Nirmala Sitharaman Pressmeet Highlights: ಮಹಿಳಾ ಸಬಲೀಕರಣ, ಪರಿಸರ ಸ್ನೇಹಿ ಪ್ರಗತಿ ನಮ್ಮ ಆದ್ಯತೆ; ನಿರ್ಮಲಾ ಸೀತಾರಾಮನ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 01, 2023 | 6:16 PM

FM Nirmala Sitharaman Budget Press Conference Highlights: ಬಜೆಟ್​ ಮಂಡಿಸಿದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

FM Nirmala Sitharaman Budget 2023-24 Speech Highlights: ಇಂದು (ಫೆ.1) ಸಂಸತ್​ನಲ್ಲಿ ಬೆಳಿಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್​ (Nirmala Sitharaman)​ 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ (Union Budget 2023) ಮಂಡನೆಯಾಗಲಿದೆ. ನಿನ್ನೆ (ಜ.31) ನಿರ್ಮಲಾ ಸೀತಾರಾಮನ್​ ಅವರು ಸಂಸತ್ತಿನಲ್ಲಿ 2022-23 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದರು. ಇನ್ನು ಈ ವರ್ಷ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಚುನಾವಣಾ ರಾಜ್ಯಗಳಿಗೆ ಹಲವು ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಜನತೆ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್​ ಮೇಲೆ ನಿರೀಕ್ಷೆ ಹೊಂದಿದ್ದಾರೆ. ಎಂದಿನಂತೆ ಮಧ್ಯಮ ವರ್ಗದ ಜನತೆ ತೆರಿಗೆ ವಿನಾಯಿತಿಗೆ‌ ಕಾಯುತ್ತಿದ್ದಾರೆ.

LIVE NEWS & UPDATES

The liveblog has ended.
  • 01 Feb 2023 04:54 PM (IST)

    Nirmala Sitharaman Pressmeet Live: ಪೆಟ್ರೋಲ್ ಬೆಲೆ ಇಳಿಯಲ್ಲ

    ಯಾವುದೇ ಪೆಟ್ರೋಲಿಯಂ ಉತ್ಪನ್ನದ ಮೇಲೆ ನೇರವಾಗಿ ಸಬ್ಸಿಡಿ ಕೊಡುತ್ತಿಲ್ಲ. ಹೀಗಾಗಿ ಪೆಟ್ರೋಲ್ ಸೇರಿದಂತೆ ಯಾವುದೇ ಇಂಧನದ ಬೆಲೆಯ ಮೇಲೆ ಏನೂ ಪರಿಣಾಮ ಆಗುವುದಿಲ್ಲ. ತೆರಿಗೆ ಪದ್ಧತಿಯಲ್ಲಿ ವ್ಯತ್ಯಯವಾದರೆ ಮಾತ್ರ ಪೆಟ್ರೋಲ್ ದರಗಳಲ್ಲಿ ಏರಿಳಿತವಾಗುತ್ತದೆ. ಈ ಬಾರಿಯ ಬಜೆಟ್​ನಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

  • 01 Feb 2023 04:46 PM (IST)

    Nirmala Sitharaman Pressmeet Live: ಬದುಕಿನ ವಿವಿಧ ಆಯಾಮಗಳಿಗೆ ಡಿಜಿಟಲ್ ಆರ್ಥಿಕತೆಯ ಬಲ

    ಬಜೆಟ್ ಮೂಲಕ ಡಿಜಿಟಲ್ ಆರ್ಥಿಕತೆಗೆ ಹೊಸ ವೇಗ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ‘ಭವಿಷ್ಯದ ಬೆಳವಣಿಗೆಗಳಿಗೆ ಸ್ಪಂದಿಸಬಲ್ಲ ಹಣಕಾಸು ವಲಯವನ್ನು ರೂಪಿಸಲು ಉದ್ದೇಶಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿ 4.0 ಮೂಲಕ ಜನರಿಗೆ ತರಬೇತಿ ಸಿಗಲಿದೆ. ಬದುಕಿನ ಎಲ್ಲ ಆಯಾಮಗಳನ್ನು ಡಿಜಿಟಲ್ ಆರ್ಥಿಕತೆ ಒಳಗೊಳ್ಳುವಂತೆ ಮಾಡಲು ಯತ್ನಿಸುತ್ತಿದ್ದೇವೆ ಎಂದರು.

  • 01 Feb 2023 04:39 PM (IST)

    Nirmala Sitharaman Pressmeet Live: ಹಳೆ ತೆರಿಗೆ ಪದ್ಧತಿ ಇಷ್ಟಪಟ್ಟರೆ ಅಲ್ಲಿಯೇ ಇರಬಹುದು, ಹೊಸ ತೆರಿಗೆ ಪದ್ಧತಿ ಕಡ್ಡಾಯವಲ್ಲ

    ಆದಾಯ ತೆರಿಗೆ ವಿಧಗಳ ಕುರಿತು ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ಪದ್ಧತಿಗೆ ಬರಬೇಕು ಎಂದು ಯಾರನ್ನೂ ಒತ್ತಾಯಿಸುತ್ತಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ನೇರ ತೆರಿಗೆ ವ್ಯವಸ್ಥೆ ಸರಳವಾಗಬೇಕು ಎಂದು ದೇಶವು ಹಲವು ವರ್ಷಗಳಿಂದ ಕಾಯುತ್ತಿದೆ. ಹೀಗಾಗಿ ಹೊಸ ತೆರಿಗೆ ಪದ್ಧತಿಯನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಿದೆವು. ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ಆಕರ್ಷಕ ಕೊಡುಗೆಗಳು ಇರುವುದರಿಂದ ಜನರು ಯಾವುದೇ ಯೋಚನೆಯಿಲ್ಲದೆ ಅತ್ತ ಹೊರಳಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.

  • 01 Feb 2023 04:36 PM (IST)

    Nirmala Sitharaman Pressmeet Live: ಮಹಿಳಾ ಸಬಲೀಕರಣ ನಮ್ಮ ಆದ್ಯತೆ; ನಿರ್ಮಲಾ ಸೀತಾರಾಮನ್

    ನಮ್ಮ ಬಜೆಟ್ ನಾಲ್ಕು ಮುಖ್ಯ ಅಂಶಗಳನ್ನು ಆಧರಿಸಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮಕ್ಕೆ ಉತ್ತೇಜನ, ಕೌಶಲಾಭಿವೃದ್ಧಿ, ಪರಿಸರಸ್ನೇಹಿ ಪ್ರಗತಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

  • 01 Feb 2023 04:32 PM (IST)

    ಮಾರುಕಟ್ಟೆ ಪರಿಸ್ಥಿತಿ ಸರಿಯಿಲ್ಲ

    ಈ ಬಾರಿಯ ಬಜೆಟ್​ನಲ್ಲಿ ಬಂಡವಾಳ ಹಿಂಪಡೆಯುವುದು ಹಾಗೂ ಸರ್ಕಾರಿ ಉದ್ಯಮಗಳ ಖಾಸಗೀಕರಣದ ಬಗ್ಗೆ ಏಕೆ ಪ್ರಸ್ತಾಪಿಸಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರವಾಗಿ ಉತ್ತರಿಸಿದ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಈ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

  • 01 Feb 2023 01:08 PM (IST)

    Budget 2023 Speech: ಆದಾಯ ತೆರಿಗೆಗೆ ಸಂಬಂಧಿಸಿದ 5 ಮುಖ್ಯ ಘೋಷಣೆಗಳು

    ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದರು.

