ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸತತ 7ನೇ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿದೆ. ಬಜೆಟ್ ಕೆಲವರ ನಿರೀಕ್ಷೆಗೆ ತಕ್ಕಂತೆ ಇದೆ. ಮತ್ತೆ ಕೆಲವರಿಗೆ ನಿರಾಸೆಯಾಗಿದೆ. ನಿನ್ನೆ ಸೋಮವಾರ ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್ನಲ್ಲಿ ಪ್ರಸ್ತುತಪಡಿಸಲಾಯಿತು. ಪ್ರಸಕ್ತ ಹಣಕಾಸು ಸ್ಥಿತಿ, ಹಣದುಬ್ಬರ ಇತ್ಯಾದಿ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಅದು ನೀಡಿತ್ತು. ಈಗ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ನಲ್ಲಿ ಹಲವು ಕ್ಷೇತ್ರಗಳಿಗೆ ಆದ್ಯತೆ ಕೊಟ್ಟಿದ್ದಾರೆ.
ಮ್ಯಾನುಫ್ಯಾಕ್ಚರಿಂಗ್ ವಲಯದಿಂದ ಹಿಡಿದು ರಕ್ಷಣಾ ವಲಯದವರೆಗೆ ವಿವಿಧ ಕ್ಷೇತ್ರಗಳು ಹೆಚ್ಚಿನ ಅನುದಾನಗಳ ನಿರೀಕ್ಷಿಸಿದ್ದವು. ಈ ಬಾರಿಯ ಬಜೆಟ್ನಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಯುವಜನರು ಈ ನಾಲ್ಕು ಜನವರ್ಗಗಳ ಏಳ್ಗೆಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗುವುದು ಎಂದು ಈ ಹಿಂದೆಯೇ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಬಜೆಟ್ ಭಾಷಣ ಸುಮಾರು ಎರಡರಿಂದ ಮೂರು ಗಂಟೆ ಕಾಲ ಇರಬಹುದು. ಬಜೆಟ್ ಸಂಬಂಧಿಸಿದ ಪ್ರತಿಯನ್ನು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡಲಾಗಿರುತ್ತದೆ. ಅದರಲ್ಲಿ ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್ವರೆಗೆ ಎಲ್ಲಾ ಪ್ರತಿಗಳು ಪಿಡಿಎಫ್ ರೂಪದಲ್ಲಿ ಲಭ್ಯ ಇರುತ್ತವೆ. ಯಾರು ಬೇಕಾದರೂ ಡೌನ್ಲೋಡ್ ಮಾಡಬಹುದು.
ಆರ್ಥಿಕ ಸಮೀಕ್ಷಾ ವರದಿಯ ವಿವಿಧ ಪ್ರತಿಗಳೂ ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲಿ ಲಭ್ಯ ಇದೆ. ನಿನ್ನೆ ಜುಲೈ 22ರಂದು ಈ ಸರ್ವೇಕ್ಷಣೆ ವರದಿಯನ್ನು ಸಂಸತ್ನಲ್ಲಿ ಪ್ರಸ್ತುತಪಡಿಸಲಾಗಿತ್ತು. 500ಕ್ಕೂ ಹೆಚ್ಚು ಪುಟಗಳಿರುವ ಈ ವರದಿಯನ್ನೂ ಕೂಡ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಬಹುದು.
ಕೇಂದ್ರ ಬಜೆಟ್ ಲೈವ್ ಬ್ಲಾಗ್ ಲಿಂಕ್
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Tue, 23 July 24