Karnataka Budget 2023: ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ತು? ಇಲ್ಲಿ ಸಂಪೂರ್ಣ ಮಾಹಿತಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 17, 2023 | 3:09 PM

ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2023-2ನೇ ಸಾಲಿನ ಬಜೆಟ್​ನಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಗಿಫ್ಟ್​ ಕೊಟ್ಟಿದ್ದಾರೆ..? ಬೊಮ್ಮಾಯಿ ಬಜೆಟ್​ ಕ್ರಾಂತಿ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

Karnataka Budget 2023: ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ತು? ಇಲ್ಲಿ ಸಂಪೂರ್ಣ ಮಾಹಿತಿ
ಬಜೆಟ್ ಪ್ರತಿ ಜತೆ ಬೊಮ್ಮಾಯಿ
Follow us on

ಬೆಂಗಳೂರು: ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು (ಫೆಬ್ರವರಿ 17) 2ನೇ ಬಾರಿಗೆ ರಾಜ್ಯ ಬಜೆಟ್​(Karnataka Budget 2023) ಮಂಡನೆ ಮಾಡಿದರು. ಅದರಲ್ಲೂ ಚುನಾವಣಾ ದಿನಗಳ ಹತ್ತಿರ ಇರುವುದರಿಂದ ಈ ಬಜೆಟ್ ರಾಜ್ಯ ಬಿಜೆಪಿ ಮಾಡು ಇಲ್ಲವೇ ಮಡಿ ಎಂಬಂತ ಅಂದ್ರೂ ತಪ್ಪಾಗಲಿಕ್ಕಿಲ್ಲ.. ಯಾಕಂದ್ರೆ ಎಲ್ಲಾ ವರ್ಗಗಳನ್ನ ಸಮಾಧಾನ ಪಡಿಸಬೇಕು. ಎಲ್ಲರ ಮನ ಮುಟ್ಟಬೇಕು ಎನ್ನುವ ದಿಸೆಯಲ್ಲಿ ಲೆಕ್ಕಾಚಾರದ ಕೋಟೆಯನ್ನ ಕಟ್ಟಿದೆ. ಈ ಬಾರಿ ಬರೋಬ್ಬರಿ 3.9 ಲಕ್ಷ ಕೋಟಿ ಗಾತ್ರದ ಬಜೆಟ್​ ಮಂಡನೆ ಮಾಡಲಾಗಿದೆ. ಸರ್ವೆ ಜನೋಃ ಸುಖಿನೋ ಭವಂತು. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಧ್ಯೆಯದಡಿ ಈ ಬಾರಿ ಬಜೆಟ್​ಗೆ ಮನ್ನಣೆ ನೀಡಲಾಗಿದೆ.

ಇದನ್ನೂ ಓದಿ: Karnataka Budget 2023: ಬಜೆಟ್ ಮಂತ್ರ​ ಚುನಾವಣಾ ತಂತ್ರ; ಜನಪ್ರಿಯ ಘೋಷಣೆಗಳೇನೆಲ್ಲ? ಇಲ್ಲಿದೆ ಮಾಹಿತಿ

ಮತ ಶಿಕಾರಿಯ ಗುರಿಯನ್ನಿಟ್ಟುಕೊಂಡು, ಬಜೆಟ್​ಗೆ ಬುನಾದಿ ಹಾಕಿರುವ ಬೊಮ್ಮಾಯಿ, ಜನ ಸಾಮಾನ್ಯರ ಭಾರ ಇಳಿಸೋಕೆ ಮುಂದಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಈ ಬಾರಿ ಕೊಡುಗೆಗಳ ಮಳೆಯನ್ನೇ ಹರಿಸಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಕೇಸರಿ ಭದ್ರಕ್ಕೆ ಬೊಮ್ಮಾಯಿ ಬಿಗ್​ ಪ್ಲ್ಯಾನ್​ ಮಾಡಿದ್ದಾರೆ. ಇನ್ನು ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು.?

  1.  ಶಿಕ್ಷಣ ಕ್ಷೇತ್ರ : 37 ಸಾವಿರದ 960 ಕೋಟಿ ರೂ.
  2. ಜಲಸಂಪನ್ಮೂಲ : 22 ಸಾವಿರದ 854 ಕೋಟಿ ರೂ.
  3. ಗ್ರಾಮೀಣಾಭಿವೃದ್ಧಿ : 20 ಸಾವಿರದ 494 ಕೋಟಿ ರೂ.
  4. ನಗರಾಭಿವೃದ್ಧಿ : 17 ಸಾವಿರದ 938 ಕೋಟಿ ರೂ.
  5. ಕಂದಾಯ : 15 ಸಾವಿರದ 943 ಕೋಟಿ ರೂ.
  6. ಆರೋಗ್ಯ & ಕುಟುಂಬ ಕಲ್ಯಾಣ : 15 ಸಾವಿರದ 151 ಕೋಟಿ ರೂ.
  7. ಒಳಾಡಳಿತ & ಸಾರಿಗೆ ಇಲಾಖೆ : 14 ಸಾವಿರದ 509 ಕೋಟಿ ರೂ.
  8. ಇಂಧನ ಇಲಾಖೆ : 13 ಸಾವಿರದ 803 ಕೋಟಿ ರೂ.
  9. ಸಮಾಜಕಲ್ಯಾಣ : 11 ಸಾವಿರದ 163 ಕೋಟಿ ರೂ.
  10. ಲೋಕೋಪಯೋಗಿ : 10 ಸಾವಿರದ 741 ಕೋಟಿ ರೂ.
  11. ಕೃಷಿ & ತೋಟಗಾರಿಕೆ : 9 ಸಾವಿರದ 456 ಕೋಟಿ ರೂ.
  12. ಮಹಿಳಾ & ಮಕ್ಕಳ ಕಲ್ಯಾಣ : 5 ಸಾವಿರದ 676 ಕೋಟಿ ರೂಪಾಯಿ
  13. ಆಹಾರ ಇಲಾಖೆ : 4 ಸಾವಿರದ 600 ಕೋಟಿ ರೂ.
  14. ವಸತಿ ಇಲಾಖೆ : 3 ಸಾವಿರದ 787 ಕೋಟಿ ರೂ. ಮೀಸಲಿಡಲಾಗಿದೆ.

ಹೀಗೆ ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ಕೊಟ್ಟಿರುವ ಸಿಎಂ ಬೊಮ್ಮಾಯಿ, ರಾಜಕೀಯ ಲೆಕ್ಕಾಚಾರದೊಂದಿಗೆ ಬಜೆಟ್ ಮಂಡಿಸಿದ್ದಾರೆ.

ಕರ್ನಾಟಕ ಬಜೆಟ್ ಹೈಲೈಟ್ಸ್

ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು

Published On - 3:07 pm, Fri, 17 February 23