    1) ವಿನಾಯ್ತಿ: ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಪ್ರಸ್ತಾಪಿಸಿದರು.

    2) ಟ್ಯಾಕ್ಸ್​ ಸ್ಲ್ಯಾಬ್​ಗಳು: ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್​ ಸ್ಲ್ಯಾಬ್​ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ. ₹ 3 ಲಕ್ಷದಿಂದ ತೆರಿಗೆ ಹಂತ ಆರಂಭವಾಗಲಿದೆ.

    3) ಸ್ಟಾಂಡರ್ಡ್​ ಡಿಡಕ್ಷನ್: ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್​ ಡಿಡಕ್ಷನ್ ಸೌಲಭ್ಯ ಸಿಗಲಿದೆ.

    4) ಗರಿಷ್ಠ ತೆರಿಗೆ: ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್​ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ.

    5) ಲೀವ್ ಎನ್​ಕ್ಯಾಶ್​ಮೆಂಟ್ (ರಜೆ ನಗದೀಕರಣ): ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್​ಕ್ಯಾಶ್​ಮೆಂಟ್) ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • 01 Feb 2023 12:45 PM (IST)

    Budget 2023 Speech LIVE: ಆದಾಯ ತೆರಿಗೆ ವಿನಾಯ್ತಿ, ಹೊಸ ಸ್ಲ್ಯಾಬ್​ಗಳ ವಿವರ ಹೀಗಿದೆ

    ಹೊಸ ತೆರಿಗೆ ಪದ್ಧತಿ (New Tax Regime) ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.

    ಹೊಸ ತೆರಿಗೆ ದರಗಳು ಹೀಗಿವೆ…

    ₹ 3 ಲಕ್ಷದವರೆಗೆ – ಇಲ್ಲ

    ₹ 3ರಿಂದ 6 ಲಕ್ಷ – ಶೇ 5

    ₹ 6ರಿಂದ 9 ಲಕ್ಷ – ಶೇ 10

    ₹ 9ರಿಂದ 12 ಲಕ್ಷ – ಶೇ 15

    ₹ 12ರಿಂದ 15 ಲಕ್ಷ – ಶೇ 20

    ₹ 15 ಲಕ್ಷಕ್ಕೂ ಹೆಚ್ಚು – ಶೇ 30

  • 01 Feb 2023 12:38 PM (IST)

    Budget 2023 Speech LIVE: ವಿಮಾ ಪಾಲಿಸಿಗಳು, ಆಸ್ತಿ ಮಾರಾಟದ ಮೇಲೆ ತೆರಿಗೆ

    ದೊಡ್ಡಮೊತ್ತದ ವಿಮಾ ಪಾಲಿಸಿಗಳಿಗೆ ಇನ್ನು ಮುಂದೆ ತೆರಿಗೆ ವಿಧಿಸಲಾಗುವುದು. ₹ 10 ಕೋಟಿಗೂ ಅಧಿಕ ಮೊತ್ತದ ಆಸ್ತಿ ಮಾರಾಟದಿಂದ ಸಿಗುವ ಲಾಭದ ಮೇಲೆ (ಕ್ಯಾಪಿಟನ್ ಗೇನ್) ತೆರಿಗೆ ವಿಧಿಸಲಾಗುವುದು.

  • 01 Feb 2023 12:36 PM (IST)

    Budget 2023 Speech LIVE: ಹೊಸ ತೆರಿಗೆ ಪದ್ಧತಿಯೇ ಡಿಫಾಲ್ಟ್

    ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್​ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ ₹ 7 ಲಕ್ಷದವರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ.

  • 01 Feb 2023 12:28 PM (IST)

    Budget 2023 Speech LIVE: ಯಾವುದು ಅಗ್ಗ?

    ಸೈಕಲ್, ಟಿವಿ ಪ್ಯಾನಲ್, ಜವಳಿ, ಗ್ಲಿಸರಿನ್

  • 01 Feb 2023 12:25 PM (IST)

    Budget 2023 Speech LIVE: ಆದಾಯ ತೆರಿಗೆ ವಿನಾಯಿತಿ ಮಿತಿ ₹ 7 ಲಕ್ಷಕ್ಕೆ ಹೆಚ್ಚಳ

    ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವ ಯಾವುದೇ ಭಾರತೀಯ ವರ್ಷಕ್ಕೆ ₹ 7 ಲಕ್ಷ ಆದಾಯ ಪಡೆಯುತ್ತಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.

  • 01 Feb 2023 12:22 PM (IST)

    Budget 2023 Speech LIVE: ಮಾಸಿಕ ಆದಾಯ ಯೋಜನೆ ಹೂಡಿಕೆ ಮಿತಿ ದುಪ್ಪಟ್ಟು

    ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ (Monthly income scheme – MIS) ಹೂಡಿಕೆ ಮಿತಿಯನ್ನು ₹ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ₹ 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು.

    ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ ₹ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ ₹ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.

    ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ 7.5 ಬಡ್ಡಿ ನಿಗದಿಪಡಿಸಲಾಗಿದೆ.

  • 01 Feb 2023 12:20 PM (IST)

    Budget 2023 Speech LIVE: ಯಾವುದು ದುಬಾರಿ?

    ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ

  • 01 Feb 2023 12:19 PM (IST)

    Budget 2023 Speech LIVE: ನಗದು ರೂಪದಲ್ಲಿ ಕೃಷಿ ಸಾಲಕ್ಕೆ ಅವಕಾಶ

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ₹ 2 ಲಕ್ಷದಷ್ಟು ಸಾಲವನ್ನು ನಗದು ರೂಪದಲ್ಲಿ ನೀಡಲು, ₹ 2 ಲಕ್ಷದಷ್ಟು ಹಣವನ್ನು ನಗದು ರೂಪದಲ್ಲಿ ಕಟ್ಟಿಸಿಕೊಳ್ಳಲು ಅವಕಾಶ ನೀಡಲಾಗಿದೆ.

