Budget 2024 PDF Download: ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

| Updated By: Digi Tech Desk

Updated on: Feb 01, 2024 | 2:01 PM

ಬಜೆಟ್​​ ಮಂಡಣೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಆಸಕ್ತಿ ಹೊಂದಿರುವವರು ಬಜೆಟ್​​ನ ಪಿಡಿಎಫ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Budget 2024 PDF Download: ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ
Image Credit source: Jagran
Follow us on

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್( Nirmala Sitharaman) ಇಂದು( ಫೆಬ್ರವರಿ 1) ಸಂಸತ್​ನಲ್ಲಿ ಮಧ್ಯಂತರ ಬಜೆಟ್ ಭಾಷಣವನ್ನು ಮಂಡಿಸಿದ್ದಾರೆ.ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಬಜೆಟ್ ಭಾಷಣ 1 ಗಂಟೆಗಳ ನಂತರ ಪೂರ್ಣಗೊಂಡಿದೆ. ಇನ್ನು ಬಜೆಟ್​​ ಮಂಡಣೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಆಸಕ್ತಿ ಹೊಂದಿರುವವರು ಬಜೆಟ್​​ನ ಪಿಡಿಎಫ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮಧ್ಯಂತರ ಬಜೆಟ್ ಭಾಷಣದ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ?

ಲೋಕಸಭೆಯಲ್ಲಿ ಬಜೆಟ್‌ ಪ್ರಸ್ತುತಿ ಮುಗಿದ ನಂತರ,  ಅಂದರೆ ಈಗಾಗಲೇ ಬಜೆಟ್ ದಾಖಲೆಗಳು ಅಧಿಕೃತ ವೆಬ್‌ಸೈಟ್‌ (indiabudget.gov.in) ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.  ಬಜೆಟ್ ಕುರಿತ ಸಂಪೂರ್ಣ ಮಾಹಿತಿಯನ್ನು PDF ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.  ಅದಕ್ಕಾಗಿ ನೀವು ಈ www[dot]indiabudget[dot]gov[dot]in ಗೆ ಭೇಟಿ ನೀಡಬೇಕು.

ಬಜೆಟ್ PDF ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಬಜೆಟ್ ದಾಖಲೆಗಳು ಈಗ ( www[dot]indiabudget[dot]gov[dot]in ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ .

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಬಜೆಟ್ ದಾಖಲೆಗಳು ಲಭ್ಯವಿವೆ.

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಬಹುದು (www[dot]indiabudget[dot]gov[dot]in). ಇದು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Thu, 1 February 24