2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

|

Updated on: Jan 30, 2024 | 10:38 AM

2 New Schemes In 2019 Interim Budget: 2019ರ ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರುವರಿ 1ರಂದು ಪೀಯುಶ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ್ದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿಎಂ ಶ್ರಮಯೋಗಿ ಮಾನಧನ್ ಯೋಜನೆಯನ್ನು ಬಿಡುಗಡೆ ಮಾಡಲಾಗಿತ್ತು. 5 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಲೀಫ್ ಹಾಗೂ ಸಂಬಳದಾರರಿಗೆ 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶ ಕೊಡಲಾಯಿತು.

2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?
ಪೀಯುಶ್ ಗೋಯಲ್
Follow us on

ನವದೆಹಲಿ, ಜನವರಿ 30: ಚುನಾವಣೆಗೆ ಮುನ್ನ ಪ್ರಸ್ತುತಪಡಿಸಲಾಗುವ ಆಯವ್ಯಯ ಪತ್ರವನ್ನು ಮಧ್ಯಂತರ ಬಜೆಟ್ (Interim Budget) ಎಂದು ಪರಿಗಣಿಸಲಾಗುತ್ತದೆ. ಚುನಾವಣೆಯಲ್ಲಿ ಮತದಾರರನ್ನು ಪ್ರಲೋಬನೆಗೊಳಪಡಿಸುವ ಸಾಧ್ಯತೆ ಇರುವುದರಿಂದ ದೊಡ್ಡ ದೊಡ್ಡ ಸ್ಕೀಮ್​ಗಳು ಇತ್ಯಾದಿಯನ್ನು ಬಜೆಟ್​ನಲ್ಲಿ ಮಂಡಿಸಬಾರದು ಎನ್ನುವ ನಿಯಮ ಇದೆ. ಆದರೆ, ಮಾಮೂಲಿಯ ಬಜೆಟ್ ರೀತಿಯಲ್ಲಿ ಸರ್ಕಾರದ ಆದಾಯ ಮತ್ತು ಖರ್ಚುವೆಚ್ಚಗಳ ಪಟ್ಟಿ ಮಧ್ಯಂತರ ಬಜೆಟ್​ನಲ್ಲಿ ಇರುತ್ತದೆ. ಸಣ್ಣ ಪುಟ್ಟ ತೆರಿಗೆ ಬದಲಾವಣೆ, ಹೊಸ ಯೋಜನೆ ಇತ್ಯಾದಿ ಒಳಗೊಂಡಿರಬಹುದು. 2019ರಲ್ಲಿ ಫೆಬ್ರುವರಿ 1ರಂದು ಮಂಡನೆಯಾದ ಮಧ್ಯಂತರ ಬಜೆಟ್​ನಲ್ಲಿ ಎರಡು ಹೊಸ ಯೋಜನೆಗಳನ್ನು ಸರ್ಕಾರ ಆರಂಭಿಸಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ಪೀಯುಶ್ ಗೋಯಲ್ ಅಂದು ಇಂಟೆರಿಮ್ ಬಜೆಟ್ ಮಂಡಿಸಿದ್ದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಮತ್ತು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್​ಧನ್ ಯೋಜನೆಗಳನ್ನು (PM Shram Yogi Maandhan Yojana) ಅವರು ತಮ್ಮ ಬಜೆಟ್​ನಲ್ಲಿ ಪರಿಚಯಿಸಿದ್ದರು.

ಪಿಎಂ ಕಿಸಾನ್ ಯೋಜನೆ

ಎರಡು ಹೆಕ್ಟೇರ್ (5 ಎಕರೆ) ಹಾಗೂ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಿ ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ವರ್ಷದಲ್ಲಿ ತಲಾ 2,000 ರೂಗಳ ಮೂರು ಸಮಾನ ಕಂತುಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅಂದು ಘೋಷಣೆ ಆಗಿದ್ದು. ಇದೀಗ ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿದವರೂ ಕೂಡ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಬಹುದು.

ಇದನ್ನೂ ಓದಿ: DA Hike, Arrears: ಈ ಬಾರಿಯೂ 4 ಪ್ರತಿಶತ ಡಿಎ ಹೆಚ್ಚಳ ಖಾತ್ರಿಯಾ? 18 ತಿಂಗಳ ಡಿಎ ಬಾಕಿ ಹಣ ಬಿಡುಗಡೆಗೆ ಪ್ರಸ್ತಾಪ

ಪಿಎಂ ಶ್ರಮ್ ಯೋಗಿ ಮಾನ್​ದನ್ ಯೋಜನೆ

ಅಸಂಘಟಿತ ವಲಯದ ಕಾರ್ಮಿಕರು ಮತ್ತು ಶ್ರಮಿಕರಿಗೆಂದು ರೂಪಿಸಲಾದ ಯೋಜನೆ ಇದು. 60 ವರ್ಷದ ಬಳಿಕ ಮಾಸಿಕ 3,000 ರೂ ಪಿಂಚಣಿ ತರುವ ಉದ್ದೇಶದ್ದು. ಈ ಯೋಜನೆಗೆ ನೊಂದಾಯಿಸುವ ಸದಸ್ಯರು ತಿಂಗಳಿಗೆ 55 ರೂನಿಂದ 200 ರೂವರೆಗೆ ನಿಯಮಿತವಾಗಿ ಕಟ್ಟಿಕೊಂಡು ಹೋಗಬೇಕು. 18 ವರ್ಷದಿಂದ 40 ವರ್ಷದೊಳಗಿನ ವಯಸ್ಸಿನ ಹಾಗು 15,000 ರೂಗಿಂತ ಕಡಿಮೆ ಮಾಸಿಕ ವರಮಾನ ಇರುವ ವ್ಯಕ್ತಿಗಳು ಈ ಯೋಜನೆಗೆ ನೊಂದಾಯಿಸಬಹುದು.

2019ರ ಬಜೆಟ್​ನಲ್ಲಿ ಬೇರೆ ಏನಿತ್ತು ಹೈಲೈಟ್ಸ್?

ಐದು ಲಕ್ಷ ರೂವರೆಗಿನ ವಾರ್ಷಿಕ ಆದಾಯ ಇರುವ ಗುಂಪಿಗೆ ಇನ್ಕಮ್ ಟ್ಯಾಕ್ಸ್ ರಿಲೀಫ್ ನೀಡಲಾಯಿತು. ಸಂಬಳ ಪಡೆಯುವ ವರ್ಗದವರಿಗೆ 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಒದಗಿಸಲಾಯಿತು.

ಇದನ್ನೂ ಓದಿ: Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು

ಕಳೆದ ಲೋಕಸಭಾ ಚುನಾವಣೆಗೆ ಮುನ್ನ ರೈತರು ಮತ್ತು ಶ್ರಮಿಕರಿಗೆ ಸರ್ಕಾರ ತನ್ನ ಹೊಸ ಯೋಜನೆಗಳ ಮೂಲಕ ಒಂದಷ್ಟು ರಿಲೀಫ್ ಕೊಟ್ಟಿತ್ತು. ಈ ಬಾರಿಯ ಮಧ್ಯಂತರ ಬಜೆಟ್​ನಲ್ಲಿ ಹೊಸ ಯೋಜನೆಗಳು ಬರುತ್ತವಾ ಕಾದು ನೋಡಬೇಕು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