  • 01 Feb 2023 12:18 PM (IST)

    Budget 2023 Speech LIVE: ಚಿನ್ನಬೆಳ್ಳಿ ದುಬಾರಿ, ಮೊಬೈಲ್ ಅಗ್ಗ ಸಾಧ್ಯತೆ

    ತೆರಿಗೆ ವಿಚಾರದಲ್ಲಿ ಸಚಿವರು ನೀಡಿದ ಮಾಹಿತಿ ಆಧರಿಸಿ ವಿಶ್ಲೇಷಿಸುತ್ತಿರುವ ಹಲವು ರಾಷ್ಟ್ರೀಯ ಮಾಧ್ಯಮಗಳು ಚಿನ್ನ, ಬೆಳ್ಳಿ, ವಜ್ರದ ಬೆಲೆ ಏರಿಕೆ ಸಾಧ್ಯತೆಯಿದೆ. ಮೊಬೈಲ್ ಫೋನ್​, ಕ್ಯಾಮೆರಾ ಲೆನ್ಸ್​, ಟಿವಿಗಳ ದರ ಇಳಿಕೆ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿವೆ. ಬ್ಯಾಟರಿ ತಯಾರಿಕೆ ಕಂಪನಿಗಳಿಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ಬ್ಯಾಟರಿಗಳು ಅಗ್ಗವಾದರೆ ಎಲೆಕ್ಟ್ರಾನಿಕ್ ವಾಹನಗಳ ಬೆಲೆಯೂ ಇಳಿಯುವ ಸಾಧ್ಯತೆಯಿದೆ.

  • 01 Feb 2023 12:16 PM (IST)

    Budget 2023 Speech LIVE: ಆದಾಯ ತೆರಿಗೆ ರಿಟರ್ನ್ಸ್​ ವ್ಯವಸ್ಥೆ ಸುಧಾರಣೆ

    ನೇರ ತೆರಿಗೆಗಳ ಬಗ್ಗೆ ನಿರ್ಮಲಾ ಸೀತಾರಾಮನ್ ವಿವರಿಸಿದರು. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಮಾಡಲಾಗಿದೆ. ಒಂದು ದಿನಕ್ಕೆ 74 ಲಕ್ಷ ರಿಟರ್ನ್ಸ್​ ಬಂದಿದೆ. ಸರಾಸರಿ ಪ್ರಕ್ರಿಯೆ ಅವಧಿ 16 ದಿನಕ್ಕೆ ಇಳಿದಿದೆ. ಶೇ 45 ರಷ್ಟು ರಿಟರ್ನ್ಸ್​ಗಳನ್ನು 24 ಗಂಟೆಯ ಒಳಗೆ ನಿರ್ವಹಿಸಲಾಗಿದೆ.

  • 01 Feb 2023 12:14 PM (IST)

    Budget 2023 Speech LIVE: ಶೇ 5.9ರ ವಿತ್ತೀಯ ಕೊರತೆ ಗುರಿ ಇರಿಸಿಕೊಂಡ ಕೇಂದ್ರ

    2026ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ಇಳಿಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಪ್ರಸಕ್ತ ವರ್ಷದ (2022-23) ವಿತ್ತೀಯ ಕೊರತೆ ಶೇ 6.4ರಷ್ಟಿದೆ ಎಂದು ಸಚಿವರು ಹೇಳಿದರು. ಮುಂದಿನ ಆರ್ಥಿಕ ವರ್ಷದಲ್ಲಿ (2023-24) ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ಮಿತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

  • 01 Feb 2023 12:13 PM (IST)

    Budget 2023 Speech LIVE: ಭದ್ರಾ ಮೇಲ್ದಂಡೆಗೆ ಅನುದಾನ: ಸಿಎಂ ಬೊಮ್ಮಾಯಿ ಹರ್ಷ

    ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

  • 01 Feb 2023 12:07 PM (IST)

    Budget 2023 Speech LIVE: ಹಿರಿಯ ನಾಗರಿಕರಿಗೆ ಹೂಡಿಕೆ ಮಿತಿ ಹೆಚ್ಚಳ

    ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ ₹ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ ₹ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.

  • 01 Feb 2023 12:04 PM (IST)

    Budget 2023 Speech LIVE: ಸ್ವಚ್ಛ ನಗರ ರೂಪಿಸಲು ಹೊಸ ಕ್ರಮ

    ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು (sewers) ಹಾಗೂ ಮಲಗುಂಡಿಗಳಿಂದ (septic tanks) ಮುಕ್ತವಾಗಬೇಕು. ಮ್ಯಾನ್​ಹೋಲ್ ಮತ್ತು ಮಿಷನ್ ಹೋಲ್​ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.

  • 01 Feb 2023 12:01 PM (IST)

    Budget 2023 Speech LIVE: ಸಹಜ/ಸಾವಯವ ಕೃಷಿಗೆ ಆದ್ಯತೆ

    ರಾಸಾಯನಿಕ ಮುಕ್ತ ಸಹಜ/ಸಾವಯವ ಕೃಷಿಗೆ ಆದ್ಯತೆ ನೀಡುವ ಪರಿಪಾಠವನ್ನು ಈ ವರ್ಷವೂ ಸಚಿವರು ಮುಂದುವರಿಸಿದ್ದಾರೆ. ಈ ಮಾದರಿಯ ಕೃಷಿ ಪದ್ಧತಿಗೆ ಅಗತ್ಯ ಬೆಂಬಲ ಒದಗಿಸಲು ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು. ಸಹಜ/ಸಾವಯವ ಕೃಷಿಗೆ ಮರಳುವ 1 ಕೋಟಿ ರೈತರಿಗೆ ಸರ್ಕಾರದ ನೆರವು ಸಿಗಲಿದೆ ಎಂದು ಸಚಿವರು ಘೋಷಿಸಿದರು.

  • 01 Feb 2023 11:57 AM (IST)

    Budget 2023 Speech LIVE: ಗಿರಿಜನ ವಸತಿ ಶಾಲೆಗಳಿಗಾಗಿ 38,800 ಸಾವಿರ ಶಿಕ್ಷಕರ ನೇಮಕ

    ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

  • 01 Feb 2023 11:55 AM (IST)

    Budget 2023 Speech LIVE: ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಕ್ರಮ

    ಹೆಚ್ಚಿನ ಮಾಲಿನ್ಯ ಉಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ಗಳ ಬದಲಾವಣೆಗೆ ಕೇಂದ್ರ ಸರ್ಕಾರ ನೆರವು ಒದಗಿಸಲಿದೆ ಎಂದು ತಿಳಿಸಿದರು.

    ಈ ವೇಳೆ ಸಚಿವರು ಪೊಲ್ಯುಟಿಂಗ್ (Polluting) ಎಂದು ಹೇಳುವ ಬದಲು ಪೊಲಿಟಿಕಲ್ (Political) ಎಂದು ಹೇಳಿದ್ದನ್ನು ಪ್ರತಿಪಕ್ಷಗಳ ಸದಸ್ಯರು ಲೇವಡಿ ಮಾಡಿದರು. ಆದರೆ ಸಚಿವರು ‘ಹಳೇ ಮಾಲಿನ್ಯಕಾರಕಗಳನ್ನು ಬದಲಿಸಬೇಕು, ನಾನು ಹೇಳಿದ್ದ ಸರಿತಾನೆ’ ಎಂದು ತಿರುಗೇಟು ನೀಡಿದರು.

