರಾಗಬೇಕಾಗಿಲ್ಲ. ಮಾನವೀಯ ತತ್ವಗಳು ನಿಮ್ಮ ಏಕೈಕ ಮತ್ತು ಅಂತಿಮ ದೇವರು.

11. ಎಲ್ಲಾ ಮಾನವರು ಸಮಾನರು. ಇಂದು, ಸ್ತ್ರೀಯರಿಗಿಂತ ಪುರುಷರು ಶ್ರೇಷ್ಠರು ಎಂದು ಸಾರುವ ಎಲ್ಲಾ ಧರ್ಮಗಳು ಮತ್ತು ಸಂಪ್ರದಾಯಗಳನ್ನು ನೀವು ತಿರಸ್ಕರಿಸಿದ್ದೀರಿ.

12. ಹೆಂಡತಿ ಮತ್ತು ಪತಿ ಪರಸ್ಪರ ಅವಲಂಬಿತರಾಗಿಲ್ಲ; ಅಥವಾ ಅವುಗಳನ್ನು ಸುತ್ತಲೂ ಆದೇಶಿಸಲಾಗುವುದಿಲ್ಲ. ಹೆಂಡತಿಯೂ ಅದೇ ಸ್ವಾತಂತ್ರ್ಯವನ್ನು ಅನುಭವಿಸುತ್ತಾಳೆ ಮತ್ತು ಗಂಡನಿಗೆ ಸಮಾನಳು.

13. ಪತಿ-ಪತ್ನಿ ಒಟ್ಟಿಗೆ ಇರುವುದನ್ನು ಖಾತ್ರಿಪಡಿಸುವ ಏಕೈಕ ಸಾಧನವೆಂದರೆ ಪ್ರೀತಿ. ಪ್ರೀತಿಯಿಲ್ಲದಿದ್ದಲ್ಲಿ, ಮಾಂಗಲ್ಯವನ್ನು ಕಟ್ಟಿಕೊಂಡು ಮದುವೆಯಾಗುವುದು, ಬೆಂಕಿಯ ಸುತ್ತಲೂ ಪ್ರದಕ್ಷಿಣೆ ಹಾಕುವುದು ಅಥವಾ ಎಲ್ಲಾ ರೀತಿಯ ಆಚರಣೆಗಳನ್ನು ಮಾಡುವುದು ವ್ಯರ್ಥವಾಗುತ್ತದೆ.

14. ನೀವು ದೇವರ ಬಗ್ಗೆ ಎಂದಿಗೂ ಸುಳ್ಳು ಹೇಳಬಾರದು. ನಿಮ್ಮ ಅನುಭವಗಳು ದೇವರಿಲ್ಲ ಎಂದು ನಿಮಗೆ ತಿಳಿಸಿದರೆ, ದೇವರು ಅಸ್ತಿತ್ವದಲ್ಲಿಲ್ಲ ಎಂದು ಹೇಳಿ.

15. ನಿಮ್ಮ ಅನುಭವಗಳು ದೇವರಿದ್ದಾನೆ ಎಂದು ತಿಳಿಸಿದರೆ, ದೇವರು ಇದ್ದಾನೆ ಎಂದು ಹೇಳಿ.

16. ನಿಮ್ಮ ಅನುಭವದಿಂದ, ದೇವರ ಅಸ್ತಿತ್ವದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ದೇವರು ಇದ್ದಾನೋ ಇಲ್ಲವೋ ಎಂದು ನಿಮಗೆ ತಿಳಿದಿಲ್ಲ ಎಂದು ಹೇಳಿ.

17. ನಿಮ್ಮ ಅನುಭವಗಳನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು ಮತ್ತು ಭಯವಿಲ್ಲದೆ ವಾಸ್ತವವನ್ನು ಗ್ರಹಿಸುವುದು ಸತ್ಯದ/ಸತ್ಯದ ವಿಚಾರಣೆಯ ಮೊದಲ ಹೆಜ್ಜೆ. ಇದು ಜ್ಞಾನ ಸಂಪಾದನೆಯ ಮೊದಲ ಪಾಠ.

