Karnataka Budget: ಬೊಮ್ಮಾಯಿ ಬಜೆಟ್ನಿಂದ ಸಣ್ಣ ಉದ್ಯಮಗಳಿಗೆ ನಿರೀಕ್ಷೆಗಳೇನು?
Budget Expections By Small Business: ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ನಿಂದ ರಾಜ್ಯದ ಸಣ್ಣ ಉದ್ಯಮಗಳು ಅಥವಾ ಎಂಎಸ್ಎಂಇ ವಲಯಗಳು ಏನೇನು ನಿರೀಕ್ಷಿಸುತ್ತಿವೆ? ಏನೆಲ್ಲಾ ಅಪೇಕ್ಷೆಗಳಿಗೆ ಎಂಬ ವಿಚಾರದ ಬಗ್ಗೆ ರಾಷ್ಟ್ರೀಯ ಎಂಎಸ್ಎಂಇ ಮಂಡಳಿ ಸದಸ್ಯರೊಬ್ಬರು ಮಾತನಾಡಿದ್ದಾರೆ.
ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ (Karnataka Budget 2023) ಫೆಬ್ರುವರಿ 17ರಂದು ಇದೆ. ಸಿಎಂ ಬೊಮ್ಮಾಯಿ (Basavaraj Bommai) ಮಂಡಿಸಲಿರುವ ಈ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿಗೆ. ಚುನಾವಣೆಗಳು ಸಮೀಪ ಇರುವ ಹಿನ್ನೆಲೆಯಲ್ಲಿ ಭರಪೂರ ಘೋಷಣೆಗಳಾಗುವ ನಿರೀಕ್ಷೆ ಇದೆ. ರಾಷ್ಟ್ರೀಯ ಎಂಎಸ್ಎಂಇ ಮಂಡಳಿ ಸದಸ್ಯ ಡಾ. ರಾವ್ ಈ ಬಗ್ಗೆ ಮನಿ9 ಜೊತೆ ಮಾತನಾಡಿದ್ದು, ಸಣ್ಣ ಉದ್ಯಮಗಳಿಗೆ ಬಜೆಟ್ ಪುಷ್ಟಿ ನೀಡುವುದು ಎಷ್ಟು ಅಗತ್ಯ ಎಂಬುದನ್ನು ತಿಳಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಬಂದಿರುವ ಕೆಲ ವಿಶೇಷ ಅನುಕೂಲಗಳನ್ನು ಕ್ರೋಢೀಕರಿಸಿ, ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಕೈಗಾರಿಕೆ ಇತ್ಯಾದಿ ವಲಯಕ್ಕೆ ಬಲ ತುಂಬಿಸಬೇಕು. ಗ್ರಾಮೀಣ ಭಾಗದಲ್ಲಿ ಸೂಕ್ಷ್ಮ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ತಮಿಳುನಾಡು ಮೊದಲಾದ ರಾಜ್ಯಗಳು ಜಾರಿಗೆ ತಂದಿರುವ ಎಂಎಸ್ಎಂಇ ನೀತಿಯನ್ನು ರಾಜ್ಯವೂ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.
ಇದು ಕೇವಲ ಚುನಾವಣಾ ಬಜೆಟ್ ಮಾತ್ರ ಆಗದೇ, ಮೂರು ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಹಾಕಬೇಕು ಎಂದು ರಾವ್ ಸಲಹೆ ನೀಡಿದ್ದಾರೆ. ಅದರ ವಿಡಿಯೋ ಇಲ್ಲಿದೆ:
ಬಜೆಟ್ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