ಇದು ಮಿತ್ರ್ ಕಾಲ್ ಬಜೆಟ್, ಯಾವುದೇ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿಲ್ಲ: ಕೇಂದ್ರ ಬಜೆಟ್ ಬಗ್ಗೆ ರಾಹುಲ್ ಗಾಂಧಿ ಟೀಕೆ
Union Budget 2023: ಮಿತ್ರ್ ಕಾಲ್ ಬಜೆಟ್ ಯಾವುದೇ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಯಾವುದೇ ಯೋಜನೆ ಹೊಂದಿಲ್ಲ. ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ.ಶೇ 1 ಶ್ರೀಮಂತರು ಶೇ 40 ಸಂಪತ್ತು ಹೊಂದಿದ್ದಾರೆ. ಶೇ 50 ಬಡವರು ಶೇ64 ಜಿಎಸ್ಟಿ ಪಾವತಿ ಮಾಡುತ್ತಾರೆ
ದೆಹಲಿ: ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಇತ್ತೀಚಿನ ಕೇಂದ್ರ ಬಜೆಟ್ (Union Budget 2023) ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ ಬೆಳಗ್ಗೆ ಕೇಂದ್ರ ಬಜೆಟ್ 2024 ಮಂಡಿಸಿದ್ದು, ಇದಕ್ಕೆ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮಿತ್ರ್ ಕಾಲ್ ಬಜೆಟ್ ಯಾವುದೇ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಯಾವುದೇ ಯೋಜನೆ ಹೊಂದಿಲ್ಲ. ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ. ಶೇ 1 ಶ್ರೀಮಂತರು ಶೇ 40 ಸಂಪತ್ತು ಹೊಂದಿದ್ದಾರೆ. ಶೇ 50 ಬಡವರು ಶೇ64 ಜಿಎಸ್ಟಿ ಪಾವತಿ ಮಾಡುತ್ತಾರೆ.ಶೇ 42ಯುವಕರು ನಿರುದ್ಯೋಗಿಗಳು- ಆದರೂ, ಪ್ರಧಾನಿ ಕಾಳಜಿ ವಹಿಸುವುದಿಲ್ಲ! ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಬಜೆಟ್ ಅನ್ನು ಘೋಷಣೆಗಳಲ್ಲಿ ದೊಡ್ಡದು ಮತ್ತು ಆದರೆ ಕೊಟ್ಟದ್ದು ಕಡಿಮೆ ಎಂದಿದೆ. “ಈ ಬಜೆಟ್ ಅನ್ನು ‘ನಾಮ್ ಬಡೇ ಔರ್ ದರ್ಶನ್ ಛೋಟೆ ಬಜೆಟ್’ (ಘೋಷಣೆಗಳಲ್ಲಿ ದೊಡ್ಡದು ಮತ್ತು ವಿತರಣೆಯಲ್ಲಿ ಕಡಿಮೆ) ಎಂದು ಕರೆಯಲಾಗುವುದು” ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೃಹತ್ ನಿರುದ್ಯೋಗಕ್ಕೆ ಪರಿಹಾರ ಕಂಡುಕೊಳ್ಳಲು ಈ ಬಜೆಟ್‌ನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಹಣದುಬ್ಬರದಿಂದ ಪ್ರತಿ ಮನೆಗೂ ತೊಂದರೆಯಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಬಜೆಟ್‌ನಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಇಳಿಕೆ ಮಾಡುವ ಯಾವುದೇ ಅಂಶವಿಲ್ಲ ಎಂದು ಖರ್ಗೆ ಹೇಳಿದ್ದಾರೆ.
‘Mitr Kaal’ Budget has: NO vision to create Jobs NO plan to tackle Mehngai NO intent to stem Inequality
1% richest own 40% wealth, 50% poorest pay 64% of GST, 42% youth are unemployed- yet, PM doesn’t Care!
This Budget proves Govt has NO roadmap to build India’s future.
— Rahul Gandhi (@RahulGandhi) February 1, 2023
“ಒಟ್ಟಾರೆಯಾಗಿ, ಮೋದಿ ಸರ್ಕಾರವು ಜನರ ಜೀವನವನ್ನು ಕಷ್ಟಕರವಾಗಿಸಿದೆ. ದೇಶದ ಆರ್ಥಿಕತೆಯು ಆಳವಾಗಿ ಘಾಸಿಗೊಂಡಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Union Budget 2023: ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬಜೆಟ್‌ನಲ್ಲಿ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ನಿರ್ಮಲಾ ಸೀತಾರಾಮನ್ ಅವರು “ತಮ್ಮ ಭಾಷಣದಲ್ಲಿ ಎಲ್ಲಿಯೂ ನಿರುದ್ಯೋಗ, ಬಡತನ, ಅಸಮಾನತೆ ಅಥವಾ ಸಮಾನತೆ ಪದಗಳನ್ನು ಉಲ್ಲೇಖಿಸಿಲ್ಲ. ಕರುಣೆಯಿಂದ, ಅವರು ಬಡವರು ಎಂಬ ಪದವನ್ನು ಎರಡು ಬಾರಿ ಉಲ್ಲೇಖಿಸಿದ್ದಾರೆ” ಎಂದಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ಅವರು ಬಜೆಟ್ “ಅರ್ಧ ಗಂಟೆ” ಕೆಲಸದಂತೆ ತೋರುತ್ತಿದೆ ಎಂದು ಹೇಳಿದರು.
“ಅವರು ಮಂಡಿಸಿದ ಬಜೆಟ್, ನಾನು ಮಾಡಿದ್ದರೆ ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದೆ, ಬಡವರಿಗಾಗಿ ಬಜೆಟ್ ಮಂಡಿಸುವುದು ಹೇಗೆ, ಜನಸಾಮಾನ್ಯರಿಗೆ ಹೇಗೆ ಬಜೆಟ್ ಮಂಡಿಸುತ್ತೀರಿ, ವಸ್ತುಗಳ ಬೆಲೆಯನ್ನು ಹೇಗೆ ನಿಯಂತ್ರಿಸುತ್ತೀರಿ? ನಾನು ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ನಾವು ಬಜೆಟ್ ಮಂಡಿಸುತ್ತೇವೆ. ನಾವು ತೆರಿಗೆಗಳನ್ನು ಹೆಚ್ಚಿಸುವುದಿಲ್ಲ. ಜನರಿಗೆ ತೊಂದರೆಯಾಗದಂತೆ ನಾವು ಖಚಿತಪಡಿಸುತ್ತೇವೆ, ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ಮಮತಾ ಹೇಳಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಜೆಟ್ “ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ” ಎಂದು ಹೇಳಿದರು.
“ಈ ಬಜೆಟ್ ಬಡವರು, ಮಧ್ಯಮವರ್ಗದವರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ನನಸಾಗಿಸುತ್ತದೆ..ನಮ್ಮ ಸರ್ಕಾರ ಮಧ್ಯಮ ವರ್ಗದ ಸಬಲೀಕರಣ ಮತ್ತು ಜೀವನ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನಾವು ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ ಮತ್ತು ಪರಿಹಾರವನ್ನು ನೀಡಿದ್ದೇವೆ ಎಂದಿದ್ದಾರೆ ಮೋದಿ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Wed, 1 February 23