AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trump: ಸ್ನೇಹಿತನಿಗೆ ಕಾನೂನು ತೊಂದರೆ; ಇಡೀ ದೇಶಕ್ಕೆ ಟ್ಯಾರಿಫ್ ಕಟ್ಟಳೆ ಹಾಕಿದ ಡೊನಾಲ್ಡ್ ಟ್ರಂಪ್

Donald Trump announces tariff to defend Bolsonaro: ಡೊನಾಲ್ಡ್ ಟ್ರಂಪ್ ಮೊನ್ನೆ 14 ದೇಶಗಳ ಮೇಲೆ ಆಮದು ಸುಂಕ ಹಾಕಿದ್ದಾರೆ. ಈಗ ಬ್ರೆಜಿಲ್ ಮೇಲೂ ಶೇ. 50ರಷ್ಟು ಟ್ಯಾರಿಫ್ ಹಾಕಿದ್ದಾರೆ. ಬ್ರೆಜಿಲ್​ನ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸವಾಗಿದೆ, ಅದರ ಮಾಜಿ ಅಧ್ಯಕ್ಷರನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ ಎಂಬುದು ಟ್ರಂಪ್ ಆರೋಪ. ಈ ಕಾರಣಕ್ಕೆ ಬ್ರೆಜಿಲ್ ಮೇಲೆ ಅವರು ಟ್ಯಾರಿಫ್ ಹೇರಿಕೆ ಮಾಡಿದ್ದಾರೆ.

Trump: ಸ್ನೇಹಿತನಿಗೆ ಕಾನೂನು ತೊಂದರೆ; ಇಡೀ ದೇಶಕ್ಕೆ ಟ್ಯಾರಿಫ್ ಕಟ್ಟಳೆ ಹಾಕಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2025 | 4:17 PM

Share

ವಾಷಿಂಗ್ಟನ್, ಜುಲೈ 10: ಡೊನಾಲ್ಡ್ ಟ್ರಂಪ್ (Donald Trump) ಅವರಂತೂ ಇತ್ತೀಚಿನ ವಾರಗಳಿಂದ ಟ್ಯಾರಿಫ್ ಮೇಲೆ ಟ್ಯಾರಿಫ್​ಗಳನ್ನು ಹಾಕುವ ಮಾತುಗಳನ್ನಾಡುತ್ತಿದ್ದಾರೆ. ಹಲವು ದೇಶಗಳಿಗೆ ಟ್ಯಾರಿಫ್ ಪ್ರಕಟಿಸಿಯೂ ಇದ್ದಾರೆ. ಜಪಾನ್​ನಂತಹ ಮಿತ್ರರಾಷ್ಟ್ರಗಳನ್ನೂ ಒಳಗೊಂಡಂತೆ 14 ದೇಶಗಳ ಮೇಲೆ ಅವರು ಆಮದು ಸುಂಕ ಹಾಕಿದ್ದಾರೆ. ಇದೀಗ ಅಮೆರಿಕ ಅಧ್ಯಕ್ಷರು ಬ್ರೆಜಿಲ್ ಮೇಲೆ ಶೇ. 50ರಷ್ಟು ಆಮದು ಸುಂಕ ಹೇರಿದ್ದಾರೆ. ಅದಕ್ಕೆ ಕಾರಣ, ಬ್ರೆಜಿಲ್​ನ ಆಡಳಿತವು ಮಾಜಿ ಅಧ್ಯಕ್ಷ ಜೇರ್ ಬೊಲ್ಸೋನಾರೋ (Jair Bolsonaro) ಅವರನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎನ್ನುವುದು.

ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಬಲಪಂಥೀಯ ವಿಚಾರಧಾರೆ ಪರ ಇರುವ ಮುಖಂಡ. ಬ್ರೆಜಿಲ್​​ನ ಮಾಜಿ ಅಧ್ಯಕ್ಷ ಜೇರ್ ಬೊಲ್ಸೋನಾರೋ ಕೂಡ ಅಲ್ಲಿಯ ಬಲಪಂಥೀಯ ನಾಯಕ. ಟ್ರಂಪ್ ಮತ್ತು ಬೊಲ್ಸೋನಾರೋ ಮಧ್ಯೆ ಸಹಜ ಗೆಳೆತನ ಮತ್ತು ಸಂವಾದ ಇದೆ. ಅವರ ರಕ್ಷಣೆಗೆ ಟ್ರಂಪ್ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮುಂದುವರಿದ ಟ್ರಂಪ್ ಬೆದರಿಕೆ; ತಾಮ್ರಕ್ಕೆ ಶೇ. 50, ಫಾರ್ಮಾಗೆ ಶೇ. 200; ಬ್ರಿಕ್ಸ್ ರಾಷ್ಟ್ರಗಳಿಗೆ ಹೆಚ್ಚುವರಿ ಶೇ. 10 ಸುಂಕದ ಎಚ್ಚರಿಕೆ

