AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Memes: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ

Rishi Sunak trolled as he rejoins corporate job: ಯುಕೆ ದೇಶದ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಕಂಪನಿಯಲ್ಲಿ ಸೀನಿಯರ್ ಅಡ್ವೈಸರ್ ಆಗಿ ಕೆಲಸಕ್ಕೆ ಸೇರಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ಸ್​​ಗೆ ಎಡೆ ಮಾಡಿಕೊಟ್ಟಿದೆ. ಸುನಕ್ ಅವರ ಮಾವ ಎನ್ ಆರ್ ನಾರಾಯಣಮೂರ್ತಿ ಅವರ ವಾರದ 70 ಗಂಟೆ ಕೆಲಸದ ವಿಚಾರ ಇಟ್ಟುಕೊಂಡು ತಮಾಷೆ ಮಾಡಿದ್ದಾರೆ.

Memes: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ
ರಿಷಿ ಸುನಕ್ ಬಗ್ಗೆ ಮೀಮ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 10, 2025 | 5:21 PM

Share

ನವದೆಹಲಿ, ಜುಲೈ 10: ಬ್ರಿಟನ್ ದೇಶದ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ. ನ್ಯೂಯಾರ್ಕ್ ಮೂಲದ ಈ ಕಂಪನಿಯಲ್ಲಿ ಸೀನಿಯರ್ ಅಡ್ವೈಸರ್ ಆಗಿ ಅವರು ಕೆಲಸ ಮಾಡಲಿದ್ದಾರೆ. ಗೋಲ್ಡ್​ಮ್ಯಾನ್ ಸ್ಯಾಕ್ಸ್ ಕಂಪನಿಯ ಕ್ಲೈಂಟ್​​ಗಳಿಗೆ ಸ್ಥೂಲ ಆರ್ಥಿಕತೆ (ಮ್ಯಾಕ್ರೊ ಎಕನಾಮಿಕ್) ಮತ್ತು ಜಾಗತಿಕ ರಾಜಕೀಯ ಅಂಶಗಳ ಕುರಿತು ಸಲಹೆಗಳನ್ನು ನೀಡುವ ಕಾಯಕ ಅವರದ್ದು.

ಮೂಲತಃ ಹಣಕಾಸು ಕ್ಷೇತ್ರದಿಂದಲೇ ಬಂದಿದ್ದ ರಿಷಿ ಸುನಕ್ 2020ರ ಫೆಬ್ರುವರಿಯಿಂದ 2022ರ ಜುಲೈವರೆಗೆ ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. 2022ರ ಅಕ್ಟೋಬರ್​​ನಿಂದ 2024ರ ಜುಲೈವರೆಗೆ ಪ್ರಧಾನಿಯಾಗಿಯೂ ಕೆಲಸ ಮಾಡಿದ್ದಾರೆ. ನಂತರ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಅಧಿಕಾರ ಕಳೆದುಕೊಂಡಿತು.

ಇದನ್ನೂ ಓದಿ: US Student Visa: ಅಮೆರಿಕದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯರಿಗೆ ಗುಡ್​​ ನ್ಯೂಸ್​, US ವೀಸಾ ಪ್ರಕ್ರಿಯೆ ಪುನರಾರಂಭ

ಕುತೂಹಲ ಎಂದರೆ, ರಿಷಿ ಸುನಕ್ ಅವರು ಮೊದಲು ವೃತ್ತಿಜೀವನ ಆರಂಭಿಸಿದ್ದು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಕಂಪನಿಯಿಂದಲೇ. ಈಗ ಮರಳಿ ಗೂಡಿಗೆ ಎಂಬಂತೆ ಅದೇ ಕಂಪನಿಗೆ ಸೀನಿಯರ್ ಅಡ್ವೈಸರ್ ಆಗಿ ಮರಳಿದ್ದಾರೆ.

ಮೀಮ್ಸ್​​ಗೆ ಕಾರಣವಾದ ರಿಷಿ ಸುನಕ್ ಮರುಪ್ರವೇಶ

ರಿಷಿ ಸುನಕ್ ಅವರು ಕಾರ್ಪೊರೇಟ್ ಕೆಲಸಕ್ಕೆ ಮರುಸೇರ್ಪಡೆಯಾಗಿರುವುದು ಹಲವು ಮೀಮ್ಸ್​ ಸೃಷ್ಟಿಗೆ ಕಾರಣವಾಗಿದೆ. ಸುನಕ್ ಅವರ ಮಾವ ಇನ್ಫೋಸಿಸ್ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಅಂಶವನ್ನೇ ಇಟ್ಟುಕೊಂಡು ನಾನಾ ರೀತಿಯ ತಮಾಷೆಗಳನ್ನು ಜನರು ಮಾಡುತ್ತಿದ್ದಾರೆ.

‘ನಿಮ್ಮ ಮಾವ ವಾರಕ್ಕೆ 70 ಗಂಟೆ ಕೆಲಸ ಮಾಡಲು ನಿಮ್ಮನ್ನು ಬಲವಂತಪಡಿಸಿರಬಹುದೆ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ನಿಯಮ ಪಾಲಿಸಲು ರಿಷಿ ಸುನಕ್ ಗೋಲ್ಡ್​ಮ್ಯಾನ್ ಸ್ಯಾಕ್ಸ್​​ಗೆ ಸೇರಿದ್ದಾರೆ’ ಎಂದು ಮತ್ತೊಬ್ಬರು ಕುಚೋದ್ಯ ಮಾಡಿದ್ದಾರೆ.

ಇದನ್ನೂ ಓದಿ: ಸ್ನೇಹಿತನಿಗೆ ಕಾನೂನು ತೊಂದರೆ; ಇಡೀ ದೇಶಕ್ಕೆ ಟ್ಯಾರಿಫ್ ಕಟ್ಟಳೆ ಹಾಕಿದ ಡೊನಾಲ್ಡ್ ಟ್ರಂಪ್

ರಿಷಿ ಸುನಕ್ ಇನ್ಫೋಸಿಸ್​ಗೆ ಯಾಕೆ ಸೇರಲಿಲ್ಲ? ನಾರಾಯಣಮೂರ್ತಿ ಅವರ ಕೆಲಸದ ಅವಧಿ ಬಗ್ಗೆ ಭಯದಿಂದ ಸೇರಲಿಲ್ಲವಾ? ಎಂದು ಮತ್ತೊಬ್ಬ ಸೋಷಿಯಲ್ ಮೀಡಿಯಾ ಬಳಕೆದಾರ ತಮಾಷೆ ಮಾಡಿದ್ದಾರೆ.

ವಾರಕ್ಕೆ 100 ಗಂಟೆ ಕೆಲಸ ಮಾಡಬೇಕು ಎಂದು ಮಾವನ ನಾರಾಯಣ ಮೂರ್ತಿ ಅವರ ಷರತ್ತನ್ನು ಪೂರ್ಣಗೊಳಿಸಲು ರಾಜಕಾರಣಿಯಾಗಿ ಸಾಧ್ಯವಿಲ್ಲದ್ದರಿಂದ ಕೆಲಸಕ್ಕೆ ಸೇರಿದ್ದಾರೆ ಸುನಕ್ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Thu, 10 July 25

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