ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; 8ನೇ ವೇತನ ಆಯೋಗ ಜಾರಿಯಾದರೆ ಶೇ. 34ರಷ್ಟು ಸಂಬಳ ಹೆಚ್ಚಳ?
8th Central Pay Commission latest news: ಮುಂದಿನ ವರ್ಷದಿಂದ ಎಂಟನೇ ವೇತನ ಆಯೋಗದ ಶಿಫಾರಸು ಜಾರಿಗೆ ಬರುವ ಸಾಧ್ಯತೆ ಇದೆ. ವರದಿಗಳ ಪ್ರಕಾರ 8ನೇ ವೇತನ ಆಯೋಗದ ಶಿಫಾರಸಿನಿಂದ ಕೇಂದ್ರ ಸರ್ಕಾರಿ ನೌಕರರ ಒಟ್ಟು ವೇತನವು ಶೇ. 30-34ರಷ್ಟು ಏರಿಕೆ ಆಗಬಹುದು. 2016ರಲ್ಲಿ ಚಾಲನೆಗೆ ಬಂದ ಏಳನೇ ವೇತನ ಆಯೋಗದ ಶಿಫಾರಸುಗಳು 2025ರ ಜನವರಿವರೆಗೆ ಚಾಲನೆಯಲ್ಲಿ ಇರಲಿವೆ.

ನವದೆಹಲಿ, ಜುಲೈ 10: ಸರ್ಕಾರಿ ಉದ್ಯೋಗಿಗಳು ಸದ್ಯದಲ್ಲೇ ಖುಷಿಯ ಸುದ್ದಿ ನಿರೀಕ್ಷಿಸಬಹುದು. ಆ್ಯಂಬಿಟ್ ಕ್ಯಾಪಿಟಲ್ ಎನ್ನುವ ಬ್ರೋಕರೇಜ್ ಕಂಪನಿ ಪ್ರಕಾರ ಭಾರತದಲ್ಲಿ 8ನೇ ವೇತನ ಆಯೋಗದ (8th Central Pay Commission) ಜಾರಿಯಿಂದ ಸಂಬಳ ಭರ್ಜರಿಯಾಗಿ ಏರಿಕೆ ಆಗಬಹುದು. ಹೊಸ ವೇತನ ಆಯೋಗ ಮಾಡುವ ಶಿಫಾರಸುಗಳು 2026ರ ಜನವರಿಯಿಂದ ಜಾರಿಗೆ ಬರಬಹುದು. ಈ ಆಯೋಗವು ಫಿಟ್ಮೆಂಟ್ ಫ್ಯಾಕ್ಟರ್ (Fitment Factor) ಅನ್ನು ಏರಿಸುವ ಸಾಧ್ಯತೆ ದಟ್ಟವಾಗಿದೆ. ಈ ಎಫ್ಟಿ ದರವು 1.83ರಿಂದ 2.46ರ ಶ್ರೇಣಿಯಲ್ಲಿ ಇರಬಹುದು ಎಂದು ವರದಿಗಳು ಹೇಳುತ್ತಿವೆ. ನೌಕರರ ಸಂಬಳ (salary) ಶೇ. 30-34ರಷ್ಟು ಏರಬಹುದು ಎನ್ನಲಾಗುತ್ತಿದೆ.
ಹಿಂದೆ ಬಂದ ಕೆಲ ವರದಿಗಳಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ನಲ್ಲಿ ಸ್ವಲ್ಪ ಏರಿಕೆ ಆದರೂ ಸಂಬಳದಲ್ಲಿ ಗಣನೀಯ ಹೆಚ್ಚಳ ಆಗಬಹುದು ಎನ್ನಲಾಗಿತ್ತು. ಆದರೆ, ಆ್ಯಂಬಿಟ್ ಕ್ಯಾಪಿಟಲ್ನ ವರದಿ ಪ್ರಕಾರ ಬಹಳ ಸಂಬಳ ಹೆಚ್ಚಳ ನಿರೀಕ್ಷಿಸಲು ಆಗುವುದಿಲ್ಲ.
ಇದನ್ನೂ ಓದಿ: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್ಐಸಿ ಪ್ಲಾನ್ಗಳಿವು…
‘ಏಳನೇ ವೇತನ ಆಯೋಗ ಜಾರಿಗೆ ಬಂದಾಗ ಸಂಬಳ ಶೇ. 14ರಷ್ಟು ಮಾತ್ರವೇ ಏರಿಕೆ ಆಗಿದ್ದು. ಎಂಟನೇ ವೇತನ ಆಯೋಗದಿಂದ ವೇತನ ಶೇ. 30-34ರಷ್ಟು ಏರಿಕೆ ಆಗಬಹುದು’ ಎಂದು ಈ ವರದಿಯು ತಿಳಿಸಿದೆ.
7ನೇ ಆಯೋಗಕ್ಕೆ ಹೋಲಿಸಿದರೆ 8ನೇ ಆಯೋಗದಿಂದ ಹೆಚ್ಚಿನದನ್ನು ನಿರೀಕ್ಷಿಸಬಹುದು. 7ನೇ ವೇತನ ಆಯೋಗ 2016ರಲ್ಲಿ ರಚನೆಯಾಗಿತ್ತು. ಅದರ ಶಿಫಾರಸುಗಳು 2025ರ ಡಿಸೆಂಬರ್ವರೆಗೂ ಇರುತ್ತದೆ. 2025ರ ಜನವರಿಯಲ್ಲಿ 8ನೇ ವೇತನ ಆಯೋಗದ ರಚನೆಯಾಗಿದೆ. ಇದು ಮಾಡುವ ಶಿಫಾರಸುಗಳು ಮುಂದಿನ 10 ವರ್ಷ ಚಾಲ್ತಿಗೆ ಬರುತ್ತವೆ.
ಇದನ್ನೂ ಓದಿ: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ
ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ
ಸರ್ಕಾರಿ ನೌಕರರ ಸಂಬಳದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಮಹತ್ವದ ಪಾತ್ರ ವಹಿಸುತ್ತದೆ. ಮೂಲ ವೇತನದ ಮೊತ್ತವನ್ನು ಫಿಟ್ಮೆಂಟ್ ಫ್ಯಾಕ್ಟರ್ನಿಂದ ಗುಣಕ ಮಾಡುವ ಮೂಲಕ ಪರಿಷ್ಕೃತ ವೇತನವನ್ನು ನಿರ್ಧರಿಸಲಾಗುತ್ತದೆ. ಏಳನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಆಗಿ 2.57 ಅನ್ನು ನಿಗದಿ ಮಾಡಲಾಗಿತ್ತು. ಇದರಿಂದ ಕನಿಷ್ಠ ಮೂಲ ವೇತನವು 7,000 ರೂನಿಂದ ಶೇ. 18,000 ರೂಗೆ ಹೆಚ್ಚಳ ಆಗಿತ್ತು. ಮೂಲ ವೇತನ ಹೆಚ್ಚಳ ಆದರೂ ಡಿಎ ಮತ್ತು ಡಿಆರ್ ಶೂನ್ಯಕ್ಕೆ ತರಲಾಗಿತ್ತು. ಒಟ್ಟಾರೆ ಸಂಬಳ ಹೆಚ್ಚಳ ಶೇ. 14.3 ಮಾತ್ರವೇ ಆಗಿದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