  • 01 Feb 2023 11:52 AM (IST)

    Budget 2023 Speech LIVE: ಉದ್ಯಮಸ್ನೇಹಿ ವಾತಾವರಣಕ್ಕೆ ಉತ್ತೇಜನ

    ದೇಶದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಬಜೆಟ್ ಮೂಲಕ ಕೇಂದ್ರ ಸರ್ಕಾರವು ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಉದ್ಯಮಗಳು ಪ್ರತ್ಯೇಕ ಪ್ಯಾನ್ (PAN) ನಂಬರ್ ಹೊಂದಬೇಕು. ಈ ನಂಬರ್ ಆಧರಿಸಿ ಉದ್ಯಮಿಗಳ ಕುಂದುಕೊರತೆಯನ್ನು ಶೀಘ್ರ ಪರಿಹರಿಸಲಾಗುವುದು. ಹಲವು ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದರು.

  • 01 Feb 2023 11:50 AM (IST)

    Budget 2023 Speech LIVE: ಕೃಷಿಸಾಲದ ಗುರಿ ₹ 20 ಲಕ್ಷ ಕೋಟಿಗೆ ಹೆಚ್ಚಳ

    ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿಸಾಲಕ್ಕಾಗಿ ₹ 20 ಲಕ್ಷ ಕೋಟಿ ಮೀಸಲಿಡಲಾಗಿದೆ.

  • 01 Feb 2023 11:47 AM (IST)

    Budget 2023 Speech LIVE: ವಸತಿ ಕ್ಷೇತ್ರಕ್ಕೆ ಆದ್ಯತೆ, ಅನುದಾನ ಶೇ 66ರಷ್ಟು ಹೆಚ್ಚಳ

    ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಈ ವರ್ಷದ ಬಜೆಟ್​ನಲ್ಲಿ ₹ 79,000 ಕೋಟಿ ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ಹಣವು ಶೇ 66ರಷ್ಟು ಹೆಚ್ಚಾಗಿದೆ.

  • 01 Feb 2023 11:45 AM (IST)

    Budget 2023 Speech LIVE:ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ

    ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ₹ 5,300 ಕೋಟಿ ಅನುದಾನ ಘೋಷಿಸಿದರು. ಈ ವೇಳೆ ಪ್ರತಿಪಕ್ಷಗಳಿಂದ ಉದ್ಗಾರ ತೇಲಿಬಂತು.

  • 01 Feb 2023 11:44 AM (IST)

    Budget 2023 Speech LIVE: ರಾಜ್ಯಗಳ ಆರ್ಥಿಕತೆ ಸುಧಾರಣೆಗೆ ಕ್ರಮ, ಷೇರುಪೇಟೆಯಲ್ಲಿ ಸಂಭ್ರಮ

    ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು (capex) 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ. ಸಚಿವರು ಈ ಘೋಷಣೆ ಪ್ರಕಟಿಸುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂಭ್ರಮ ಮನೆಮಾಡಿತು. ನಿಫ್ಟಿ ದಿನದ ಗರಿಷ್ಠ ಮಟ್ಟ ತಲುಪಿತು.

  • 01 Feb 2023 11:40 AM (IST)

    Budget 2023 Speech LIVE: ಮೀನುಗಾರರು, ಕರಕುಶಲಕರ್ಮಿಗಳಿಗೆ ಉತ್ತೇಜನ

    ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ₹ 6,000 ಕೋಟಿ ಮತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

  • 01 Feb 2023 11:38 AM (IST)

    Budget 2023 Speech LIVE: ಹೊಸ ನರ್ಸಿಂಗ್ ಕಾಲೇಜ್, ಐಸಿಎಂಆರ್ ಸೌಲಭ್ಯ; ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ

    ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಸಚಿವರು ಹಲವು ಹೊಸ ಕ್ರಮಗಳನ್ನು ಘೋಷಿಸಿದರು. 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್​ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.

  • 01 Feb 2023 11:35 AM (IST)

    Budget 2023 Speech LIVE: ನ್ಯಾಷನಲ್ ಡಿಜಿಟಲ್ ಲೈಬ್ರೆರಿ

    ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ (National digital library for children and adolescents) ಯೋಜನೆಯನ್ನು ಸಚಿವರು ಪ್ರಕಟಿಸಿದರು.

  • 01 Feb 2023 11:33 AM (IST)

    Budget 2023 Speech LIVE: ಅನುರಣಿಸಿದ ಮೋದಿ ಮೋದಿ, ಭಾರತ್ ಜೋಡೋ ಘೋಷಣೆಗಳು

    ನಿರ್ಮಲಾ ಸೀತಾರಾಮನ್ ಅವರ ಭಾಷಣದ ವೇಳೆ ಆಡಳಿತ ಪಕ್ಷದ ಸದಸ್ಯರು ‘ಮೋದಿ ಮೋದಿ’ ಎಂದು ಕೂಗಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಮತ್ತೊಮ್ಮೆ ‘ಭಾರತ್ ಜೋಡೋ’ ಎಂದು ತಿರುಗೇಟು ನೀಡಿದರು.

  • 01 Feb 2023 11:32 AM (IST)

    Budget 2023 Speech LIVE: ತೋಟಗಾರಿಕೆ ಸುಧಾರಣೆಗೆ ಶುದ್ಧ ಸಸಿ ಕಾರ್ಯಕ್ರಮ

    ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’ (Clean Plant Programme) ಆರಂಭಿಸುವುದಾಗಿ ಸಚಿವರು ಘೋಷಿಸಿದರು.

  • 01 Feb 2023 11:28 AM (IST)

    Budget 2023 Speech LIVE: ಸಿರಿಧಾನ್ಯ ಸಂಶೋಧನೆಗೆ ಸರ್ಕಾರದ ಬೆಂಬಲ

    ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ಒದಗಿಸಲಾಗುವುದು. ಈ ಸಂಸ್ಥೆಗೆ ‘ಸೆಂಟರ್ ಆಫ್ ಎಕ್ಸೆಲೆನ್ಸ್’ ಉಪಕ್ರಮದ ಮೂಲಕ ಬೆಂಬಲಿಸಲಾಗುವುದು ಎಂದು ಸಚಿವರು ಘೋಷಿಸಿದರು.

