AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸೈಲ್ ತಯಾರಿಕೆ ವೇಗದಲ್ಲಿ ಭಾರತ ಗಣನೀಯ ವೃದ್ಧಿ; ತಯಾರಿಕೆ ಅವಧಿ 2-3 ವರ್ಷಕ್ಕೆ ಇಳಿಕೆ; ವಿಶ್ವದರ್ಜೆಗೇರಿದ ಭಾರತದ ಸಾಮರ್ಥ್ಯ

India's missile production turnaround time reduced to just 2-3 years: ಭಾರತದ ಮಿಸೈಲ್ ಅಭಿವೃದ್ಧಿ ಮತ್ತು ತಯಾರಿಕೆಯ ಅವಧಿ 10-12 ವರ್ಷದಿಂದ 2-3 ವರ್ಷಕ್ಕೆ ಇಳಿದಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಇಷ್ಟು ವೇಗವಾಗಿ ಕ್ಷಿಪಣಿ ಅಭಿವೃದ್ಧಿಪಡಿಸಬಲ್ಲುವು. ದಶಕಗಳ ಅನುಭವ ಇರುವ ಈ ಮುಂದುವರಿದ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿರುವುದು ಗಮನಾರ್ಹ ಸಂಗತಿ.

ಮಿಸೈಲ್ ತಯಾರಿಕೆ ವೇಗದಲ್ಲಿ ಭಾರತ ಗಣನೀಯ ವೃದ್ಧಿ; ತಯಾರಿಕೆ ಅವಧಿ 2-3 ವರ್ಷಕ್ಕೆ ಇಳಿಕೆ; ವಿಶ್ವದರ್ಜೆಗೇರಿದ ಭಾರತದ ಸಾಮರ್ಥ್ಯ
ಭಾರತದ ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2025 | 12:37 PM

Share

ನವದೆಹಲಿ, ಜುಲೈ 10: ಭಾರತ ಕ್ಷಿಪಣಿ ತಯಾರಿಕೆಯಲ್ಲಿ ಮಹತ್ವದ ಬೆಳವಣಿಗೆ ಹೊಂದುತ್ತಿದೆ. ಅದರ ತಯಾರಿಕಾ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹಚ್ಚುತ್ತಿದೆ. ಮಿಸೈಲ್ ತಯಾರಿಕೆಯ ವೇಗದಲ್ಲಿ, ಅಂದರೆ, ಪ್ರೊಡಕ್ಷನ್ ಟರ್ನರೌಂಡ್ ಟೈಮ್​ನಲ್ಲಿ (missile production turnaround time) ಬಹಳ ಇಳಿಕೆ ಆಗಿದೆ. ಈ ಮೊದಲು ಕ್ಷಿಪಣಿ ಅಭಿವೃದ್ಧಿಗೆ 10-12 ವರ್ಷ ಆಗುತ್ತಿತ್ತು. ಈಗ ಅದು 2-3 ವರ್ಷದೊಳಗೆ ಆಗುತ್ತಿದೆ. ಭಾರತೀಯ ಏರೋನಾಟಿಕಲ್ ಸೊಸೈಟಿಯ ಅಧ್ಯಕ್ಷ ಹಾಗೂ ಡಿಆರ್​ಡಿಒದ ಮಾಜಿ ಅಧ್ಯಕ್ಷರೂ ಆದ ಜಿ ಸತೀಶ್ ರೆಡ್ಡಿ (G Satheesh Reddy) ಈ ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ ವೆಬ್​ಸೈಟ್​​ನಲ್ಲಿ ವರದಿಯಾಗಿದೆ.

