Budget 2024 Cheaper and Costlier Items: ಯಾವುದು ಅಗ್ಗ? ಯಾವುದು ದುಬಾರಿ?

|

Updated on: Jul 23, 2024 | 2:02 PM

ಈ ಬಾರಿ ಬಜೆಟ್ ನಲ್ಲಿ ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು. ಅದೇ ವೇಳೆ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಘೋಷಿಸಿದ್ದಾರೆ.

Budget 2024 Cheaper and Costlier Items: ಯಾವುದು ಅಗ್ಗ? ಯಾವುದು ದುಬಾರಿ?
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ
Follow us on

ದೆಹಲಿ ಜುಲೈ 23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman )2024 ರ ಕೇಂದ್ರ ಬಜೆಟ್ (Budget 2024) ಮಂಡನೆ ಮಾಡಿದ್ದು, ತೆರಿಗೆ ಪಾವತಿಸುವ ಭಾರತೀಯರು ಯಾವ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿ ಆಗಲಿವೆ ಎಂಬುದರ ಬಗ್ಗೆ ಕುತೂಹಲದಿಂದ ನೋಡುತ್ತಿದ್ದಾರೆ. ಫೆಬ್ರವರಿ 1 ರಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಸೀತಾರಾಮನ್ ಯಾವುದೇ ಪ್ರಮುಖ ಬದಲಾವಣೆಗಳನ್ನು ಘೋಷಿಸಲಿಲ್ಲ.

ಹಿಂದಿನ ವರ್ಷದ ಬಜೆಟ್ ಅಧಿವೇಶನದಲ್ಲಿ, ಟಿವಿ, ಸ್ಮಾರ್ಟ್‌ಫೋನ್‌ಗಳು, ಸೀಗಡಿ ಫೀಡ್ ಮೊದಲಾದ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲಾಯಿತು. ಸಿಗರೇಟ್, ವಿಮಾನ ಪ್ರಯಾಣ ಮತ್ತು ಜವಳಿಗಳ ವೆಚ್ಚವನ್ನು ಹೆಚ್ಚಿಸಲಾಗಿತ್ತು.

ಈ ಬಾರಿ ಬಜೆಟ್ ನಲ್ಲಿ ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು. ಅದೇ ವೇಳೆ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಘೋಷಿಸಿದ್ದಾರೆ.

ಇದನ್ನೂ ಓದಿ: ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮೆಗಳಲ್ಲಿ ಆದಾಯ ತೆರಿಗೆ ಹೇಗಿದೆ? ಇಲ್ಲಿದೆ ಡೀಟೆಲ್ಸ್

ಮೊಬೈಲ್ ಹಾಗೂ ಚಾರ್ಜರ್ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.

ಅಗ್ಗ ಯಾವುದು?  ಯಾವುದು ದುಬಾರಿ?
ಆಮದು ಮಾಡಿದ ಆಭರಣ ವಸ್ತುಗಳು ಜೈವಿಕವಾಗಿ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳು
ಮೊಬೈಲ್ ಫೋನ್, ಮೊಬೈಲ್ ಚಾರ್ಜರ್, ಮೊಬೈಲ್ ಬಿಡಿಭಾಗಗಳು ದೂರಸಂಪರ್ಕ ಸಲಕರಣೆ
ಕ್ಯಾನ್ಸರ್ ಔಷಧಗಳು ಅಮೋನಿಯಂ ನೈಟ್ರೇಟ್
ಸಮುದ್ರಾಹಾರ PVC ಫ್ಲೆಕ್ಸ್ ಬ್ಯಾನರ್‌ಗಳು
ಚಿನ್ನ ಮತ್ತು ಬೆಳ್ಳಿ ಸೋಲಾರ್ ಗ್ಲಾಸ್
ಪ್ಲಾಟಿನಂ
ಪಾದರಕ್ಷೆ
ಪೆಟ್ರೋಕೆಮಿಕಲ್
ಚರ್ಮದ ವಸ್ತುಗಳು
ಎಕ್ಸ್ ರೇ ಮೆಷೀನ್
ಫೆರೋ ನಿಕ್ಕೆಲ್, ಬ್ಲಿಸ್ಟರ್ ಕಾಪರ್

ಕೇಂದ್ರ ಬಜೆಟ್ ಲೈವ್ ಬ್ಲಾಗ್ ಲಿಂಕ್

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Tue, 23 July 24