  • 01 Feb 2023 11:24 AM (IST)

    Budget 2023 Speech LIVE: ಮಹಿಳೆಯರಿಗೆ ಉತ್ತೇಜನ

    ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮಗಳನ್ನು ರೂಪಿಸಲಾಗುವುದು. ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

  • 01 Feb 2023 11:22 AM (IST)

    Budget 2023 Speech LIVE: ಆರ್ಥಿಕ ಸುಧಾರಣೆಗೆ ತಂತ್ರಜ್ಞಾನ ಬಳಕೆ

    ಅಮೃತಕಾಲದಲ್ಲಿ ನಾವು ತಂತ್ರಜ್ಞಾನದಿಂದ ಮುನ್ನಡೆಯುವ, ಜ್ಞಾನ ಆಧರಿತ ಆರ್ಥಿಕತೆ ನಿರ್ಮಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.

  • 01 Feb 2023 11:20 AM (IST)

    Budget 2023 Speech LIVE: ಬಜೆಟ್​ನ ಏಳು ಆದ್ಯತೆಗಳು

    ಕೇಂದ್ರ ಬಜೆಟ್​ಗೆ 7 ಅದ್ಯತೆಗಳಿವೆ ಎಂದು ಸಚಿವರು ಘೋಷಿಸಿದರು. ಅವೆಂದರೆ

    1) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ

    2) ಅಂಚಿನಲ್ಲಿರುವವರಿಗೆ ಸವಲತ್ತು

    3) ಮೂಲಸೌಕರ್ಯ

    4) ಸಾಮರ್ಥ್ಯದ ಸದ್ಬಳಕೆ

    5) ಪರಿಸರ ಸ್ನೇಹಿ ಅಭಿವೃದ್ಧಿ

    6) ಯುವಶಕ್ತಿಗೆ ಉತ್ತೇಜನ

    7) ಆರ್ಥಿಕ ಸುಧಾರಣೆ

  • 01 Feb 2023 11:18 AM (IST)

    Budget 2023 Speech LIVE: ಕೃಷಿ ಪ್ರಗತಿ ನಿಧಿ ಯೋಜನೆ

    ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ ಸಚಿವರು ಘೋಷಿಸಿದರು.

  • 01 Feb 2023 11:16 AM (IST)

    Budget 2023 Speech LIVE: ಬಜೆಟ್​ನ ಆರಂಭದಲ್ಲೇ ಗ್ರಾಮೀಣ ಭಾರತ ಪ್ರಸ್ತಾಪ

    ನಿರ್ಮಲಾ ಸೀತಾರಾಮನ್ ಅವರ ಬಹುನಿರೀಕ್ಷಿತ ಬಜೆಟ್ ಭಾಷಣವು ಅರಂಭದಲ್ಲಿಯೇ ಗ್ರಾಮೀಣ ಭಾರತದ ಬಗ್ಗೆ ಪ್ರಸ್ತಾಪಿಸಿತು. ಈ ಹಿಂದಿನ ಭಾಷಣಗಳಿಗಿಂತಲೂ ಇದು ಭಿನ್ನ ಎನಿಸಿತು. ಆದರೆ ಬಜೆಟ್​ನ ಆದ್ಯತೆಯ ಬಗ್ಗೆ ಸ್ಪಷ್ಟ ಇಣುಕುನೋಟ ನೀಡಿತು

  • 01 Feb 2023 11:14 AM (IST)

    Budget 2023 Speech LIVE: ಡಿಸೆಂಬರ್​ವರೆಗೆ ಉಚಿತ ಆಹಾರಧಾನ್ಯ ವಿತರಣೆ

    ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯಡಿ ಡಿಸೆಂಬರ್ 2023ರವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

  • 01 Feb 2023 11:13 AM (IST)

    Budget 2023 Speech LIVE: ಸರ್ಕಾರದ ಜನಕಲ್ಯಾಣ ಯೋಜನೆಗಳ ಪ್ರಗತಿ ವಿವರಣೆ

    ಬಜೆಟ್ ಭಾಷಣದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಪ್ರಗತಿಯನ್ನು ವಿವರಿಸಿದರು. ದೀನ್​ದಯಾಳ್ ಅಂತ್ಯೋದಯ ಯೋಜನೆ, ಕೌಶಲಾಭಿವೃದ್ಧಿ ಯೋಜನೆ, ಮುದ್ರಾ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ನಿರ್ಮಲಾ ಗಮನ ಸೆಳೆದರು. ಪ್ರಗತಿಯ ಅಂಕಿಅಂಶಗಳನ್ನು ಮಂಡಿಸಿದರು.

  • 01 Feb 2023 11:08 AM (IST)

    Budget 2023 Speech LIVE: ಆರ್ಥಿಕ ಪ್ರಗತಿಗೆ ಉತ್ತಮ ಆಡಳಿತ ಬೆನ್ನೆಲುಬು

    ಭಾರತದ ಆರ್ಥಿಕತೆಯು ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ. ನಮ್ಮ ಸ್ಥಾನಮಾನವು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಮುಟ್ಟಿದ್ದೇವೆ. ಉತ್ತಮ ಆಡಳಿತದ ಪ್ರಗತಿಶೀಲ ದೇಶ ಎಂದು ವಿಶ್ವದಲ್ಲಿ ಭಾರತಕ್ಕೆ ಗೌರವವಿದೆ.

  • 01 Feb 2023 11:07 AM (IST)

    Budget 2023 Speech LIVE: ವಸುಧೈವ ಕುಟುಂಬಕಂ

    ಜಾಗತಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಲಭಿಸಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ.

  • 01 Feb 2023 11:06 AM (IST)

    Budget 2023 Speech LIVE: ಸಂಕಷ್ಟದಲ್ಲಿ ಹಸಿವು ಬಾಧಿಸಲು ಬಿಡಲಿಲ್ಲ

    ಕೊವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲಲು ಅವಕಾಶ ನೀಡಲಿಲ್ಲ. 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು.

  • 01 Feb 2023 11:06 AM (IST)

    Budget 2023 Speech LIVE: ಸಚಿವರ ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನ

    ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣಕ್ಕೆ ಪ್ರತಿಪಕ್ಷಗಳ ಸದಸ್ಯರಿಂದ ಅಡ್ಡಿಪಡಿಸುವ ಪ್ರಯತ್ನ ನಡೆಯಿತು. ಭಾರತ್ ಜೋಡೋ ಎಂದು ಕೆಲವರು ಘೋಷಣೆಗಳನ್ನು ಕೂಗಿದರು.

  • 01 Feb 2023 11:05 AM (IST)

    Budget 2023 Speech LIVE: ಹಲವು ಸವಾಲುಗಳ ನಡುವೆ ಉಜ್ವಲ ಭವಿಷ್ಯದತ್ತ ಹೆಜ್ಜೆ

    ಕೊವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತವು ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ.

