Paytm New Features: ಪೇಟಿಎಂನಿಂದ ಹೊಸ ಐದು ಫೀಚರ್ಸ್ ಅಳವಡಿಕೆ; ನೀವು ಗಮನಿಸಿದ್ದೀರಾ?
Paytm introduces 5 new features: ಹೊಸತನ ಮತ್ತು ನಾವೀನ್ಯತೆಗೆ ಹೆಸರಾದ ಪೇಟಿಎಂ ಸಂಸ್ಥೆ ಈಗ ಐದು ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಬೇಕಾದ ಟ್ರಾನ್ಸಾಕ್ಷನ್ಗಳನ್ನು ಮರೆ ಮಾಚುವುದರಿಂದ ಹಿಡಿದು ಮೊಬೈಲ್ ಹೋಮ್ ಸ್ಕ್ರೀನ್ನಲ್ಲಿ ಕ್ಯೂಆರ್ ವಿಜೆಟ್ ಕೂರಿಸುವವರೆಗೂ ವಿವಿಧ ಫೀಚರ್ಗಳನ್ನು ಪೇಟಿಎಂ ತಂದಿದೆ. ಹಿಂದೆ, ಅದು ಕ್ಯೂಆರ್ ಕೋಡ್, ಸೌಂಡ್ ಬಾಕ್ಸ್ ಇತ್ಯಾದಿ ಪ್ರಾಡಕ್ಟ್ ಇನ್ನೋವೇಶನ್ಸ್ ಮಾಡಿದ್ದಿದೆ.

ನವದೆಹಲಿ, ಜುಲೈ 10: ಭಾರತದಲ್ಲಿ ಯುಪಿಐ ಪೇಮೆಂಟ್ ಸಿಸ್ಟಂ (UPI payment system) ಬಂದಾಗ ಮುಂಚೂಣಿಯಲ್ಲಿ ಇದ್ದದ್ದು ಪೇಟಿಎಂ. ಉದ್ಯಮಕ್ಕೆ ಹೊಸದಾದ ಹೊಸ ಹೊಸ ಫೀಚರ್ಗಳನ್ನು ತಂದು ಗಮನ ಸೆಳೆಯುವುದು ಪೇಟಿಎಂ. ಕ್ಯುಆರ್ ಕೋಡ್, ಸೌಂಡ್ಬಾಕ್ಸ್ ತಂತ್ರಜ್ಞಾನವನ್ನು ಪರಿಚಯಿಸಿದ್ದು ಪೇಟಿಎಂ. ಸದಾ ನಾವೀನ್ಯತೆಯಿಂದ ಗಮನ ಸೆಳೆಯುವ ಪೇಟಿಎಂ (Paytm) ಇದೀಗ ಐದು ಹೊಸ ಫೀಚರ್ಗಳನ್ನು ಪರಿಚಯಿಸಿದೆ.
1. ಪೇಮೆಂಟ್ ಹಿಸ್ಟರಿಯಿಂದ ನಿಮಗೆ ಬೇಕಾದ ಟ್ರಾನ್ಸಾಕ್ಷನ್ಸ್ ಮರೆಮಾಚಬಹುದು
ಬಹಳ ಗೌಪ್ಯ ಎನಿಸುವ, ಅಥವಾ ವೈಯಕ್ತಿಕ ಎನಿಸುವ ಟ್ರಾನ್ಸಾಕ್ಷನ್ಗಳು ನಮ್ಮ ಪೇಮೆಂಟ್ ಹಿಸ್ಟರಿಯಲ್ಲಿ ಕಾಣದಂತೆ ಮಾಡುವ ಫೀಚರ್ ಇದೆ. ಆ್ಯಪ್ನ ‘ಬ್ಯಾಲನ್ಸ್ ಅಂಡ್ ಹಿಸ್ಟರಿ’ ಸೆಕ್ಷನ್ನಲ್ಲಿ ಪಟ್ಟಿಯಾಗುವ ಪೇಮೆಂಟ್ ಹಿಸ್ಟರಿಯಿಂದ ನಿಮಗೆ ಬೇಕಾದ ಯುಪಿಐ ಟ್ರಾನ್ಸಾಕ್ಷನ್ಗಳನ್ನು ಹೈಡ್ ಮಾಡಬಹುದು. ‘ವೀವ್ ಹಿಡ್ಡನ್ ಪೇಮೆಂಟ್ಸ್’ ಸೆಕ್ಷನ್ಗೆ ಹೋಗಿ ಅನ್ಹೈಡ್ ಮಾಡಬಹುದು. ಅನ್ಹೈಡ್ ಮಾಡಲು ನಿಮ್ಮ ದೃಢೀಕರಣ ಕೇಳಲಾಗುತ್ತದೆ.
