Budget 2022: ಬಜೆಟ್ ದಿನಾಂಕ, ಸಮಯ, ಎಲ್ಲಿ ನೋಡುವುದು ಮತ್ತು ಇತರ ಮಾಹಿತಿಗಳು ಇಲ್ಲಿವೆ

| Updated By: Srinivas Mata

Updated on: Jan 31, 2022 | 12:16 PM

Budget 2022 Date, Time: ಕೇಂದ್ರ ಬಜೆಟ್ 2022ರ ಮಂಡನೆ ದಿನಾಂಕ, ಸಮಯ ಹಾಗೂ ಎಲ್ಲಿ ನೋಡುವುದು ಮತ್ತಿತರ ಮಾಹಿತಿ ಈ ಲೇಖನದಲ್ಲಿದೆ.

Budget 2022: ಬಜೆಟ್ ದಿನಾಂಕ, ಸಮಯ, ಎಲ್ಲಿ ನೋಡುವುದು ಮತ್ತು ಇತರ ಮಾಹಿತಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಕೊರೊನಾ ಮೂರನೇ ಅಲೆಯ ಮಧ್ಯೆ ಮಂಡನೆ ಆಗಲಿರುವ ಕೇಂದ್ರ ಬಜೆಟ್​ 2022ಕ್ಕೆ (Union Budget 2022) 24 ಗಂಟೆಗಿಂತ ಕಡಿಮೆ ಸಮಯ ಬಾಕಿ ಇದೆ. ಇದೀಗ ಎಲ್ಲರ ಕಣ್ಣು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಕಡೆ ನೆಟ್ಟಿದೆ. ಏಕೆಂದರೆ ಫೆಬ್ರವರಿ 1ನೇ ತಾರೀಕಿನಂದು ತಮ್ಮ ನಾಲ್ಕನೇ ಬಜೆಟ್​ ಅನ್ನು ಅವರು ಮಂಡಿಸಲಿದ್ದಾರೆ. ಕಳೆದ ವರ್ಷ ಕಾಗದರಹಿತವಾದ ಬಜೆಟ್​ ಮಂಡನೆ ಆಗಿತ್ತು. ಅದು ಕೂಡ ಮೊದಲ ಬಾರಿಗೆ ಅಂಥದ್ದೊಂದು ಪ್ರಯತ್ನವಾಗಿತ್ತು. ಕಳೆದ ವರ್ಷಕ್ಕೂ ಮುನ್ನ ಸಾಂಪ್ರದಾಯಿಕವಾಗಿ “ಬಹಿ-ಖಾತಾ” ತರುತ್ತಿದ್ದ ಕೇಂದ್ರ ಹಣಕಾಸು ಸಚಿವರು, 2021-22ರ ಬಜೆಟ್​ಗಾಗಿ ಸಂಸತ್​ಗೆ ತಂದದ್ದು ಟ್ಯಾಬ್ಲೆಟ್ (ಗ್ಯಾಜೆಟ್​). ಈ ಬಾರಿ ಕೂಡ ನಿರ್ಮಲಾ ಸೀತಾರಾಮನ್ ಅವರು ಕಾಗದ ರಹಿತವಾದ ಬಜೆಟ್ ಮಂಡನೆ ಮಾಡಲಿದ್ದಾರೆ.

ಸಂಸತ್​ನ ಬಜೆಟ್ ಅಧಿವೇಶನ
ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ಭಾಷಣದೊಂದಿಗೆ ಸಂಸತ್​ನ ಬಜೆಟ್ ಅಧಿವೇಶನಕ್ಕೆ ಜನವರಿ 31ನೇ ತಾರೀಕು ಚಾಲನೆ ದೊರೆಯಲಿದೆ. ಮೊದಲ ಭಾಗದ ಕೇಂದ್ರ ಬಜೆಟ್ ಅಧಿವೇಶನವು ಜನವರಿ 31ರಿಂದ ಫೆಬ್ರವರಿ 11ರ ತನಕ ನಡೆಯಲಿದೆ. ಮತ್ತು ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14ರಿಂದ ಏಪ್ರಿಲ್ 8ರ ತನಕ ನಡೆಯುತ್ತದೆ.

ಬಜೆಟ್ ದಿನಾಂಕ ಮತ್ತು ಸಮಯ
ಕೇಂದ್ರ ಬಜೆಟ್ 2022 ಫೆಬ್ರವರಿ 1 (ಮಂಗಳವಾರ) ಬೆಳಗ್ಗೆ 11ಕ್ಕೆ ಮಂಡನೆ ಆಗುವ ಸಾಧ್ಯತೆ ಇದೆ. ಬಜೆಟ್ ಮಂಡನೆಯ ಅವಧಿ 90ರಿಂದ 120 ನಿಮಿಷ ಇರಲಿದೆ. ಆದರೆ 2020ರಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಇತಿಹಾಸದಲ್ಲೇ ಅತಿ ದೀರ್ಘಾವಧಿಯ ಬಜೆಟ್ ಭಾಷಣ, ಅಂದರೆ 160 ನಿಮಿಷಗಳಷ್ಟು ದೀರ್ಘವಾಗಿ ಮಾಡಿದ್ದರು.

ಬಜೆಟ್ 2022 ಎಲ್ಲಿ ನೋಡುವುದು
ಲೋಕ್​ ಸಭಾ ಟೀವಿಯಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ ಆಗುತ್ತದೆ. ಬಜೆಟ್​ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಇತರ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಮತ್ತು ಟ್ವಿಟರ್​ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು. ಕಳೆದ ವರ್ಷ ಮೊದಲ ಬಾರಿಗೆ ಎಂಬಂತೆ (ಮೊದಲ ಬಜೆಟ್ ಮಂಡನೆ ಆದ ನವೆಂಬರ್ 26, 1947ರಿಂದ ಮೊದಲುಗೊಂಡು) ಹೊಸ ಆರ್ಥಿಕ ವರ್ಷದ ಆದಾಯ ಮತ್ತು ವೆಚ್ಚವನ್ನು ಒಳಗೊಂಡ ಸ್ಟೇಟ್​ಮೆಂಟ್, ಹಣಕಾಸು ಮಸೂದೆ, ಹೊಸ ತೆರಿಗೆ ಹಾಗೂ ಇತರ ಕ್ರಮಗಳ ಮಾಹಿತಿಯನ್ನು ಭೌತಿಕವಾಗಿ ಮುದ್ರಣ ಮಾಡಲಿಲ್ಲ.

ಸಂಸತ್ ಸದಸ್ಯರು ಮತ್ತು ಜನ ಸಾಮಾನ್ಯರಿಗೆ ಬಜೆಟ್ ಡಾಕ್ಯುಮೆಂಟ್​ ಸುಲಭವಾಗಿ ಹಾಗೂ ಯಾವುದು ಸಮಸ್ಯೆ ಇಲ್ಲದಂತೆ ದೊರೆಯುವುದಕ್ಕೆ ಕಳೆದ ವರ್ಷ ಹಣಕಾಸು ಸಚಿವರು ಬಜೆಟ್ ಮೊಬೈಲ್ ಆ್ಯಪ್ ಆರಂಭಿಸಿದ್ದರು.

ಇದನ್ನೂ ಓದಿ: Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?