  • 01 Feb 2023 11:05 AM (IST)

    Budget 2023 Speech LIVE: ಅಮೃತಕಾಲದ ಮೊದಲ ಬಜೆಟ್

    ಇದು ಅಮೃತಕಾಲದ ಮೊದಲ ಬಜೆಟ್​. ಇದು ಹಿಂದಿನ ಬಜೆಟ್​ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು. -ನಿರ್ಮಲಾ ಸೀತಾರಾಮನ್

  • 01 Feb 2023 11:03 AM (IST)

    Budget 2023 Speech LIVE: ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದರು. ಮುಂಜಾನೆ ರಾಷ್ಟ್ರಪತಿಗೆ ಬಜೆಟ್ ಪ್ರತಿ ನೀಡಿದ ನಂತರ ಸಂಸತ್ ಭವನಕ್ಕೆ ಆಗಮಿಸಿದ ಸಚಿವರು ಬಜೆಟ್​ಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದ್ದರು.

  • 01 Feb 2023 10:58 AM (IST)

    Budget 2023 Live: ರಕ್ಷಣಾ ವಲಯದ ಷೇರುಗಳ ಜಿಗಿತ

    ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳ ಮೌಲ್ಯ ಶೇ 2ರಿಂದ 4ರಷ್ಟು ಹೆಚ್ಚಾಗಿದೆ.

  • 01 Feb 2023 10:55 AM (IST)

    Budget 2023 Live: ರೈಲ್ವೆ ಷೇರುಗಳ ಮೌಲ್ಯ ಜಿಗಿತ

    ಈ ಬಾರಿಯ ಬಜೆಟ್​ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ಸಿಗಬಹುದು ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳ ಷೇರು ಮೌಲ್ಯ ಬುಧವಾರದ (ಫೆ 1) ಆರಂಭಿಕ ವಹಿವಾಟಿನಲ್ಲಿ ಹೆಚ್ಚಾಗಿದೆ. ಐಆರ್​ಸಿಟಿಸಿ, ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾ, ಐಆರ್​ಎಫ್​ಸಿ, ರೈಲ್ ವಿಕಾಸ್ ನಿಗಮ್, ಬಿಇಎಂಎಲ್, ತೀತಗಡ್ ವಾಗನ್ಸ್, ಟೆಕ್ಸ್​ಮಕೊ ರೈಲ್ ಅಂಡ್ ಎಂಜಿನಿಯರಿಂಗ್, ಇರ್ಕಾನ್ ಇಂಟರ್​ನ್ಯಾಷನಲ್ ಕಂಪನಿಗಳ ಷೇರುಗಳ ಮೌಲ್ಯ ಶೇ 1ರಿಂದ 3ರಷ್ಟು ಹೆಚ್ಚಾಗಿವೆ. ರೈಲ್ವೆ ಇಲಾಖೆಯ ಹಲವು ಯೋಜನೆಗಳಿಗೆ ಈ ವರ್ಷ ಚಾಲನೆ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

  • 01 Feb 2023 10:44 AM (IST)

    Budget 2023 Live: ಬಜೆಟ್​ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2023-24ನೇ ಸಾಲಿನ ಬಜೆಟ್​ಗೆ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

  • 01 Feb 2023 10:38 AM (IST)

    Budget 2023 Live: ಶ್ವಾನಗಳಿಂದ ಬಜೆಟ್​ ಪ್ರತಿಗಳ ತಪಾಸಣೆ

    ಪ್ರತಿವರ್ಷದಿಂದ ಈ ವರ್ಷವೂ ಶ್ವಾನಗಳಿಂದ ಬಜೆಟ್​ ಭಾಷಣದ ಮುದ್ರಿತ ಪ್ರತಿಗಳಿದ್ದ ಚೀಲಗಳ ಭದ್ರತಾ ತಪಾಸಣೆ ನಡೆಸಲಾಯಿತು. ಶ್ವಾನಗಳು ಮೂಸಿ ನೋಡಿ, ಸಮಸ್ಯೆಯಿಲ್ಲ ಎಂದು ಸಂಕೇತ ನೀಡಿದ ನಂತರವೇ ಚೀಲಗಳನ್ನು ಒಳಕ್ಕೆ ಕೊಂಡೊಯ್ಯುವುದು ವಾಡಿಕೆ.

  • 01 Feb 2023 10:35 AM (IST)

    Budget 2023: ಸಂಸತ್ತಿಗೆ ಬಜೆಟ್ ಭಾಷಣದ ಮುದ್ರಿತ ಪ್ರತಿಗಳು

    ವಿತ್ತ ಸಚಿವರು ಟ್ಯಾಬ್ಲೆಟ್​ ಮೂಲಕ ಬಜೆಟ್​ ಮಂಡಿಸಿದರೂ ಮುದ್ರಿತ ಪ್ರತಿಗಳ ಮೇಲಿನ ಅವಲಂಬನೆ ಹೋಗಿಲ್ಲ. ಸಂಸತ್ ಸದಸ್ಯರಿಗೆ ವಿತರಿಸಲೆಂದು ಬಜೆಟ್​ ಭಾಷಣದ ಮುದ್ರಿತ ಪ್ರತಿಗಳನ್ನು ಲಾರಿಯಲ್ಲಿ ಸಂಸತ್ ಭವನಕ್ಕೆ ತರಲಾಯಿತು.

  • 01 Feb 2023 10:27 AM (IST)

    Bubget 2023 Live: ದೇಶ ಕಾತರದಿಂದ ಗಮನಿಸುತ್ತಿರುವ ಅಂಕಿಅಂಶಗಳು

    ಬಜೆಟ್ ಎಂದರೆ ಅಂಕಿಸಂಖ್ಯೆಯ ಕಸರತ್ತು. ಈ ವರ್ಷದ ಬಜೆಟ್ ಸಹ ಅದಕ್ಕೆ ಹೊರತಲ್ಲ. ವಿತ್ತೀಯ ಕೊರತೆ, ಬಂಡವಾಳ ಹಿಂತೆಗೆತ/ಖಾಸಗೀಕರಣ, ಬಂಡವಾಳ ವೆಚ್ಚ, ತೆರಿಗೆ ಆದಾಯ, ಸಾಲ, ಜಿಡಿಪಿ ಅಂಕಿಗಳ ಬಗ್ಗೆ ಬಜೆಟ್​ನಲ್ಲಿ ವಿತ್ತ ಸಚಿವರು ಏನು ಹೇಳುತ್ತಿದ್ದಾರೆ ಎಂದು ದೇಶ ಕಾತರದಿಂದ ನಿರೀಕ್ಷಿಸುತ್ತಿದೆ.

  • 01 Feb 2023 10:25 AM (IST)

    Budget 2023 Live: ಬಜೆಟ್ ಪೂರ್ವಭಾವಿ ನೋಟ; ಯಾವ್ಯಾವ ವಸ್ತುಗಳ ಬೆಲೆ ಏರಿಕೆ, ಇಳಿಕೆಯಾಗಿವೆ?