ಇದನ್ನೂ ಓದಿ: ಎನ್ಆರ್ಐಗಳು ತಮ್ಮ ದೇಶದ ಮೊಬೈಲ್ ನಂಬರ್ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್ಸಿ ಫಸ್ಟ್ ಬ್ಯಾಂಕ್ನಿಂದ ಸೌಲಭ್ಯ
2. ಪಿಡಿಎಫ್, ಎಕ್ಸೆಲ್ ಫಾರ್ಮ್ಯಾಟ್ಗಳಲ್ಲಿ ಯುಪಿಐ ಸ್ಟೇಟ್ಮೆಂಟ್
ನಿಮ್ಮ ಯುಪಿಐ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ಗಳನ್ನು ಪಿಡಿಎಫ್ ಮತ್ತು ಎಕ್ಸೆಲ್ ಫಾರ್ಮ್ಯಾಟ್ಗಳಲ್ಲಿ ಡೌನ್ಲೋಡ್ ಮಾಡಬಹುದು.
3. ಯುಪಿಐ ಐಡಿಯಲ್ಲಿ ಮೊಬೈಲ್ ನಂಬರ್ ಗೌಪ್ಯವಾಗಿಡಿ
ಪೇಟಿಎಂನಲ್ಲಿ ನೀವು ವೈಯಕ್ತಿಕಗೊಳಿಸಿದ ಯುಪಿಐ ಐಡಿ ರಚಿಸಲು ಅವಕಾಶ ಇದೆ. ಮೊಬೈಲ್ ನಂಬರ್ ಬಹಿರಂಗಪಡಿಸುವ ಅಗತ್ಯತೆ ಇರುವುದಿಲ್ಲ. ನಿಮ್ಮಿಷ್ಟದ ಹೆಸರಿನಿಂದ ಕೂಡಿದ ಯುಪಿಐ ಐಡಿ ರಚಿಸಬಹುದು.
4. ಬ್ಯಾಂಕ್ ಬ್ಯಾಲನ್ಸ್ ಪರಿಶೀಲಿಸಿ
ಯುಪಿಐ ಆ್ಯಪ್ಗಳಲ್ಲಿ ನೀವು ಬ್ಯಾಂಕ್ ಅಕೌಂಟ್ಗಳಿಂದ ಟ್ರಾನ್ಸಾಕ್ಷನ್ ಮಾಡಬಹುದು. ಬ್ಯಾಲನ್ಸ್ ಪರಿಶೀಲಿಸಬಹುದು. ಯುಪಿಐಗೆ ಜೋಡಿತವಾದ ಎಲ್ಲಾ ಬ್ಯಾಂಕ್ ಅಕೌಂಟ್ಗಳ ಬ್ಯಾಲನ್ಸ್ ಎಷ್ಟಿದೆ ಎಂದು ಪೇಟಿಎಂ ಆ್ಯಪ್ನಲ್ಲಿ ಒಂದೇ ಕಡೆ ನೋಡಬಹುದು.
ಇದನ್ನೂ ಓದಿ: ಕೆರಿಬಿಯನ್ ನಾಡಿಗೂ ಹರಡಿದ ಭಾರತದ ಯುಪಿಐ; ಟ್ರಿನಿಡಾಡ್ ಟೊಬಾಗೊದಲ್ಲಿ ಭೀಮ್ ಆ್ಯಪ್ ಅಳವಡಿಕೆ
5. ಫೋನ್ನ ಹೋಮ್ ಸ್ಕ್ರೀನ್ನಲ್ಲಿ ಕ್ಯುಆರ್ ವಿಜೆಟ್
ಹಣ ಸ್ವೀಕರಿಸಲು ಇರುವ ಕ್ಯುಆರ್ ವಿಜೆಟ್ ಅನ್ನು ಫೋನ್ನ ಹೋಮ್ ಸ್ಕ್ರೀನ್ನಲ್ಲಿ ಇರಿಸುವ ಅವಕಾಶವನ್ನು ಪೇಟಿಎಂ ನೀಡುತ್ತದೆ. ಇದು ಕ್ಯಾಬ್ ಡ್ರೈವರ್, ಡೆಲಿವರಿ ಏಜೆಂಟ್ಸ್ ಮೊದಲಾದವರಿಗೆ ಅನುಕೂಲವಾಗುತ್ತದೆ. ಗ್ರಾಹಕರಿಂದ ಹಣ ಸ್ವೀಕರಿಸಲು ಆ್ಯಪ್ ತೆರೆದು ಕ್ಯೂಆರ್ ಕೋಡ್ಗೆ ಹುಡುಕಬೇಕಾಗುವುದಿಲ್ಲ. ಫೋನ್ನ ಹೋಮ್ ಸ್ಕ್ರೀನ್ನಲ್ಲಿರುವ ಈ ವಿಜೆಟ್ ಒತ್ತಿದರೆ ಕ್ಯುಆರ್ ಕೋಡ್ ತೆರೆದುಕೊಳ್ಳುತ್ತದೆ. ಗ್ರಾಹಕರು ಅದನ್ನು ಸ್ಕ್ಯಾನ್ ಮಾಡಿ ಹಣ ಕಳುಹಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








