AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2024: ವೋಟ್ ಆನ್ ಅಕೌಂಟ್, ಮಧ್ಯಂತರ ಬಜೆಟ್ ಎಂದರೇನು? ಪೂರ್ಣಪ್ರಮಾಣದ ಬಜೆಟ್​ಗೂ ಇವಕ್ಕೂ ಏನು ವ್ಯತ್ಯಾಸ?

Interim Budget vs Vote on Account: ಕೇಂದ್ರ ಬಜೆಟ್ ಎಂಬುದು ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ವೆಚ್ಚದ ಬಾಬತ್ತು ಆಗಿರುತ್ತದೆ. ಒಂದು ವರ್ಷದ ಸಿದ್ಧ ಸೂತ್ರದಂತೆ. ಮಧ್ಯಂತರ ಬಜೆಟ್ ಎಂಬುದು ಚುನಾವಣೆಗೆ ಮುಂಚೆ ನಡೆಯುವ ಸರ್ಕಾರದ ಕೊನೆಯ ಬಜೆಟ್. ಇದರಲ್ಲಿ ದೊಡ್ಡ ಘೋಷಣೆಗಳನ್ನು ಪ್ರಕಟಿಸುವಂತಿಲ್ಲ. ವೋಟ್ ಆನ್ ಅಕೌಂಟ್ ಎಂಬುದು ಹೊಸ ಸರ್ಕಾರದಿಂದ ಬಜೆಟ್ ಮಂಡನೆ ಆಗುವವರೆಗೂ ಸರ್ಕಾರ ಅಗತ್ಯ ವೆಚ್ಚ ಮಾಡಲು ನೀಡಲಾಗುವ ಅನುಮತಿ.

Budget 2024: ವೋಟ್ ಆನ್ ಅಕೌಂಟ್, ಮಧ್ಯಂತರ ಬಜೆಟ್ ಎಂದರೇನು? ಪೂರ್ಣಪ್ರಮಾಣದ ಬಜೆಟ್​ಗೂ ಇವಕ್ಕೂ ಏನು ವ್ಯತ್ಯಾಸ?
ಕೇಂದ್ರ ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 11, 2024 | 1:03 PM

Share

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಹೀಗಾಗಿ, ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್ ಅನ್ನು ಇಂಟೆರಿಮ್ ಬಜೆಟ್ ಅಥವಾ ಮಧ್ಯಂತರ ಬಜೆಟ್ (Interim Budget) ಎಂದು ಪರಿಗಣಿಸಲಾಗುತ್ತದೆ. ಪೂರ್ಣಪ್ರಮಾಣದ ಬಜೆಟ್ ಆಗಿರುವುದಿಲ್ಲ. ಚುನಾವಣೆ ಬಳಿಕ ಬರುವ ಹೊಸ ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡುತ್ತದೆ. ಚುನಾವಣೆಗೆ ಮುಂಚೆ ನಡೆಯುವ ಬಜೆಟ್ ಹೊಸ ಸರ್ಕಾರದಿಂದ ಮೊದಲ ಬಜೆಟ್ ಮಂಡನೆ ಆಗುವವರೆಗೂ ಸರ್ಕಾರದ ವೆಚ್ಚಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಕೇಂದ್ರ ಬಜೆಟ್ ಎಂದರೇನು?

ಬಜೆಟ್ ಎಂಬುದು ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಆಗಿರುತ್ತದೆ. ಈ ವರ್ಷದ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗೆ ಒಂದು ಹಣಕಾಸು ವರ್ಷ ಆಗಿರುತ್ತದೆ. ಬಜೆಟ್​ನ ಲೆಕ್ಕಾಚಾರ ಮಾರ್ಚ್ 31ಕ್ಕೆ ಮುಗಿಯುತ್ತದೆ.

ಬಜೆಟ್​ನಲ್ಲಿ ಸರ್ಕಾರಕ್ಕೆ ಒಂದು ವರ್ಷದಲ್ಲಿ ಬರಬಹುದಾದ ಎಲ್ಲಾ ಆದಾಯಗಳನ್ನು ತೋರಿಸಲಾಗುತ್ತದೆ. ಹಾಗೆಯೇ, ವೆಚ್ಚಗಳ ಪಟ್ಟಿಯೂ ಇರುತ್ತದೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ವಿನಿಯೋಗ ಮಾಡಲಾಗುತ್ತದೆ, ಯಾವ್ಯಾವ ಯೋಜನೆಗಳಿಗೆ ಎಷ್ಟು ಹಣ ಕೊಡಲಾಗುತ್ತದೆ ಎಲ್ಲಾ ವಿವರವೂ ಬಜೆಟ್​ನಲ್ಲಿ ಇರುತ್ತದೆ. ಅದರ ಪ್ರಕಾರವೇ ಸರ್ಕಾರ ವೆಚ್ಚ ಮಾಡುತ್ತದೆ.

ಇದನ್ನೂ ಓದಿ: ಬಜೆಟ್​ಗೆ ಸಿದ್ಧತೆ ಎಷ್ಟು ತಿಂಗಳು ಮುಂಚೆ ಶುರುವಾಗುತ್ತೆ? ಯೂನಿಯನ್ ಬಜೆಟ್ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಮಧ್ಯಂತರ ಬಜೆಟ್​ನ ಮಿತಿ ಏನು?

ಚುನಾವಣೆಗೆ ಮುಂಚಿನ ಮಧ್ಯಂತರ ಬಜೆಟ್​ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇದನ್ನು ನಿರ್ಬಂಧಿಸಲಾಗಿದೆ. ಹಾಗೆಯೇ, ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸುವಂತಿಲ್ಲ.

ಆದರೆ, ತೆರಿಗೆ ಹೆಚ್ಚಳ, ಇಳಿಕೆ ಇತ್ಯಾದಿ ಕ್ರಮಗಳನ್ನು ಇಂಟರಿಮ್ ಬಜೆಟ್​ನಲ್ಲಿ ಘೋಷಿಸಬಹುದು.

ವೋಟ್ ಆನ್ ಅಕೌಂಟ್ ಎಂದರೇನು?

ಮಧ್ಯಂತರ ಬಜೆಟ್ ವೇಳೆ ವೋಟ್ ಆನ್ ಅಕೌಂಟ್ ಇರುತ್ತದೆ. ಇದು ಮಾರ್ಚ್ 31ರಿಂದ ಹೊಸ ಸರ್ಕಾರದ ಬಜೆಟ್ ಮಂಡನೆ ಆಗುವವರೆಗೂ ಸರ್ಕಾರಿ ನೌಕರರ ಸಂಬಳ ಮತ್ತಿತರ ಅಗತ್ಯ ವೆಚ್ಚಗಳಿಗೆಂದು ವೋಟ್ ಆನ್ ಅಕೌಂಟ್ ಇರುತ್ತದೆ.

ಇದನ್ನೂ ಓದಿ: Union Budget: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಜೆಟ್; ಏನೇನು ನಿರೀಕ್ಷೆಗಳಿವೆ? ಮುಂಗಡಪತ್ರ ಹೇಗಿರಲಿದೆ?

ವೋಟ್ ಆನ್ ಅಕೌಂಟ್​ಗೆ ಯಾವುದೇ ಚರ್ಚೆ ಇಲ್ಲದೇ ಅನುಮತಿ ಸಿಗುತ್ತದೆ. ಮಧ್ಯಂತರ ಬಜೆಟ್​ಗೆ ಸದನದಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Fri, 5 January 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!