    Union Budget 2023: ಈ ಬಾರಿಯ ಬಜೆಟ್​ನಲ್ಲಿ ವಿದೇಶಗಳಿಂದ ಹೆಚ್ಚು ಆಮದು ಆಗುವ ಛತ್ರಿ, ಇಯರ್​ಫೋನ್ ಇತ್ಯಾದಿ ವಸ್ತುಗಳ ಆಮದು ಸುಂಕವನ್ನು ಏರಿಸಬಹುದು ಎನ್ನಲಾಗಿದೆ.

  • 01 Feb 2023 10:23 AM (IST)

    Bubget 2023 Live: ಸಂಸತ್ತಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭ

    ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಭೆಯಲ್ಲಿ ಬಜೆಟ್​ ದಾಖಲೆಗೆ ಸಂಪುಟದ ಅನುಮೋದನೆ ಪಡೆಯಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

  • 01 Feb 2023 10:20 AM (IST)

    Budget 2023: ಸಂಸತ್ತಿಗೆ ಬಂದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಪ್ರವೇಶಿಸಿದ್ದು, ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆ ಆರಂಭವಾಗಲಿದೆ. ಸಚಿವ ಸಂಪುಟ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.

  • 01 Feb 2023 10:19 AM (IST)

    Budget 2023 Live: ಎರಡು ಹಂತಗಳಲ್ಲಿ ಬಜೆಟ್ ಅಧಿವೇಶನ

    ಸಂಸತ್ತಿನ ಬಜೆಟ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ನಿನ್ನೆಯಿಂದ (ಜ 31) ಆರಂಭವಾಗಿದ್ದು, ಫೆ.13ಕ್ಕೆ ಮುಕ್ತಾಯವಾಗಲಿದೆ. ಎರಡನೇ ಹಂತದಲ್ಲಿ ಮಾರ್ಚ್ 12ರಿಂದ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 6ರಂದು ಮುಕ್ತಾಯವಾಗಲಿದೆ.

  • 01 Feb 2023 10:06 AM (IST)

    Budget 2023 Live: ಸತತ 5 ಬಾರಿ ಬಜೆಟ್ ಮಂಡಿಸಿದ 6ನೇ ಹಣಕಾಸು ಸಚಿವೆ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇದು 5ನೇ ಬಜೆಟ್. ಈ ಸಾಧನೆ ಮಾಡಿದ 6ನೇ ಸಚಿವರು ಎಂಬ ಕೀರ್ತಿಗೆ ಅವರು ಭಾಜನರಾಗಲಿದ್ದಾರೆ. ಈ ಮೊದಲು ಮೊರಾರ್ಜಿ ದೇಸಾಯಿ, ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ, ಯಶವಂತ ಸಿನ್ಹಾ ಈ ಸಾಧನೆ ಮಾಡಿದ್ದರು. 2019 ರಿಂದ ನಿರ್ಮಲಾ ಬಜೆಟ್ ಮಂಡಿಸುತ್ತಿದ್ದಾರೆ.

  • 01 Feb 2023 09:56 AM (IST)

    Budget 2023 Live: ಸಂಸತ್ ಭವನಕ್ಕೆ ನಿರ್ಮಲಾ ಸೀತಾರಾಮನ್

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನದಿಂದ ಸಂಸತ್​ ಭವನಕ್ಕೆ ಆಗಮಿಸಿದರು. ಶೀಘ್ರ ಸಚಿವ ಸಂಪುಟ ಸಭೆ ಆರಂಭವಾಗಲಿದ್ದು, 11 ಗಂಟೆಗೆ ಸಂಸತ್ ಅಧಿವೇಶನದಲ್ಲಿ ಸಚಿವರು ಬಜೆಟ್ ಮಂಡಿಸಲಿದ್ದಾರೆ.

  • 01 Feb 2023 09:46 AM (IST)

    Budget 2023 Live: ಬಜೆಟ್​ಗೆ ಮುನ್ನ ಹಣಕಾಸು ಸಚಿವೆಯಿಂದ ರಾಷ್ಟ್ರಪತಿ ಭೇಟಿ

    Finance Minister Meets The President: ಬುಧವಾರ ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಬಂದ ನಿರ್ಮಲಾ ಸೀತಾರಾಮನ್, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಜೊತೆ ರಾಜ್ಯಖಾತೆ ಸಚಿವರಾದ ಪಂಕಜ್ ಚೌಧರಿ ಮತ್ತು ಭಗವತ್ ಕರಾಡ್ ಹಾಗು ಹಣಕಾಸು ಇಲಾಖೆ ಕಾರ್ಯದರ್ಶಿಗಳು ರಾಷ್ಟ್ರಪತಿಗಳ ಭೇಟಿ ವೇಳೆ ಇದ್ದರು.

  • 01 Feb 2023 09:38 AM (IST)

    Budget 2023 Live: ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸೀತಾರಾಮನ್

    ಶಿಷ್ಟಾಚಾರದಂತೆ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಸಮಾಲೋಚಿಸಿದರು. ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ದರ್ಜೆ ಸಚಿವರು ಈ ವೇಳೆ ಉಪಸ್ಥಿತರಿದ್ದರು. ರಾಷ್ಟ್ರಪತಿ ಭವನದಿಂದ ನಿರ್ಮಲಾ ಸಂಸತ್ತಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಜೆಟ್​ ಮಂಡನೆಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ.

  • 01 Feb 2023 09:30 AM (IST)

    Budget 2023 Live: ಷೇರುಪೇಟೆಯಲ್ಲಿ ಸಂಭ್ರಮ; ನಿಫ್ಟಿ 133 ಅಂಶ ಚೇತರಿಕೆ

    ಬಜೆಟ್ ಮಂಡನೆಗೆ ಮೊದಲು ಷೇರುಪೇಟೆಯಲ್ಲಿ ಉತ್ಸಾಹದ ವಾತಾವರಣ ಮನೆಮಾಡಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (NSE NIFTY) ಆರಂಭಿಕ ವಹಿವಾಟಿನಲ್ಲಿ 133 ಅಂಶಗಳ ಚೇತರಿಕೆ ಕಂಡಿದ್ದು 17,796 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

  • 01 Feb 2023 09:26 AM (IST)

    Budget 2023 Live: ಎಲ್ಲ ವರ್ಗಗಳ ನಿರೀಕ್ಷೆಗಳಿಗೆ ಗಮನ ಕೊಡುವ ಬಜೆಟ್

    ಬಜೆಟ್ ಮೂಲಕ ನಮ್ಮ ಸರ್ಕಾರವು ದೇಶದ ಎಲ್ಲರ ಮತ್ತು ಎಲ್ಲ ವರ್ಗಗಳ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಆರ್ಥಿಕ ಪ್ರಗತಿಯ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.

