2024-24ರ ಸಾಲಿನ ವರ್ಷಕ್ಕೆ ಬಜೆಟ್ ಮಂಡನೆ ಇಂದು ನಡೆಯಲಿದೆ. ಚುನಾವಣೆಗೆ ಮುಂಚಿನದ್ದಾದ್ದರಿಂದ ಇದು ಮಧ್ಯಂತರ ಬಜೆಟ್ (Interim Budget 2024) ಆಗಿದೆ. ಫೆಬ್ರುವರಿ 1, ಗುರವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಸರ್ಕಾರಕ್ಕೆ ಮುಂದಿನ ಒಂದು ವರ್ಷದ ಆದಾಯ ಮತ್ತು ಖರ್ಚಿನ ಅಂದಾಜುಗಳಿರುವ ಲೆಕ್ಕಪತ್ರವೇ ಬಜೆಟ್ ಆಗಿದೆ. ವಿವಿಧ ಕ್ಷೇತ್ರಗಳಿಗೆ, ಉದ್ಯಮಗಳಿಗೆ ಸರ್ಕಾರದಿಂದ ಆಗುವ ಬಂಡವಾಳ ವೆಚ್ಚ ಎಷ್ಟು ಇತ್ಯಾದಿ ವಿವರಗಳು ಬಜೆಟ್ನಲ್ಲಿ ಇರುತ್ತವೆ. ತೆರಿಗೆ ಪಾವತಿಸುವ ಮಧ್ಯಮ ವರ್ಗದವರಿಗೆ ಹೊರೆ ಹೆಚ್ಚಿಸುವುದೋ, ಇಳಿಸುವುದೋ ಎಂಬುದೂ ಇದರಲ್ಲಿ ಇರುತ್ತದೆ. ಹೀಗಾಗಿ, ಉದ್ಯಮಿಗಳು, ಜನಸಾಮಾನ್ಯರು ಎಲ್ಲರಿಗೂ ಬಜೆಟ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಇರುತ್ತವೆ. ಬಜೆಟ್ ಮಂಡನೆಯನ್ನು ಲೈವ್ (Budget live streaming) ಆಗಿ ಎಲ್ಲಿ ವೀಕ್ಷಿಸಬಹುದು ಇತ್ಯಾದಿ ವಿವರ ಈ ಕೆಳಕಂಡಂತಿದೆ:
ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಮುಗಿದ ಬಳಿಕ ಹಣಕಾಸು ಸಚಿವಾಲಯದ ಬಜೆಟ್ ವೆಬ್ಸೈಟ್ನಲ್ಲಿ (www.indiabudget.gov.in) ವಿವಿಧ ಬಜೆಟ್ ದಾಖಲೆಗಳು ಸಿಗುತ್ತವೆ.
ಯೂನಿಯನ್ ಬಜೆಟ್ ಎಂಬ ಮೊಬೈಲ್ ಆ್ಯಪ್ನಲ್ಲೂ ಬಜೆಟ್ ದಾಖಲೆಗಳು ಲಭ್ಯ ಇರುತ್ತವೆ. ಬಜೆಟ್ನ ಮುಖ್ಯಾಂಶಗಳಿಂದ ಹಿಡಿದು ಬಜೆಟ್ ಭಾಷಣದವರೆಗೆ ದಾಖಲೆಗಳು ಲಭ್ಯ ಇರುತ್ತವೆ.
ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಲ್ಲಿ ಫೆ. 1ರಂದು ಬೆಳಗ್ಗೆಯಿಂದಲೇ ಬಜೆಟ್ ಬಗ್ಗೆ ನೇರ ಪ್ರಸಾರ ಶುರುವಾಗುತ್ತದೆ. ಬಜೆಟ್ ಪೂರ್ವಭಾವಿ ಚರ್ಚೆಯಿಂದ ಹಿಡಿದು ಬಜೆಟ್ ಮಂಡನೆಯ ನೇರ ಪ್ರಸಾರ ಹಾಗೂ ಬಜೆಟ್ ನಂತರದ ವಿಶ್ಲೇಷಣೆ ಎಲ್ಲವೂ ಸಮಗ್ರವಾಗಿರುತ್ತದೆ. ತಜ್ಞರಿಂದ ಬಜೆಟ್ ಬಗ್ಗೆ ಚರ್ಚೆಗಳು ನಡೆಯಲಿವೆ.
ಟಿವಿ9 ಡಿಜಿಟಲ್ನಲ್ಲೂ ಬಜೆಟ್ನ ಇಂಚಿಂಚೂ ಮಾಹಿತಿಯನ್ನು ನೋಡಬಹುದು, ಓದಬಹುದು. ಟಿವಿ9 ಕನ್ನಡ ಯೂಟ್ಯೂಬ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರುತ್ತದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 31 January 24