ಮೊನ್ನೆಯವರೆಗೂ ಇಂಗ್ಲೆಂಡ್ ಪ್ರಧಾನಿಯಾಗಿದ್ದ ರಿಷಿ ಸುನಕ್ಗೆ ಇನ್ಮುಂದೆ ಕಾಲೇಜಿನಲ್ಲಿ ಕೆಲಸ
ಯುಕೆ ಪ್ರಧಾನಮಂತ್ರಿಯಾಗಿದ್ದ ರಿಷಿ ಸುನಕ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದು, ಆಕ್ಸ್‌ಫರ್ಡ್, ಸ್ಟ್ಯಾನ್‌ಫೋರ್ಡ್‌ನಲ್ಲಿ ಹೊಸ ಹುದ್ದೆಗಳನ್ನು ವಹಿಸಿಕೊಳ್ಳಲಿದ್ದಾರೆ. ರಿಷಿ ಸುನಕ್ ಆಕ್ಸ್‌ಫರ್ಡ್‌ನ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್ ಮತ್ತು ಸ್ಟ್ಯಾನ್‌ಫೋರ್ಡ್‌ನ ಹೂವರ್ ಇನ್‌ಸ್ಟಿಟ್ಯೂಷನ್‌ಗೆ ಸೇರಲಿದ್ದಾರೆ. ಅವರು ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಯನ್ನು ಅವರು ನಿರಾಕರಿಸಿದ್ದರು. ಅದರ ಬೆನ್ನಲ್ಲೇ ತಾವು 2 ವಿಶ್ವವಿದ್ಯಾಲಯಗಳಲ್ಲಿ ಹೊಸ ಹುದ್ದೆ ವಹಿಸಿಕೊಳ್ಳುವ ಬಗ್ಗೆ ಅವರು ಘೋಷಿಸಿದ್ದಾರೆ.
ನವದೆಹಲಿ: ಯುಕೆಯ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಆಕ್ಸ್‌ಫರ್ಡ್‌ನ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್‌ಸ್ಟಿಟ್ಯೂಷನ್‌ಗೆ ಸೇರುವ ಮೂಲಕ ಹೊಸ ವೃತ್ತಿಜೀವನದ ಮಹತ್ವದ ಹೆಜ್ಜೆಗಳನ್ನು ಇಡುವುದಾಗಿ ಘೋಷಿಸಿದ್ದಾರೆ. ಮಾಜಿ ಪ್ರಧಾನಿ ರಿಷಿ ಸುನಕ್ ತಾವು ಈ ಹಿಂದೆ ಅಧ್ಯಯನ ಮಾಡಿದ್ದ ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳ ವಿಶಿಷ್ಟ ಫೆಲೋಶಿಪ್ ಕಾರ್ಯಕ್ರಮಗಳ ಭಾಗವಾಗಿ ಭಾಗವಹಿಸಲಿದ್ದಾರೆ. ಇದು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅವರ ಹೊಸ ಅಧ್ಯಾಯವನ್ನು ಸೂಚಿಸುತ್ತದೆ.
ರಿಷಿ ಸುನಕ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್ ಅನ್ನು ಅದರ ವರ್ಲ್ಡ್ ಲೀಡರ್ಸ್ ಸರ್ಕಲ್‌ನ ಸದಸ್ಯರಾಗಿ ಸೇರುತ್ತಾರೆ. ಅವರು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ನ ಹೂವರ್ ಇನ್‌ಸ್ಟಿಟ್ಯೂಷನ್‌ನಲ್ಲಿ ಡಿಸ್ಟಿಂಗ್ವಿಶ್ಡ್ ವಿಸಿಟಿಂಗ್ ಫೆಲೋ ಆಗಲಿದ್ದಾರೆ. ಎರಡೂ ಹುದ್ದೆಗಳನ್ನು ನಿರ್ವಹಿಸಿದರೂ ರಿಷಿ ಸುನಕ್ ಸಂಬಳವನ್ನು ಪಡೆಯುವುದಿಲ್ಲ. ಸ್ಟ್ಯಾನ್‌ಫೋರ್ಡ್ ಅವರ ವೆಚ್ಚಗಳನ್ನು ಭರಿಸುತ್ತದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜತೆ ಮೋದಿ ಮಾತುಕತೆ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ಇಸ್ರೇಲ್-ಹಮಾಸ್ ಸಂಘರ್ಷ ಕುರಿತು ಚರ್ಚೆ
View this post on Instagram
ಈ ಮೂಲಕ ರಿಷಿ ಸುನಕ್ ಯುಕೆ ಮತ್ತು ಯುಎಸ್‌ನಲ್ಲಿ ಎರಡು ಹೊಸ ಹುದ್ದೆಗಳನ್ನು ವಹಿಸಿಕೊಳ್ಳುವ ಮೂಲಕ ತಮ್ಮ ಅಲ್ಮಾ ಮೇಟರ್‌ಗೆ ಮರಳಲಿದ್ದಾರೆ. ಯುಕೆ ಮಾಜಿ ಪ್ರಧಾನಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್‌ಗೆ ಅದರ ವರ್ಲ್ಡ್ ಲೀಡರ್ಸ್ ಸರ್ಕಲ್‌ನ ಭಾಗವಾಗಿ ಸೇರುವುದಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿರುವ ಚಿಂತಕರ ಚಾವಡಿ ಹೂವರ್ ಇನ್‌ಸ್ಟಿಟ್ಯೂಷನ್‌ನಲ್ಲಿ ಸುನಕ್ ವಿಸಿಟಿಂಗ್ ಫೆಲೋಶಿಪ್ ಅನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