  • 01 Feb 2023 09:23 AM (IST)

    Budget 2023 Live: ಷೇರುಪೇಟೆಯಲ್ಲಿ ಪುಟಿದ ಉತ್ಸಾಹ, ಏರಿಕೆ ಕಂಡ ಬಿಎಸ್​ಇ

    ಬಜೆಟ್ ಮಂಡನೆಯ ದಿನ ಷೇರುಪೇಟೆಯ ವಿದ್ಯಮಾನವನ್ನು ಕುತೂಹಲದಿಂದ ಗಮನಿಸಲಾಗುತ್ತದೆ. ಮುಂಬೈ ಪೇಟೆಯ (BSE) ವಹಿವಾಟು 437.32 ಅಂಶಗಳ ಚೇತರಿಕೆಯೊಂದಿಗೆ ಆರಂಭವಾಗಿದೆ. ಬೆಳಿಗ್ಗೆ 9:20ರಲ್ಲಿ ಬಿಎಸ್​ಇ 59,987.22 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ಹೂಡಿಕೆದಾರರಲ್ಲಿ ಬಜೆಟ್​ ಬಗ್ಗೆ ಇರುವ ನಿರೀಕ್ಷೆಗಳು ಈಡೇರಬಹುದು ಎನ್ನುವ ಆಶಾವಾದವನ್ನು ಇದು ಸಂಕೇತಿಸುತ್ತದೆ.

  • 01 Feb 2023 09:22 AM (IST)

    Budget 2023 Live: ಇದು ಬಿಜೆಪಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್

    ಲೋಕಸಭೆಗೆ 2024ರಲ್ಲಿ ಚುನಾವಣೆ ನಡೆಯಲಿರುವ ಮುಂದಿನ ವರ್ಷದ ಬಜೆಟ್​ ಇಡೀ ಆರ್ಥಿಕ ವರ್ಷಕ್ಕೆ ಊರ್ಜಿತಗೊಳ್ಳುವುದಿಲ್ಲ. ಹೀಗಾಗಿ ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಎನಿಸಿಕೊಂಡಿದೆ. 2023ರ ಆರ್ಥಿಕ ವರ್ಷದಲ್ಲಿ ಹಲವು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಿಗದಿಯಾಗಿರುವುದರಿಂದ ಈ ಬಜೆಟ್​ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿವೆ.

  • 01 Feb 2023 09:15 AM (IST)

    Budget 2023 Live: ಬಜೆಟ್​ಗೆ ಮೊದಲು ದೇವರಪೂಜೆ

    ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ ಭಾಗವತ್ ಕೃಷ್ಣರಾವ್ ಕರಡ್ ಅವರು ಬಜೆಟ್ ಮಂಡನೆಗೆ ಮೊದಲು ತಮ್ಮ ಸ್ವಗೃಹದಲ್ಲಿ ತಿರುಪತಿ ವೆಂಕಟರಮಣಸ್ವಾಮಿಗೆ ಪೂಜೆ ನೆರವೇರಿಸಿದರು. ಬಜೆಟ್ ಮಂಡನೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು.

  • 01 Feb 2023 09:10 AM (IST)

    Budget 2023 Live: ರಾಷ್ಟ್ರಪತಿ ಭವನ ತಲುಪಿದ ನಿರ್ಮಲಾ

    ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಗೆ ಮೊದಲು ಶಿಷ್ಟಾಚಾರದ ವಾಡಿಕೆಯಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

  • 01 Feb 2023 09:08 AM (IST)

    Budget 2023 Live: ಕೆಂಪು ಸೀರೆ ಉಟ್ಟು ಬಜೆಟ್​ ದಾಖಲೆ ತೋರಿಸಿದ ನಿರ್ಮಲಾ ಸೀತಾರಾಮನ್

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 9 ಗಂಟೆಗೆ ಹಣಕಾಸು ಸಚಿವಾಲಯದಿಂದ ಬಜೆಟ್ ದಾಖಲೆಯನ್ನು ಸ್ವೀಕರಿಸಿ ಸಂಸತ್ತಿನತ್ತ ಹೊರಟರು. ಪ್ರತಿವರ್ಷದಂತೆ ಈ ವರ್ಷವೂ ಅವರು ಉಟ್ಟಿರುವ ಸೀರೆ ಮಾಧ್ಯಮಗಳ ಗಮನ ಸೆಳೆದಿದೆ. ಬಜೆಟ್ ದಾಖಲೆ ಇರುವ ಟ್ಯಾಬ್ಲೆಟ್​ಗೆ ಸುತ್ತಿರುವ ಕೆಂಪು ಹೊದಿಕೆಗೆ ಹೊಂದಾಣಿಕೆಯಾಗುವ (ಮ್ಯಾಚಿಂಗ್) ಬಣ್ಣದ ಸೀರೆಯನ್ನು ನಿರ್ಮಲಾ ಉಟ್ಟಿದ್ದಾರೆ. ಕೆಂಪು ಬಣ್ಣಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಜಾಗತಿಕ ಸವಾಲುಗಳು ಹೆಚ್ಚಾಗಿರುವ, ಆರ್ಥಿಕತೆಯಲ್ಲಿ ಆತಂಕ ಮನೆಮಾಡಿರುವ ಹೊತ್ತಿನಲ್ಲಿ ಮಂಡನೆಯಾಗುತ್ತಿರುವ ಭಾರೀ ಸವಾಲಿನ ಬಜೆಟ್ ಇದು. ಹೀಗಾಗಿಯೇ ದೇಶಕ್ಕೆ ಜನಮಾನಸಕ್ಕೆ ಭರವಸೆ ತುಂಬಲೆಂದು ನಿರ್ಮಲಾ ಅವರು ಈ ಬಣ್ಣದ ಸೀರೆ ಆರಿಸಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  • 01 Feb 2023 08:53 AM (IST)

    Budget 2023 Live: ಬಜೆಟ್​ ಮಂಡನೆಗೆ ಕ್ಷಣಗಣನೆ, ಹಣಕಾಸು ಸಚಿವಾಲಯಕ್ಕೆ ನಿರ್ಮಲಾ

    ಲೋಕಸಭೆಯಲ್ಲಿ ಇಂದು ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮನೆಯಿಂದ ಹೊರಟು ವಿತ್ತ ಸಚಿವಾಲಯ ತಲುಪಿದರು. ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದ ಸಮಾಲೋಚನೆ ನಡೆಸಲಿದ್ದಾರೆ.

  • 01 Feb 2023 08:48 AM (IST)

    Budget 2023 Live: 10:15ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ

    ಸಂಸತ್ತಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್​ಗೆ ಪೂರ್ವಭಾವಿಯಾಗಿ ಬೆಳಿಗ್ಗೆ 10:15ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

  • Published On - Feb 01,2023 8:36 AM

    Follow us
    ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
    ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
    ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
    ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
    ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
    ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
    ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
    ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
    5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
    5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
    ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
    ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
    ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
    ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
    ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
    ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
    ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
    ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
    ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
    ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