
ನವದೆಹಲಿ, ಜುಲೈ 11: ಅಮೆರಿಕ ಒಂದು ರೀತಿಯಲ್ಲಿ ವಲಸಿಗರ (land of immigrants) ನಾಡೆನಿಸಿದೆ. ಪ್ರಪಂಚದ ಮೂಲೆಮೂಲೆಯಿಂದ ಸಾಕಷ್ಟು ಜನರು ಬಣ್ಣ ಬಣ್ಣದ ಕನಸಿನೊಂದಿಗೆ ಅಮೆರಿಕಕ್ಕೆ ವಲಸೆ ಹೋಗುತ್ತಾರೆ, ಬದುಕು ಕಟ್ಟಿಕೊಳ್ಳುತ್ತಾರೆ. ಅಂತೆಯೇ, ಸಾವಿರಾರು ಜನರು ಸ್ವಂತ ಬಲದಲ್ಲಿ ಮಿಲಿನೇರ್ಗಳಾಗುತ್ತಾರೆ. ನೂರಾರು ವಲಸಿಗರು ಬಿಲಿಯನೇರ್ಗಳೂ ಆಗುತ್ತಾರೆ. ಅಮೆರಿಕದಲ್ಲಿರುವ ಬಿಲಿಯನೇರ್ಗಳ ಸಂಖ್ಯೆ (Billionaires) 900ಕ್ಕೂ ಅಧಿಕ ಇದೆ. ಈ ಪೈಕಿ 125 ಮಂದಿ ವಲಸೆ ಬಂದವರಾಗಿದ್ದಾರೆ. ಇದರಲ್ಲಿ ಅತಿಹೆಚ್ಚು ಮಂದಿ ಭಾರತೀಯರೆನಿಸಿದ್ದಾರೆ.
ಫೋರ್ಬ್ಸ್ ಪಟ್ಟಿ ಪ್ರಕಾರ 2022ರಲ್ಲಿ ಅಮೆರಿಕದಲ್ಲಿ ಬಿಲಿಯನೇರ್ಗಳಾಗಿರುವ ವಲಸಿಗರ ಸಂಖ್ಯೆ 92 ಇತ್ತು. ಈಗ ಅದು 125ಕ್ಕೆ ಏರಿದೆ. ಈ 125 ಬಿಲಿಯನೇರ್ಗಳು 43 ದೇಶಗಳಿಂದ ಬಂದವರಾಗಿದ್ದಾರೆ. ಅಮೆರಿಕದ ಶೇ. 14ರಷ್ಟು ಬಿಲಿಯನೇರ್ಗಳು ವಲಸಿಗರೇ ಆಗಿದ್ದಾರೆ.
ಇದನ್ನೂ ಓದಿ: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ
ಅಮೆರಿಕದಲ್ಲಿರುವ 125 ವಲಸಿಗ ಬಿಲಿಯನೇರ್ಗಳ ಪೈಕಿ ಭಾರತ ಮೂಲದವರ ಸಂಖ್ಯೆ ಅತ್ಯಧಿಕ. 12 ಮಂದಿ ಭಾರತ ಸಂಜಾತ ವ್ಯಕ್ತಿಗಳು ಅಮೆರಿಕದಲ್ಲಿ ಶತಕೋಟ್ಯಾಧಿಪತಿಗಳೆನಿಸಿದ್ದಾರೆ. ಇಸ್ರೇಲ್ ಮತ್ತು ತೈವಾನ್ ದೇಶಗಳ ಜನರು ನಂತರದ ಸ್ಥಾನದಲ್ಲಿದ್ದಾರೆ. ಅಮೆರಿಕದ ಬಿಲಿಯನೇರ್ಗಳಲ್ಲಿ ವಲಸಿಗರು ಎಷ್ಟಿದ್ದಾರೆ ಎನ್ನುವ ಟಾಪ್ 4 ಪಟ್ಟಿ ಇಲ್ಲಿದೆ:
2022ರಲ್ಲಿ ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನೇರ್ಗಳೆನಿಸಿದ ವಲಸಿಗರಲ್ಲಿ ಇಸ್ರೇಲ್ ಮೂಲದ ವ್ಯಕ್ತಿಗಳ ಸಂಖ್ಯೆ ಹೆಚ್ಚಿತ್ತು. ಇಸ್ರೇಲ್, ಕೆನಡಾ ನಂತರದ ಸ್ಥಾನ ಭಾರತದ್ದಾಗಿತ್ತು. ಈಗ ಭಾರತ ಮೂಲದವರೇ ಮುಂಚೂಣಿಗೆ ಬಂದಿದ್ದಾರೆ.
ಇದನ್ನೂ ಓದಿ: ಶ್ರೀಮಂತರ ನಗರಿ ಬೆಂಗಳೂರು; ನಾರಾಯಣಮೂರ್ತಿ, ಅಜಿಮ್ ಪ್ರೇಮ್ಜಿ, ಇರ್ಫಾನ್ ರಜಾಕ್… ಟಾಪ್ 8 ಬೆಂಗಳೂರಿಗರ ಪಟ್ಟಿ
ಅಮೆರಿಕದಲ್ಲಿರುವ ಅತಿ ಶ್ರೀಮಂತ ಭಾರತೀಯರೆಂದರೆ ಗೂಗಲ್ ಸಿಇಒ ಸುಂದರ್ ಪಿಚ್ಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೆಸರು ಮೊದಲು ಬರುತ್ತದೆ. ಆದರೆ, ಅತಿದೊಡ್ಡ ಶ್ರೀಮಂತ ಎನಿಸಿರುವುದು ಜಯ್ ಚೌಧರಿ. ಝಡ್ಸ್ಕೇಲರ್ ಎನ್ನುವ ಸೈಬರ್ ಸೆಕ್ಯೂರಿಟಿ ಕಂಪನಿಯ ಸಿಇಒ ಜಯ್ ಚೌಧರಿ ಅವರು ಗೂಗಲ್, ಮೈಕ್ರೋಸಾಫ್ಟ್ ಸಿಇಒಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಹೆಚ್ಚು ಶ್ರೀಮಂತರೆನಿಸಿದ್ದಾರೆ. ಅವರ ಬಳಿ 17.9 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