ಮಧ್ಯಂತರ ಬಜೆಟ್ ಗೇಮ್ ಚೇಂಜರ್ ಎಂದು ಬಣ್ಣಿಸಿದ ಬಿಜೆಪಿ; ನಿರಾಶಾದಾಯಕ ಎಂದ ವಿಪಕ್ಷ

|

Updated on: Feb 01, 2024 | 2:46 PM

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ದೇಶದ ಅಭಿವೃದ್ಧಿ (ವಿಕಸಿತ್ ಭಾರತ್), ಸ್ವಾವಲಂಬಿ (ಆತ್ಮ ನಿರ್ಭರ್) ಮತ್ತು ವಿಶ್ವ ಗುರು (ವಿಶ್ವ ನಾಯಕ) ಆಗುವುದು ದೇಶದ ಗುರಿಯಾಗಿದೆ. ಈ ಬಜೆಟ್‌ನಿಂದ ದೇಶವು ಈಗಾಗಲೇ ಆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಮಧ್ಯಂತರ ಬಜೆಟ್ ಗೇಮ್ ಚೇಂಜರ್ ಎಂದು ಬಣ್ಣಿಸಿದ ಬಿಜೆಪಿ; ನಿರಾಶಾದಾಯಕ ಎಂದ ವಿಪಕ್ಷ
ಮಧ್ಯಂತರ ಬಜೆಟ್
Follow us on

ದೆಹಲಿ ಫೆಬ್ರವರಿ 01: ಮುಂಬರುವ 2024ರ ಲೋಕಸಭೆ ಚುನಾವಣೆಗೆ (Lok sabha Election) ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಗುರುವಾರ ಮಧ್ಯಂತರ ಬಜೆಟ್ (Interim Budget 2024) ಮಂಡಿಸಿದ್ದಾರೆ. ಸಚಿವರ ಭಾಷಣದ ನಂತರ, ರಾಜಕಾರಣಿಗಳು ಸರ್ಕಾರದ ಯೋಜನೆಯನ್ನು ವಿವರಿಸುವ ಹಣಕಾಸಿನ ದಾಖಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಉತ್ತೇಜನಕಾರಿ ಎಂದು ಬಣ್ಣಿಸಿದರೆ ವಿರೋಧ ಪಕ್ಷಗಳವರು ಈ ಬಜೆಟ್ ನಿರಾಶಾದಾಯಕ ಎಂದಿದ್ದಾರೆ

ಬಜೆಟ್ ಬಗ್ಗೆ ಬಿಜೆಪಿ ತೃಪ್ತಿ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಳೆದ ದಶಕದಲ್ಲಿ ದೇಶ ಕಂಡಿರುವ ಪರಿವರ್ತನೆಯ ಕುರಿತು ಮಾತನಾಡಿದ್ದಾರೆ. ದೇಶದ ಅಭಿವೃದ್ಧಿ (ವಿಕಸಿತ್ ಭಾರತ್), ಸ್ವಾವಲಂಬಿ (ಆತ್ಮ ನಿರ್ಭರ್) ಮತ್ತು ವಿಶ್ವ ಗುರು (ವಿಶ್ವ ನಾಯಕ) ಆಗುವುದು ದೇಶದ ಗುರಿಯಾಗಿದೆ. ಈ ಬಜೆಟ್‌ನಿಂದ ದೇಶವು ಈಗಾಗಲೇ ಆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಮಹಿಳೆಯರು, ಯುವಕರು, ರೈತರು ಮತ್ತು ಬಡವರ ಅಭಿವೃದ್ಧಿಯಿಂದ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ದೇಶವು ಈಗಾಗಲೇ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಸಿಂಧಿಯಾ ಹೇಳಿದರು.

