Bank Holidays in February: ಫೆಬ್ರವರಿ ತಿಂಗಳಿಗೆ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ

| Updated By: Srinivas Mata

Updated on: Feb 03, 2022 | 11:48 AM

2022ನೇ ಇಸವಿಯ ಫೆಬ್ರವರಿ ತಿಂಗಳ ರಜಾ ದಿನಗಳ ಪಟ್ಟಿ ಇಲ್ಲಿದೆ. ವಿವಿಧ ರಾಜ್ಯಗಳಲ್ಲಿ ಯಾವ ದಿನ ರಜಾ ಇದೆ ಹಾಗೂ ವಾರಾಂತ್ಯದ ರಜಾ ದಿನಗಳ ಮಾಹಿತಿ ಸಹ ಇದರಲ್ಲಿದೆ.

Bank Holidays in February: ಫೆಬ್ರವರಿ ತಿಂಗಳಿಗೆ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಎಲ್ಲ ವಲಯಗಳಂತೆಯೇ ಬ್ಯಾಂಕಿಂಗ್​ ವಲಯಕ್ಕೆ ನಿರ್ದಿಷ್ಟ ಸಂಖ್ಯೆಯ ರಜಾ ದಿನಗಳು ವಿವಿಧ ಸಂದರ್ಭಗಳಿಗೆ ಇರುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಹಾಗೂ ಖಾಸಗಿ ವಲಯದ ಬ್ಯಾಂಕ್​ಗಳು 12 ದಿನಗಳ ಕಾಲ ರಜಾ ಇರುತ್ತದೆ. ಇದು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಪಡಿಸಿರುವ ರಜಾ ಪಟ್ಟಿಯಲ್ಲಿನ ಮಾಹಿತಿ. ಇನ್ನು ಈಗಾಗಲೇ ಆರ್​ಬಿಐನಿಂದ (Reserve Bank Of India) ವಾರ್ಷಿಕ ಪಟ್ಟಿ ಬಿಡುಗಡೆ ಆಗಿದೆ. ರಜಾ ದಿನಗಳ ಪಟ್ಟಿಯನ್ನು ಆ ವಾರ್ಷಿಕ ಪಟ್ಟಿಯ ಆಧಾರದ ಮೇಲೇ ಸಿದ್ಧಪಡಿಸಲಾಗಿದೆ. ಆರ್​ಬಿಐ ಪಟ್ಟಿ ಪ್ರಕಾರವಾಗಿ, ರಾಜ್ಯವಾರು ಆರು ರಜಾ ದಿನಗಳು 2022ರ ಫೆಬ್ರವರಿಯಲ್ಲಿ ಇದೆ. ಇದರಲ್ಲಿ ಫೆಬ್ರವರಿಯ 5ನೇ ದಿನ ವಸಂತ ಪಂಚಮಿ ಅಂಗವಾಗಿ ಕೆಲವು ರಾಜ್ಯಗಳಲ್ಲಿ ರಜಾ ಇರಲಿದೆ. ಆರು ದಿನಗಳು ವಾರಾಂತ್ಯದ ರಜಾ ದಿನಗಳು. ರಾಷ್ಟ್ರ ಮಟ್ಟದಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಬ್ಯಾಂಕ್​ಗೆ ಸಂಬಂಧಿಸಿದ ಕೆಲಸಗಳು ಇದ್ದಲ್ಲಿ ಹತ್ತಿರದ ಬ್ಯಾಂಕ್​ ಶಾಖೆಗಳಲ್ಲಿ ಫೆಬ್ರವರಿ ತಿಂಗಳ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳಿ. ಅದರ ಪ್ರಕಾರವಾಗಿ ಕೆಲಸಗಳನ್ನು ಮಾಡಿಕೊಳ್ಳಬಹುದು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿರುವ ರಜಾ ದಿನಗಳ ಪೈಕಿ ಬಹುತೇಕ ಆಯಾ ರಾಜ್ಯವಾರು ವಿಂಗಡಣೆ ಆಗಿದೆ. ಇದರರ್ಥ ಏನೆಂದರೆ ಎಲ್ಲ ಕಡೆಯೂ ಒಂದೇ ರೀತಿಯ ರಜಾ ದಿನ ಇರುವುದಿಲ್ಲ. ಆರ್​ಬಿಐ ರಜಾ ದಿನಗಳ ಪಟ್ಟಿಯನ್ನು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ನೆಗೋಷಿಯೆಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿ ರಜೆ, ನೆಗೋಷಿಯೆಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲ್​ಮೆಂಟ್ ರಜೆ ಹಾಗೂ ಬ್ಯಾಂಕ್​ಗಳ ಲೆಕ್ಕ ಮುಕ್ತಾಯದ ರಜೆ ಹೀಗೆ ವರ್ಗೀಕರಿಸಲಾಗಿದೆ. ಈ ಅಧಿಸೂಚಿತ ರಜಾ ದಿನಗಳಲ್ಲಿ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶೀ ಬ್ಯಾಂಕ್​ಗಳು, ಕೋ ಆಪರೇಟಿವ್ ಬ್ಯಾಂಕ್​ಗಳು ಮತ್ತು ಪ್ರಾದೇಶಿಕ ಬ್ಯಾಂಕ್​ಗಳು ಒಳಗೊಂಡಂತೆ ಎಲ್ಲ ಬ್ಯಾಂಕ್​ಗಳು ಮುಚ್ಚಿರುತ್ತವೆ.

