
ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆಯಲ್ಲಿ ಅಚ್ಚರಿಯ ಬದಲಾವಣೆ ಮಾಡಲಾಗಿದೆ. ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಟ್ಯಾಕ್ಸ್ ರಿಬೇಟ್ ಹೆಚ್ಚಿಸಲಾಗಿದೆ. ಟ್ಯಾಕ್ಸ್ ಸ್ಲ್ಯಾಬ್ ದರಗಳಲ್ಲಿ ಬದಲಾವಣೆ ಮಾಡಲಾಗಿದೆ. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇದೆ. ಅದನ್ನು ಹೊರತುಪಡಿಸಿ ಉಳಿದ ಆದಾಯದಲ್ಲಿ 4 ಲಕ್ಷ ರೂವರೆಗಿನ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. 4ರಿಂದ 8 ಲಕ್ಷ ರೂ ಮೊತ್ತಕ್ಕೆ ಶೇ. 5 ತೆರಿಗೆ ಇದೆ. 8ರಿಂದ 12 ಲಕ್ಷ ರೂ ಮೊತ್ತಕ್ಕೆ ಶೇ. 10 ತೆರಿಗೆ ಇದೆ. 12ರಿಂದ 15 ಲಕ್ಷ ರೂವರಗಿನ ಆದಾಯಕ್ಕೆ ಶೇ. 15 ತೆರಿಗೆ ಇದೆ. 15ರಿಂದ 20 ಲಕ್ಷ ರೂಗೆ ಶೇ. 20 ತೆರಿಗೆ; 20ರಿಂದ 24 ಲಕ್ಷ ರೂಗೆ ಶೇ. 25, ಹಾಗೂ 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ.
ಇವುಗಳ ಮಧ್ಯೆ ನಿಮಗೆ ತೆರಿಗೆ ಎಷ್ಟು ಕಟ್ಟಬೇಕಾಗಬಹುದು ಎಂದು ಲೆಕ್ಕ ಹಾಕಲು ಗೊಂದಲವಾಗುತ್ತಿದ್ದರೆ, ಇಗೋ ಇಲ್ಲಿದೆ ಸಿಂಪಲ್ ಕ್ಯಾಲ್ಕುಲೇಟರ್.
ಇದನ್ನೂ ಓದಿ: Kisan Credit Card Loan: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 5 ಲಕ್ಷ ರೂ.ಗೆ ಹೆಚ್ಚಳ, ಯಾರು ಅರ್ಹರು? ಇಲ್ಲಿದೆ ವಿವರ
ಈ ಮೇಲಿನ ಕ್ಯಾಲ್ಕುಲೇಟರ್ನಲ್ಲಿ ನೀವು ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಅನ್ನು ಮಾತ್ರ ನಮೂದಿಸಬಹುದು. ಆಗ ನೀವು ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಕಟ್ಟಬೇಕಾದ ತೆರಿಗೆ ಎಷ್ಟು, ಹಳೆಯ ಟ್ಯಾಕ್ಸ್ ರಿಜೈಮ್ನಲ್ಲಿ ಎಷ್ಟು ತೆರಿಗೆ ಕಟ್ಟಬೇಕು ಎಂಬುದನ್ನು ತಿಳಿಸುತ್ತದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