18. ವಂಚನೆ ಮತ್ತು ಆತ್ಮವಂಚನೆಯಲ್ಲಿ ತೊಡಗುವವರು ಎಂದಿಗೂ ಕತ್ತಲೆ ಮತ್ತು ಅಜ್ಞಾನದಿಂದ ಮುಕ್ತರಾಗುವುದಿಲ್ಲ.

19. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಎಲ್ಲಾ ಧಾರ್ಮಿಕ ಶಾಲೆಗಳು ಮತ್ತು ಧಾರ್ಮಿಕ ಮುಖ್ಯಸ್ಥರನ್ನು ತಿರಸ್ಕರಿಸಿ.

20. ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುವ ಎಲ್ಲಾ ಪವಿತ್ರ ದೇವಾಲಯಗಳನ್ನು ತಿರಸ್ಕರಿಸಿ. ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುವ ಎಲ್ಲಾ ಯಾತ್ರಿ-ಪಟ್ಟಣಗಳನ್ನು ತಿರಸ್ಕರಿಸಿ.

ಯಾವುದೇ ರೀತಿಯ ವರದಕ್ಷಿಣೆಗೆ ಒಳಗಾಗದೆ ಅಥವಾ ನಿಮ್ಮ ಹೆತ್ತವರಿಗೆ ಯಾವುದೇ ಹಣಕಾಸಿನ ಹೊರೆಯನ್ನು ಉಂಟುಮಾಡದೆ ನಿಮ್ಮ ಸ್ವಂತ ಪ್ರಯತ್ನದಿಂದ ನೀವು ಮದುವೆಯಾಗುತ್ತಿದ್ದೀರಿ.

ಈಗ ಎಲ್ಲಾ ಧರ್ಮಗಳು, ಆಚರಣೆಗಳು ಮತ್ತು ಅಜ್ಞಾನದಿಂದ ಅಡೆತಡೆಯಿಲ್ಲದ ವಧು-ವರರೇ, ನೀವು ಮಾನವೀಯತೆಯ ಈ ಪವಿತ್ರ ಕರ್ತವ್ಯವನ್ನು ಮುಂದುವರಿಸಬೇಕು. ಯಾವುದೇ ಧರ್ಮಕ್ಕೆ ಸೇರುವ ಅಗತ್ಯವಿಲ್ಲ. ಯಾವುದೇ ಪಂಗಡಕ್ಕೆ ಸೇರುವ ಅಗತ್ಯವಿಲ್ಲ. ಯಾವುದೇ ಆಚರಣೆಗಳನ್ನು ಅನುಸರಿಸುವ ಅಗತ್ಯವಿಲ್ಲ. ಮೇಲೆ ತಿಳಿಸಿದ ಪ್ರಮಾಣಗಳು ನಿಮ್ಮ ಜೀವನದಲ್ಲಿ ಮಾರ್ಗದರ್ಶಿ ದೀಪಗಳಾಗಿವೆ. ಭಾರತೀಯರಾದ ನಾವೆಲ್ಲರೂ ಅಜ್ಞಾನ ಮತ್ತು ಭ್ರಮೆಯ ವಿರುದ್ಧ ಹೋರಾಡುತ್ತಿರುವ ಈ ಯುದ್ಧದಲ್ಲಿ ಭಾಗವಹಿಸಬೇಕೆಂದು ನಾವು ವಿನಂತಿಸುತ್ತೇವೆ.

ಈ ದಿನದಂದು ನೀವು ವಿವಾಹಿತ ದಂಪತಿಗಳು ಎಂದು ನಾವು ಈ ಮೂಲಕ ಘೋಷಿಸುತ್ತೇವೆ. (ಉದಯರವಿ ಪ್ರಕಾಶನದ ಕುವೆಂಪು ವಿರಚಿತ ಮಂತ್ರ ಮಾಂಗಲ್ಯ ಪುಸ್ತಕದ ಆಯ್ದ ಅಗತ್ಯ ಸಾಲುಗಳು)