ಮಿಸೈಲ್ ಸಾಮರ್ಥ್ಯದಲ್ಲಿ ಮುಂದುವರಿದ ದೇಶಗಳ ಸಾಲಿಗೆ ಸೇರಿದ ಭಾರತ

ಭಾರತದ ಕ್ಷಿಪಣಿ ತಯಾರಿಕೆ ಅವಧಿ 2-3 ವರ್ಷಕ್ಕೆ ಇಳಿದಿರುವುದು ಗಮನಾರ್ಹ ಸಂಗತಿ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಇಷ್ಟು ವೇಗವಾಗಿ ಕ್ಷಿಪಣಿ ತಯಾರಿಸಬಲ್ಲುವು. ಅಮೆರಿಕ ಮತ್ತು ರಷ್ಯಾ ಆರೇಳು ದಶಕಗಳಿಂದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಿರತವಾಗಿವೆ. ಚೀನಾ ಹಲವು ದಶಕಗಳಿಂದಲೂ ಮಿಸೈಲ್ ಉತ್ಪಾದನೆಯಲ್ಲಿ ತೊಡಗಿದೆ. ಭಾರತವು ಕ್ಷಿಪಣಿ ಅಭಿವೃದ್ಧಿಗೆ ನಿಂತಿದ್ದು ಇತ್ತೀಚೆಗೆ. ಇಷ್ಟು ಬೇಗ ಅದರ ಸಾಮರ್ಥ್ಯವು ಮುಂದುವರಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದ್ದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ಡಿಆರ್​​​ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ

‘ಕ್ಷಿಪಣಿ ಅಭಿವೃದ್ಧಿಗೆ ತಗುಲುವ ಸಮಯ ಇಳಿಕೆ ಆಗಿರುವುದು ಮಿಸೈಲ್ ಟೆಕ್ನಾಲಜಿಯಲ್ಲಿ ನಾವು ಪಳಗುತ್ತಿರುವುದನ್ನು, ಸ್ವಾವಲಂಬನೆಗೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದು ಡಾ. ಸತೀಶ್ ರೆಡ್ಡಿ ಹೇಳಿದ್ದಾರೆ.

ಡಿಆರ್​ಡಿಒ ಸಂಸ್ಥೆಯು ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತದೆ. ಅಗ್ನಿ ಸರಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಬ್ರಹ್ಮೋಸ್ ಕ್ರ್ಯೂಸ್ ಕ್ಷಿಪಣಿಗಳು, ಅಸ್ತ್ರ (Astra missile), ರುದ್ರಂ ಸರಣಿಯ ಕ್ಷಿಪಣಿಗಳು (Rudram series), ಆಕಾಶ್ ಏರ್ ಡಿಫೆನ್ಸ್ ಸಿಸ್ಟಂ, ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಇತ್ಯಾದಿ ಹಲವಾರು ರೀತಿಯ ಕ್ಷಿಪಣಿಗಳನ್ನು ಡಿಆರ್​ಡಿಒ ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ: ಲೇಸರ್ ಡ್ಯಾಜ್ಲರ್ಸ್ ಇರುವ ಆಪ್ಟಾನಿಕ್ ಶೀಲ್ಡ್: ಭಾರತದಿಂದ ಹೊಸ ಡಿಫೆನ್ಸ್ ಸಿಸ್ಟಂ ಅಭಿವೃದ್ಧಿಗೆ ಹೆಜ್ಜೆ

ಡಿಆರ್​ಡಿಒ ತಾನು ಅಭಿವೃದ್ಧಿಪಡಿಸುವ ಕ್ಷಿಪಣಿಗಳ ತಂತ್ರಜ್ಞಾನವನ್ನು ಎಚ್​​ಎಎಲ್ ಹಾಗೂ ಹಲವು ಖಾಸಗಿ ಕಂಪನಿಗಳಿಗೆ ನೀಡುತ್ತದೆ. ಅವು ಈ ಕ್ಷಿಪಣಿಗಳನ್ನು ತಯಾರಿಸುತ್ತವೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಎಲ್ ಅಂಡ್ ಟಿ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಇತ್ಯಾದಿ ಖಾಸಗಿ ಕಂಪನಿಗಳು ಡಿಫೆನ್ಸ್ ಸೆಕ್ಟರ್​​ಗೆ ಬಂದ ಬಳಿಕ ಭಾರತದ ಡಿಫೆನ್ಸ್ ಪ್ರೊಡಕ್ಟಿವಿಟಿ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಕ್ಷಿಪಣಿ ತಯಾರಿಕೆಯ ಟರ್ನರೌಂಡ್ ಟೈಮ್ ಬಹಳ ತಗ್ಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