Budget 2022: ಬಜೆಟ್​ ಸಂದರ್ಭದಲ್ಲಿ ಮಾಡುವ ಹಲ್ವಾ ಕಾರ್ಯಕ್ರಮದ ಮಹತ್ವ ಏನು ಗೊತ್ತಾ?

ಕೇಂದ್ರ ಬಜೆಟ್​ಗೂ ಮುನ್ನ ಹಲ್ವಾ ಕಾರ್ಯಕ್ರಮ ಎಂಬುದನ್ನು ಮಾಡಲಾಗುತ್ತದೆ. ಏನು ಈ ಹಲ್ವಾ ಕಾರ್ಯಕ್ರಮ ಹಾಗೂ ಏಕಾಗಿ ಮಾಡಲಾಗುತ್ತದೆ, ಏನಿದರ ಮಹತ್ವ ಎಂಬಿತ್ಯಾದಿ ವಿವರಗಳು ಇಲ್ಲಿವೆ.

Budget 2022: ಬಜೆಟ್​ ಸಂದರ್ಭದಲ್ಲಿ ಮಾಡುವ ಹಲ್ವಾ ಕಾರ್ಯಕ್ರಮದ ಮಹತ್ವ ಏನು ಗೊತ್ತಾ?
ಸಂಗ್ರಹ ಚಿತ್ರ
Follow us
TV9 Web
| Updated By: Srinivas Mata

Updated on: Jan 27, 2022 | 6:04 PM

2022-23ನೇ ಹಣಕಾಸು ವರ್ಷಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್​ಗೆ ಮುಂಚೆ “ಹಲ್ವಾ ಕಾರ್ಯಕ್ರಮ” ನಡೆಯಲಿದೆ. ಇದು ಪ್ರತಿ ವರ್ಷ ಬಜೆಟ್​ ಮಂಡನೆ ಹೇಗೋ ಹಲ್ವಾ ಕಾರ್ಯಕ್ರಮವೂ ಸಾಂಪ್ರದಾಯಿಕವಾಗಿ ಬಂದುಹೋಗಿದೆ. ದೆಹಲಿಯಲ್ಲಿ ಇರುವ ಸೆಕ್ರೆಟರಿಯೇಟ್ ಕಟ್ಟಡದ ನಾರ್ತ್​ ಬ್ಲಾಕ್​ನ ಬೇಸ್​ಮೆಂಟ್​ನಲ್ಲಿ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಈ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ದೊಡ್ಡ ಬಾಣಲೆಯಲ್ಲಿ ಹಲ್ವಾ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಕೇಂದ್ರ ಹಣಕಾಸು ಸಚಿವರು ಈ ಹಲ್ವಾ ಕಾರ್ಯಕ್ರಮ ಸಂಭ್ರಮಾಚರಣೆ ಶುರು ಮಾಡುತ್ತಾರೆ. ಅದನ್ನು ಅವರ ಸಹೋದ್ಯೋಗಿಗಳಿಗೆ ವಿತರಿಸುತ್ತಾರೆ. ರಾಜ್ಯ ಖಾತೆ ಸಚಿವರು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಹಲ್ವಾ ಕಾರ್ಯಕ್ರಮ ಆದ ಮೇಲೆ ನಾರ್ತ್ ಬ್ಲಾಕ್ ಎಂಬುದು ಹತ್ತೂ ಚಿಲ್ಲರೆ ದಿನಗಳ ಕಾಲ ಭದ್ರ ಕೋಟೆ ಆಗಿಬಿಡುತ್ತದೆ. ಅದು ಬಜೆಟ್​ ಮಂಡನೆ ಕ್ಷಣದ ತನಕ ಹಾಗೇ ಇರುತ್ತದೆ.

ಯಾರೆಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗಿ ಆಗಿರುತ್ತಾರೋ ಅವರೆಲ್ಲ ಆ ದಾಖಲೆ (ಬಜೆಟ್ ಭಾಷಣದ ಪ್ರತಿ) ಬಗ್ಗೆ ಕಠಿಣವಾದ ರಹಸ್ಯ ಕಾಪಾಡಿಕೊಳ್ಳುವುದಕ್ಕೆ ತಾವು ಪ್ರತ್ಯೇಕವಾಗಿ ಇದ್ದುಬಿಡುತ್ತಾರೆ. ರಹಸ್ಯ ಕಾಪಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವರೂ ಕಠಿಣ ನಿಯಮಗಳನ್ನು ಪಾಲಿಸಬೇಕು. ಆದರೆ ಈ ಅವಧಿಯಲ್ಲಿ ಕಟ್ಟಡದ ಒಳಗೆ ಹಾಗೂ ಹೊರಗೆ ಹೋಗಿಬರುವುದಕ್ಕೆ ಅವರಿಗೊಬ್ಬರಿಗೆ ಅನುಮತಿ ಇರುತ್ತದೆ. ಕಳೆದ ವರ್ಷ ಅಧಿಕಾರಿಗಳು ಹಾಗಿರಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಿರಲಿಲ್ಲ. ಏಕೆಂದರೆ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡಿಸಲಾಯಿತು.

ಹಲ್ವಾ ಕಾರ್ಯಕ್ರಮ ಏಕೆ ಮಾಡಲಾಗುತ್ತಿತ್ತು ಅಂದರೆ, ಬಜೆಟ್ ಭಾಷಣದ ಪ್ರತಿಯನ್ನು ಮುದ್ರಿಸಲು ಆರಂಭ ಮಾಡಲಾಗುತ್ತಿದೆ ಎಂಬುದನ್ನು ತಿಳಿಸುವ ಸೂಚನೆ ಅದಾಗಿತ್ತು. ಕಳೆದ ವರ್ಷ ಯಾವುದೇ ಮುದ್ರಣ ಅಂತಿರಲಿಲ್ಲ. ಈ ಕಾರ್ಯಕ್ರಮವು ಬಜೆಟ್ ಮಂಡನೆಯ ಒಂಬತ್ತು ದಿನಕ್ಕೆ ಮುಂಚೆ ನಡೆಯಿತು. ಕಳೆದ ವರ್ಷ ಸರ್ಕಾರದಿಂದ ಕೇಂದ್ರ ಬಜೆಟ್​ ಆ್ಯಪ್ ಕೂಡ ಆರಂಭಿಸಲಾಗಿತ್ತು. ಅದು ಜನರಿಗೆ ಬಜೆಟ್​ ದಾಖಲಾತಿಯ ಡಿಜಿಟಲ್ ಸಂಪರ್ಕ ಒದಗಿಸಿತ್ತು. ತಿಂಗಳುಗಟ್ಟಲೆ ನಡೆಯುವ ಬಜೆಟ್ ಸಿದ್ಧತೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿ, ಗುರುತಿಸುವುದಕ್ಕಾಗಿ ಈ ಹಲ್ವಾ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ಪ್ರಮುಖ ದಾಖಲೆಯಾದ ಬಜೆಟ್​ ಭಾಷಣದ ಪ್ರತಿಯನ್ನು ಸಿದ್ಧಪಡಿಸುವಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಹಲ್ವಾ ಹಂಚಲಾಗುತ್ತದೆ.

ಈ ಪದ್ಧತಿ ದಶಕಗಳಿಂದ ನಡೆದುಬಂದಿದೆ. ಅಂದಹಾಗೆ ನಾರ್ತ್​ ಬ್ಲಾಕ್​ನ ಬೇಸ್​ಮೆಂಟ್​ನಲ್ಲಿ ವಿಶೇಷ ಪ್ರಿಂಟಿಂಗ್ ಪ್ರೆಸ್ ಇದೆ. ಅದರಲ್ಲಿ 1980ನೇ ಇಸವಿಯಿಂದ 2020ರ ತನಕದ ಬಜೆಟ್​ ಭಾಷಣದ ಪ್ರತಿಯನ್ನು ಮುದ್ರಿಸಲಾಗಿದೆ. 2019, 2020 ಹಾಗೂ 2021ರ ನಂತರ ಇದು ನಿರ್ಮಲಾ ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಆಗಿದೆ. ಕಳೆದ ವರ್ಷ ಟ್ಯಾಬ್ಲೆಟ್ (ಗ್ಯಾಜೆಟ್)ನಲ್ಲಿ ಬಜೆಟ್​ ಅನ್ನು ಸಂಸತ್​ನಲ್ಲಿ ಓದಿದ್ದರು.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್​ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಕಿ- ಅಂಶಗಳು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