ಕುವೆಂಪುರವರ ಮಂತ್ರ ಮಾಂಗಲ್ಯ ಪುಸ್ತಕದಲ್ಲಿ ವೇದಗಳು ಮತ್ತು ಉಪನಿಷತ್ತುಗಳ ಆಯ್ದ ಮಂತ್ರಗಳು ಮತ್ತು ವಿವಿಧ ದೇವತೆಗಳ ಸ್ತೋತ್ರಗಳು ಮತ್ತು ಸಂಸ್ಕೃತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಶಾರದಾ ದೇವಿ ಮತ್ತು ಅವರ ಕನ್ನಡ ಅನುವಾದಗಳ ಜೊತೆಗೆ. “ನಮ್ಮ ಋಷಿಗಳು, ದಾರ್ಶನಿಕರು ಮತ್ತು ಸಂತರು” ರಚಿಸಿದ ಈ ಮಂತ್ರಗಳನ್ನು ಅವರು ಆರಿಸಿಕೊಂಡರು, ಏಕೆಂದರೆ ಅವರು ಮಾನವೀಯತೆಯಿಂದ ಅತ್ಯುನ್ನತ ಸದ್ಗುಣಗಳನ್ನು ಬಯಸಿದರು.

ಒಟ್ನಲ್ಲಿ ಹೇಳೋದಾದ್ರೆ ಮಂತ್ರ ಮದುವೆ ಮನುಜಮತದ ಅರ್ಥಪೂರ್ಣ‌ ಆಚರಣೆಯ ಹಳೇಯ ವಿವಾಹ ಪದ್ಧತಿ. ವಿವಾಹವೆಂಬುದು ಎರಡು ವ್ಯಕ್ತಿಗಳ, ವ್ಯಕ್ತಿತ್ವಗಳ, ಕುಟುಂಬಗಳ ಅರ್ಥಪೂರ್ಣ ಸಂಬಂಧಕ್ಕೆ ಅಡಿಪಾಯ ಎನ್ನುವುದನ್ನು ಇಲ್ಲಿ ಬಲವಾಗಿ ನಂಬಲಾಗಿದೆ.

ಮಂತ್ರ ಮಾಂಗಲ್ಯವನ್ನು ನಮಗೆ ಬೇಕಾದಲ್ಲಿ ಕೊಂಚ ಮಾರ್ಪಾಡುಗಳನ್ನು ಮಾಡಲು ಅವಕಾಶವಿದೆ. ಬದಲಾವಣೆ ಜಗದ ನಿಯಮ ಅಲ್ವೇ, ಕಾಲಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಅಗತ್ಯ. ಈಗಾಗಲೇ ಬಹಳಷ್ಟು ಮಂದಿ ಮಂತ್ರ ಮಾಂಗಲ್ಯದ ಮಹತ್ವವನ್ನು ಅರಿತು, ಈ ವಿಧಾನದ ಮದುವೆಯಿಂದ‌ ನವಜೀವನಕ್ಕೆ ಕಾಲಿಟ್ಟು, ಸಂತಸದಿಂದ ಬದುಕು ಕಟ್ಟಿಕೊಂಡಿರುವುದು ಸಂತಸವೇ ಸರಿ. ನನ್ನ ಆಪ್ತ ಸ್ನೇಹಿತೆಯೂ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಈ ಸುಸಂದರ್ಭಕ್ಕೆ ನಾ ಸಾಕ್ಷಿಯಾದದು ಅತ್ಯಂತ ಖುಷಿಯ ವಿಚಾರ.

ಮಂತ್ರ ಮಾಂಗಲ್ಯವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವರಾದ ಡಾಮಿನಿಕ್ ದೇ ಸರ್ ಬೋಧಿಸಿದರು, ಈ ಸಂದರ್ಭದಲ್ಲಿ ಹೂವಳ್ಳಿ ನಾಗರಾಜ್ ಸೇರಿದಂತೆ ಇನ್ನೂ ಹಲವು ಪ್ರಮುಖರು ಹಾಜರಿದ್ದರು. ಮಂತ್ರ ಮಾಂಗಲ್ಯದ ಮೂಲಕ ಒಂದಾದ ವಿಜಯಲಕ್ಷ್ಮಿ ಮತ್ತು ನರಸಿಂಹಪ್ಪರವರಿಗೆ ಆತ್ಮೀಯ ಅಭಿನಂದನೆ ನಿಮ್ಮ ಬಾಳು ಸುಖವಾಗಿರಲಿ.

ಮಾಗಿದ ಮನಸ್ಸು

Published On - 3:23 pm, Wed, 8 February 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್