ಆರ್​ಬಿಐ ಪಟ್ಟಿ ಪ್ರಕಾರ 2022ರ ಫೆಬ್ರವರಿ ತಿಂಗಳ ರಜಾ ದಿನಗಳು (ಫೆಬ್ರವರಿ 1ರಿಂದ ಶುರುವಾಗಿ)

ಫೆಬ್ರವರಿ 2: ಸೋನಮ್ ಲ್ಹೊಚರ್- ಗ್ಯಾಂಗ್ಟಕ್

ಫೆ. 5ನೇ ತಾರೀಕು: ಸರಸ್ವತಿ ಪೂಜೆ/ಶ್ರೀ ಪಂಚಮಿ/ಶ್ರೀ ಪಂಚಮಿ ವಸಂತ ಪಂಚಮಿ- ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾ

ಫೆ. 15: ಮೊಹ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಗೈ-ನಿ -ಇಂಫಾಲ, ಕಾನ್ಪುರ್, ಲಖನೌ

ಫೆ. 16: ಗುರು ರವಿದಾಸ್ ಜಯಂತಿ- ಚಂಡೀಗಢ

ಫೆ. 18: ಡೋಲ್​ಜಾತ್ರಾ- ಕೋಲ್ಕತ್ತಾ

ಫೆ. 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ: ಬೇಲಾಪುರ್, ಮುಂಬೈ, ನಾಗ್ಪುರ್

ಈ ಮೇಲ್ಕಂಡ ರಜಾ ದಿನಗಳು ಆಯಾ ರಾಜ್ಯಗಳಿಗೆ ಅನ್ವಯ ಆಗುವಂಥದ್ದು. ಬ್ಯಾಂಕ್​ಗಳು ವಾರಾಂತ್ಯಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಇವು ದೇಶಾದ್ಯಂತ ಒಂದೇ ಆಗಿರುತ್ತದೆ. ಅವುಗಳ ಮಾಹಿತಿ ಇಲ್ಲಿದೆ:

ಫೆ. 6- ಭಾನುವಾರ

ಫೆ. 12- ತಿಂಗಳ ಎರಡನೇ ಶನಿವಾರ

ಫೆ. 13- ಭಾನುವಾರ

ಫೆ. 20- ಭಾನುವಾರ

ಫೆ. 26- ತಿಂಗಳ ನಾಲ್ಕನೇ ಶನಿವಾರ

ಫೆಬ್ರವರಿ 27- ಭಾನುವಾರ

ಇದನ್ನೂ ಓದಿ: Tokenisation: ಟೋಕನೈಸೇಷನ್ ಗಡುವನ್ನು ಜೂನ್ 30, 2022ಕ್ಕೆ ಮುಂದೂಡಿದ ಆರ್​ಬಿಐ