Union Budget 2024: ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್​: ಮೋದಿ

ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್​ ಎಂದು ಪ್ರಧಾನಿ  ನರೇಂದ್ರ ಮೋದಿ(Narendra Modi) ಬಣ್ಣಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು. ಇದು ಐತಿಹಾಸಿಕ ಬಜೆಟ್​ ಆಗಿದ್ದು, ಯುವಕರು, ಮಹಿಳೆಯರು, ಬಡವರು, ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಬಜೆಟ್ ಎಲ್ಲರ ಅಭಿವೃದ್ಧಿ ಮಾಡಲಿದೆ, ಬಜೆಟ್ ನಲ್ಲಿ ಎಲ್ಲ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on: Feb 01, 2024 | 2:10 PM

ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್​ ಎಂದು ಪ್ರಧಾನಿ  ನರೇಂದ್ರ ಮೋದಿ(Narendra Modi) ಬಣ್ಣಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು. ಇದು ಐತಿಹಾಸಿಕ ಬಜೆಟ್​ ಆಗಿದ್ದು, ಯುವಕರು, ಮಹಿಳೆಯರು, ಬಡವರು, ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಬಜೆಟ್ ಎಲ್ಲರ ಅಭಿವೃದ್ಧಿ ಮಾಡಲಿದೆ, ಬಜೆಟ್ ನಲ್ಲಿ ಎಲ್ಲ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಇಂದಿನ ಬಜೆಟ್ ಕೇವಲ ಮಧ್ಯಂತರ ಬಜೆಟ್ ಅಲ್ಲ, ಎಲ್ಲರನ್ನೂ ಒಳಗೊಳ್ಳುವ ಮತ್ತು ವಿನೂತನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಬಜೆಟ್ ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಆಧಾರ ಸ್ತಂಭಗಳಾದ – ಯುವಕರು, ಬಡವರು, ಮಹಿಳೆಯರು, ರೈತರು. ಈ ಬಜೆಟ್ ದೇಶದ ಭವಿಷ್ಯ ಕಟ್ಟುವ ಬಜೆಟ್ ಆಗಿದೆ.

ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಬಜೆಟ್‌ನಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ರಚಿಸುವುದಾಗಿ ಘೋಷಿಸಲಾಗಿದೆ. ಸ್ಟಾರ್ಟಪ್‌ಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿಯ ವಿಸ್ತರಣೆಯನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮತ್ತಷ್ಟು ಓದಿ: Union Budget 2024: ರಾಮಮಂದಿರ ಪ್ರತಿಷ್ಠಾಪನೆಯಂದು ಮೋದಿ ನೀಡಿದ ಭರವಸೆ ಸಾಕಾರ: ಒಂದು ಕೋಟಿ ಹೊಸ ಮನೆಗಳಿಗೆ ಸೋಲಾರ್ ಸಂಪರ್ಕ

ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಅತ್ಯಂತ ಮಹತ್ವದ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ನ್ಯಾನೋ ಡಿಎಪಿ ಬಳಕೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿಸ್ತರಣೆ ಮತ್ತು ಆತ್ಮನಿರ್ಭರ ಆಯಿಲ್ ಸೀಡ್ ಅಭಿಯಾನವು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.

ನಾವು ಹಳ್ಳಿ ಮತ್ತು ನಗರಗಳಲ್ಲಿ ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು ಈಗ ನಾವು ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