ಬಜೆಟ್ ಉತ್ತೇಜನಕಾರಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಹಣಕಾಸು ಸಚಿವ ಜಗದೀಶ್ ದೇವದಾ ಕೂಡ ಮಧ್ಯಂತರ ಬಜೆಟ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಉತ್ತಮವಾಗಿದೆ.ಇದನ್ನು ಸ್ವಾಗತಿಸಬೇಕು. ಈ ಬಜೆಟ್‌ನಲ್ಲಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಎಲ್ಲರಿಗೂ ಕಾಳಜಿ ವಹಿಸಲಾಗಿದೆ. ಯೋಜನೆಗಳ ಲಾಭವನ್ನು ಮಧ್ಯಪ್ರದೇಶವೂ ಪಡೆಯುತ್ತದೆ ಎಂದಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಪೂನಂ ಮಹಾಜನ್, ಮಹಿಳೆಯೊಬ್ಬರು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ರಾಷ್ಟ್ರವನ್ನು ಸಶಕ್ತಗೊಳಿಸುತ್ತಿದ್ದಾರೆ, ಅವರು ದೇಶವನ್ನು ಮುನ್ನಡೆಸುವ ಮಹಿಳೆಯರೊಂದಿಗೆ ದೇಶವು ಮುಂದುವರಿಯಬೇಕು ಎಂದು ಯಾವಾಗಲೂ ನಂಬುತ್ತಾರೆ. ಬಡವರು, ಮಹಿಳೆ, ರೈತ, ಯುವ- ವಿಕಸಿತ ಭಾರತಕ್ಕಾಗಿ ನಾವು ಸಶಕ್ತಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಧ್ಯಂತರ ಬಜೆಟ್ ಅನ್ನು “ಐತಿಹಾಸಿಕ ಮತ್ತು ಗೇಮ್ ಚೇಂಜರ್ ಎಂದು ಬಣ್ಣಿಸಿದ್ದಾರೆ. ಶಿಕ್ಷಣ ಮತ್ತು ಸಂಶೋಧನೆಗೆ ವಿಶೇಷ ಗಮನ ನೀಡಲಾಗಿದೆ ಎಂದಿದ್ದಾರೆ ಅವರು. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವು ಆತ್ಮ ವಿಶ್ವಾಸದಿಂದಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ನಾವು ಮಾಡಿದ ಕೆಲಸ ಮತ್ತು ಅನುಸರಿಸುವ ನೀತಿಗಳಲ್ಲಿ ನಮಗೆ ನಂಬಿಕೆ ಇದ. ಈ ವಿಶ್ವಾಸಕ್ಕೆ ಅವರು ಪ್ರಧಾನಿಗೆ ಮನ್ನಣೆಯನ್ನೂ ನೀಡಿದರು. ಈ ಬಜೆಟ್‌ನಲ್ಲಿ ಬಡವರು, ರೈತರು ಮತ್ತು ಉದ್ಯಮಿಗಳ ಕಲ್ಯಾಣ ಎಲ್ಲವೂ ಇದೆ . ಮೋದಿ ಸರ್ಕಾರವು “ಕೆಲಸ” ಮಾಡುವುದರಲ್ಲಿ ನಂಬಿಕೆ ಹೊಂದಿದೆ. ಜುಲೈನಲ್ಲಿ ಹೊಸ ಘೋಷಣೆಗಳಿಗಾಗಿ ದೇಶವು ಕಾಯಬೇಕು ಎಂದು ಅವರು ಹೇಳಿದರು.

ಬಿಜೆಪಿ ನಾಯಕ ಕಿರಣ್ ರಿಜಿಜು ಅವರು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು “ಅದ್ಭುತ ಬಜೆಟ್” ಎಂದಿದ್ದಾರೆ. ಜಗತ್ತು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಉಜ್ವಲ ತಾಣವಾಗಿ ಹೊರಹೊಮ್ಮಿದೆ ಎಂದರು. “ಇದಕ್ಕೆ ಶ್ರೇಯಸ್ಸು ಉತ್ತಮ ನಾಯಕತ್ವಕ್ಕೆ ಹೋಗುತ್ತದೆ.” ಬಜೆಟ್ ಸಮತೋಲಿತವಾಗಿದೆ ಎಂದಿದ್ದಾರೆ ಅವರು

ಬಜೆಟ್ ನಿರಾಶಾದಾಯಕ: ವಿಪಕ್ಷ

ಬಜೆಟ್ ಮಂಡನೆ ವೇಳೆ ವಿತ್ತ ಸಚಿವರು ಮಾಡಿದ ಅತಿ ಚಿಕ್ಕ ಭಾಷಣದ ಬಗ್ಗೆ ಪ್ರತಿಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿಲ್ಲ. ಕಾಂಗ್ರೆಸ್ ಇದನ್ನು “ವೋಟ್ ಆನ್ ಅಕೌಂಟ್” ಬಜೆಟ್ ಎಂದು ಬಣ್ಣಿಸಿದೆ. ಈ ಮಧ್ಯಂತರ ಬಜೆಟ್ ಒಂದೇ ಒಂದು ಉದ್ದೇಶವನ್ನು ಹೊಂದಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರದ ಹಣ ಉಳಿಸಿಕೊಳ್ಳುವುದು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.

