1992ರಲ್ಲಿ ಆದಾಯ ತೆರಿಗೆ ದರ ಎಷ್ಟಿತ್ತು?; ಬಜೆಟ್​​ ಮಂಡನೆಯ ದಿನವೇ ಇಲ್ಲೊಂದು ಪೋಸ್ಟ್​​​ ಸಕ್ಕತ್ತ್​​ ವೈರಲ್​​ ಆಗಿದೆ !

|

Updated on: Feb 01, 2023 | 5:44 PM

Income Tax Slab in 1992 Budget: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು(ಫೆ.01) 5ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ 1992ರ ಆದಾಯ ತೆರಿಗೆ ದರ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್​​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ನೆಟ್ಟಿಗರು ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ.

1992ರಲ್ಲಿ ಆದಾಯ ತೆರಿಗೆ ದರ ಎಷ್ಟಿತ್ತು?; ಬಜೆಟ್​​ ಮಂಡನೆಯ ದಿನವೇ ಇಲ್ಲೊಂದು ಪೋಸ್ಟ್​​​ ಸಕ್ಕತ್ತ್​​ ವೈರಲ್​​ ಆಗಿದೆ !
1992 Budget- IT Slab
Image Credit source: Twitter
Follow us on

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು(ಫೆ.01) 5ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ 1992ರ ಆದಾಯ ತೆರಿಗೆ ದರ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್​​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ನೆಟ್ಟಿಗರು ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ಪೋಸ್ಟ್​​​ಗೆ ಪ್ರತಿಕ್ರಿಯಿಸುವ ಮೂಲಕ ತಿಳಿದುಬಂದಿದೆ. ಮೂವತ್ತು ವರ್ಷಗಳ ಹಿಂದೆ, ಯಾವ ಆದಾಯದ ಮೇಲೆ ಜನರು ಆದಾಯ ತೆರಿಗೆ ಪಾವತಿಸಬೇಕಾಗಿತ್ತು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. 2023ರ ಬಜೆಟ್​​ ಮಂಡನೆಯ ದಿನವೇ ಈ ಪೋಸ್ಟ್​​​​​ ಹಂಚಿಕೊಂಡಿದ್ದರಿಂದ ಸಾಕಷ್ಟು ಮಟ್ಟಿಗೆ ವೈರಲ್​​ ಆಗಿದೆ.

ಈ ಪೋಸ್ಟ್​​ನ್ನು ಟ್ವಿಟರ್‌ನಲ್ಲಿ ಹ್ಯಾಂಡಲ್ ಇಂಡಿಯನ್ ಹಿಸ್ಟರಿ ಪಿಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 1992ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಸ್ಲ್ಯಾಬ್ ಎಂದು ಕ್ಯಾಪ್ಟನ್​​ ಕೂಡ ಹಾಕಲಾಗಿದೆ. ಇದರಲ್ಲಿ ತಿಳಿಸಿರುವಂತೆ 28000 ಸಾವಿರ ರೂಪಾಯಿಗಳಿಗೆ ತೆರಿಗೆ ಇಲ್ಲ. 28001 ಸಾವಿರದಿಂದ 50000 ರೂಪಾಯಿಗಳ ಮೇಲೆ 20 ಪ್ರತಿಶತ ತೆರಿಗೆ. 50001 ರಿಂದ 100000 ವರೆಗೆ 30 ಪ್ರತಿಶತ ತೆರಿಗೆ ಮತ್ತು 1 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ 40 ಪ್ರತಿಶತ ಆದಾಯ ತೆರಿಗೆ ವಿಧಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಎದೆ ನಡುಕ ಹುಟ್ಟಿಸುವ ಭಯಾನಕ ಬಂಗೀ ಜಂಪಿಂಗ್‌ ವಿಡಿಯೋವೊಂದು ಇಲ್ಲಿದೆ

ಇದು 1992 ರಲ್ಲಿ ಪ್ರಧಾನ ಮಂತ್ರಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ತೆರಿಗೆ ಲೆಕ್ಕಚಾರವನ್ನು ಅನ್ನು ಮೂರು ಭಾಗಗಳಾಗಿ ವಿಂಗಡಿಸಿದ ಅವಧಿಯದ್ದು. ಈ ಪೋಸ್ಟ್​​ ವೈರಲ್ ಆದ ತಕ್ಷಣ ಜನ ಇದಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸಿದ್ದಾರೆ. ಮೂವತ್ತು ವರ್ಷಗಳಲ್ಲಿ ಎಷ್ಟೊಂದು ಅಜಗಜಾಂತರದ ವ್ಯತ್ಯಾಸವಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

2023 ರಲ್ಲಿ, ಹೊಸ ಪ್ರಕಟಣೆಯ ಅಡಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. 7 ಲಕ್ಷಕ್ಕಿಂತ ಹೆಚ್ಚು ಇದ್ದರೆ, ನೀವು ಮೂರು ಲಕ್ಷ ರೂಪಾಯಿಗಳವರೆಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 3ರಿಂದ 6 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ಮತ್ತು 6ರಿಂದ 9 ಲಕ್ಷ ರೂ.ವರೆಗೆ ಶೇ.10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಪ್ರಸ್ತುತ, ಹೊಸ ಬಜೆಟ್ ನಡುವೆ, 1992 ರ ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

ಇನ್ನಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:39 pm, Wed, 1 February 23