ಈ ಹಂತದಲ್ಲಿ ಜೊತೆಗೂಡಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ಸುನಿಲ್ ನರೈನ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಹೊಂದಾಣಿಕೆಯ ಓಟದ ಕೊರತೆಯಿಂದಾಗಿ ನರೈನ್ (11) ರನೌಟ್‌ಗೆ ಬಲಿಯಾಗಿ ನಿರಾಸೆಯಿಂದ ಪೆವಿಲಿಯನತ್ತ ಮುಖ ಮಾಡಿದರು. ಇನ್ನೊಂದೆಡೆ ಏಕಾಂಗಿಯಾಗಿ ಇನಿಂಗ್ಸ್ ಕಟ್ಟಿದ ಕಾರ್ತಿಕ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ ನಾಯಕನಿಗೆ ಸಾಥ್ ನೀಡಿದ ಆ್ಯಂಡ್ರೆ ರಸೆಲ್ ಒಂದಷ್ಟು ಭರ್ಜರಿ ಶಾಟ್ಗಳನ್ನು ಬಾರಿಸಿದರೂ 14 ರನ್ನನ್ನು ದಾಟಿ ಮುಂದೆ ಹೋಗಲಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಸೆಲ್ ರನ್ನು […]
Follow us on
ಈ ಹಂತದಲ್ಲಿ ಜೊತೆಗೂಡಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ಸುನಿಲ್ ನರೈನ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಹೊಂದಾಣಿಕೆಯ ಓಟದ ಕೊರತೆಯಿಂದಾಗಿ ನರೈನ್ (11) ರನೌಟ್‌ಗೆ ಬಲಿಯಾಗಿ ನಿರಾಸೆಯಿಂದ ಪೆವಿಲಿಯನತ್ತ ಮುಖ ಮಾಡಿದರು.
ಇನ್ನೊಂದೆಡೆ ಏಕಾಂಗಿಯಾಗಿ ಇನಿಂಗ್ಸ್ ಕಟ್ಟಿದ ಕಾರ್ತಿಕ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ ನಾಯಕನಿಗೆ ಸಾಥ್ ನೀಡಿದ ಆ್ಯಂಡ್ರೆ ರಸೆಲ್ ಒಂದಷ್ಟು ಭರ್ಜರಿ ಶಾಟ್ಗಳನ್ನು ಬಾರಿಸಿದರೂ 14 ರನ್ನನ್ನು ದಾಟಿ ಮುಂದೆ ಹೋಗಲಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಸೆಲ್ ರನ್ನು ಕಟ್ಟಿ ಹಾಕುವಲ್ಲಿ ರಾಜಸ್ಥಾನ್ ಬೌಲರ್ಗಳು ಯಶಸ್ವಿಯಾದರು.