ವಿತ್ತೀಯ ಕೊರತೆಯ ಕುರಿತು ಮಾತನಾಡಿದ ಅವರು, ಭಾರತೀಯ ಆರ್ಥಿಕತೆಯು ಪ್ರಸ್ತುತ 18 ಲಕ್ಷ ಕೋಟಿ ರೂಪಾಯಿಗಳ ಕೊರತೆಯಿದಂ. ಅಂದರೆ ಸರ್ಕಾರ ತನ್ನ ಖರ್ಚಿಗೆ ಸಾಲ ಮಾಡುತ್ತಿತ್ತು ಎಂದಿದ್ದಾರೆ.

ತಿರುವನಂತಪುರಂ ಸಂಸದ ಶಶಿ ತರೂರ್ ಕೂಡಾ ತಿವಾರಿ ಮಾತನ್ನು ಬೆಂಬಲಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಮಾಡಿದ ಚಿಕ್ಕ ಭಾಷಣಗಳಲ್ಲಿ ಇದೂ ಒಂದಾಗಿದ್ದು, ಅದರಲ್ಲಿ ಹೆಚ್ಚಿನದೇನೂ ಬರಲಿಲ್ಲ ಎಂದರು. ಅವರು ಹೇಳಿದರು, ಎಂದಿನಂತೆ ಬಹಳಷ್ಟು ವಾಕ್ಚಾತುರ್ಯದ ಭಾಷೆ, ಅನುಷ್ಠಾನದಲ್ಲಿ ಬಹಳ ಕಡಿಮೆ ಕಾಂಕ್ರೀಟ್. ಅವರು (ನಿರ್ಮಲಾ ಸೀತಾರಾಮನ್) ವಿದೇಶಿ ಹೂಡಿಕೆಯ ಬಗ್ಗೆ ಮಾತನಾಡಿದ್ದಾರೆ, ಆ ಹೂಡಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿಲಲ್ಲ. ಅವರು ‘ವಿಶ್ವಾಸ’ ಮತ್ತು ‘ಭರವಸೆ’ ಮುಂತಾದ ಅಸ್ಪಷ್ಟ ಭಾಷೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು. ಆದರೆ ಕಠಿಣ ಅಂಕಿಅಂಶಗಳ ವಿಷಯಕ್ಕೆ ಬಂದಾಗ, ಕೆಲವೇ ಅಂಕಿಅಂಶಗಳು ಲಭ್ಯವಿವೆ. ಇದು ಸಂಪೂರ್ಣವಾಗಿ ಸಾಕಷ್ಟು ವಸ್ತು ಅಥವಾ ಆರ್ಥಿಕತೆಯ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಇಚ್ಛೆಯಿಲ್ಲದ ವಿಷಯದಲ್ಲಿ ಬಹಳ ನಿರಾಶಾದಾಯಕ ಭಾಷಣವಾಗಿದೆ.

ಇದನ್ನೂ ಓದಿ: Union Budget 2024: ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್​: ಮೋದಿ

ಜುಲೈನಲ್ಲಿ ನಿಜವಾದ ಬಜೆಟ್ ಬರುವುದರಿಂದ ಇದನ್ನು ಬಜೆಟ್ ಎಂದು ಪರಿಗಣಿಸುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಸಂಸದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಹೀಗಾದಾಗ ಜನರಿಗೆ ಅನುಕೂಲವಾಗುತ್ತದೆ, ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳು ಬೆಳೆಯುತ್ತವೆ. ಅದರ ಪರಿಣಾಮವಾಗಿ ಇಡೀ ರಾಷ್ಟ್ರವು ಪ್ರಗತಿ ಹೊಂದುತ್ತದೆ ಎಂದು ಅವರು ಆಶಿಸಿದರು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