ಇದನ್ನೂ ಓದಿ
Image
ತಾಮ್ರ, ಫಾರ್ಮಾಗೆ ಟ್ರಂಪ್ ಟ್ಯಾರಿಫ್ ಹಾಕಿದರೆ ಭಾರತಕ್ಕೆಷ್ಟು ನಷ್ಟ?
Image
ಟ್ರಂಪ್ ಟ್ಯಾರಿಫ್​​ನಿಂದ ಬಾಂಗ್ಲಾ ತತ್ತರ; ಭಾರತಕ್ಕೆ ಲಾಭ
Image
ಟ್ರಂಪ್ ಟ್ಯಾರಿಫ್​​ನಿಂದ ಸದ್ಯ ಭಾರತ ಬಚಾವ್
Image
ಬ್ರಿಕ್ಸ್​ ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ

ಬೊಲ್ಸೊನಾರೋ ವಿರುದ್ಧ ಪಿತೂರಿ ಆರೋಪ

2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೇರ್ ಬೊಲ್ಸಾನಾರೋ ಸ್ಪರ್ಧಿಸಿದ್ದರು. ಇದರಲ್ಲಿ ಲೂಯಿಜ್ ಇನಾಷಿಯೊ ಲುಲಾ ಡಾ ಸಿಲ್ವಾ (Luiz Inacio Lula Da Silva) ಅವರು ಬಹಳ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಂದಿನ ಹಾಲಿ ಅಧ್ಯಕ್ಷರಾಗಿದ್ದ ಬೊಲ್ಸಾನಾರೋ ಅವರು ಈ ಚುನಾವಣೆಯಲ್ಲಿ ಗೋಲ್ಮಾಲ್ ಆಗಿದೆ ಎಂದು ಹೇಳಿ ಫಲಿತಾಂಶವನ್ನು ಒಪ್ಪಲು ಸಿದ್ಧರಿರಲಿಲ್ಲ. ಹಾಗೆಯೇ ಅಧಿಕಾರ ಬಿಟ್ಟುಕೊಡಲೂ ಸಿದ್ಧರಿರಲಿಲ್ಲ. ಇದು ಅವರ ವಿರುದ್ಧ ಇರುವ ಆರೋಪ. ಪ್ರಕರಣದ ವಿಚಾರಣೆಯೂ ನಡೆದಿದೆ.

ಬೊಲ್ಸೊನಾರೋ ಅವರನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾರಿ ಬಾರಿ ಹೇಳುತ್ತಿದ್ದಾರೆ. ಈಗ ಬ್ರೆಜಿಲ್ ಮೇಲೆ ಶೇ. 50 ಟ್ಯಾರಿಫ್ ಹಾಕುತ್ತಿರುವುದಾಗಿ ಹೇಳಿದ್ಧಾರೆ.

ಇದನ್ನೂ ಓದಿ: ಟ್ರಂಪ್ ಟ್ಯಾರಿಫ್​ನಿಂದ ಸದ್ಯ ಬಚಾವಾದ ಭಾರತ; ಅಮೆರಿಕದಿಂದ 14 ದೇಶಗಳ ಮೇಲೆ ಆಮದು ಸುಂಕ ಹೇರಿಕೆ

‘ಮುಕ್ತ ಚುನಾವಣೆಯನ್ನು ಬ್ರೆಜಿಲ್ ಹತ್ತಿಕ್ಕುತ್ತಿದೆ’ ಎಂದು ಆರೋಪಿಸಿರುವ ಟ್ರಂಪ್ ಅವರು, ತಾನು ಹಾಕಿರುವ ತೆರಿಗೆಗೆ ಬ್ರೆಜಿಲ್ ಪ್ರತಿಸುಂಕ ಹಾಕಿದರೆ ತಾನು ಇನ್ನೂ ಹೆಚ್ಚಿನ ಸುಂಕ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಶೇ. 50ರಷ್ಟು ಆಮದು ಸುಂಕವು ಆಗಸ್ಟ್ 1ರಿಂದ ಜಾರಿಗೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!