Bank Holidays: 2022ರ ಜನವರಿಯಲ್ಲಿ ಬ್ಯಾಂಕ್​ಗಳಿಗೆ 16 ದಿನ ರಜಾ; ಯಾವ್ಯಾವ ದಿನ ಎಂಬ ಮಾಹಿತಿ ಇಲ್ಲಿದೆ

Bank Holidays: 2022ರ ಜನವರಿಯಲ್ಲಿ ಬ್ಯಾಂಕ್​ಗಳಿಗೆ 16 ದಿನ ರಜಾ; ಯಾವ್ಯಾವ ದಿನ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ

2022ರ ಜನವರಿ ತಿಂಗಳಲ್ಲಿ ಬ್ಯಾಂಕ್​ಗಳಿಗೆ 16 ದಿನ ರಜಾ ಇರುತ್ತದೆ. ಯಾವ್ಯಾವ ದಿನಗಳು ಹಾಗೂ ಯಾವ ಸಂದರ್ಭ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Dec 24, 2021 | 8:42 PM

2022ನೇ ಇಸವಿಯ ಜನವರಿ ತಿಂಗಳಲ್ಲಿ ಒಟ್ಟು ಹದಿನಾರು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಅರ್ಥಾತ್ ಬ್ಯಾಂಕ್​ಗಳಿಗೆ ರಜಾ ಇರುತ್ತವೆ. ಭಾರತದಲ್ಲಿನ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜಾ ಇರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜನವರಿ 2022ರಲ್ಲಿ ಆಫ್‌ಲೈನ್ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ರಜಾ ಇರುವ ದಿನಗಳನ್ನು ಗುರುತಿಸಿದೆ. ಈ ದಿನಗಳಲ್ಲಿ ಆನ್‌ಲೈನ್ ವಹಿವಾಟು ವಿಧಾನವು ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕ್ ರಜಾ ದಿನಗಳು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿರುತ್ತವೆ ಎಂಬುದನ್ನು ಗಮನಿಸಬೇಕು. ಕೆಳಗೆ ಗುರುತಿಸಲಾದ ರಜಾ ದಿನಗಳು ಎಲ್ಲ ಬ್ಯಾಂಕಿಂಗ್ ಕಂಪೆನಿಗಳು ಅನ್ವಯಿಸದೇ ಇರಬಹುದು. ಬ್ಯಾಂಕಿಂಗ್ ರಜಾ ದಿನಗಳು ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.

2022ರ ಜನವರಿಯಲ್ಲಿ ಬ್ಯಾಂಕ್‌ಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಲ್ಲಿದೆ: 1 ಜನವರಿ: ಹೊಸ ವರ್ಷದ ದಿನ (ದೇಶದಾದ್ಯಂತ) 4 ಜನವರಿ: ಲೋಸೂಂಗ್ (ಸಿಕ್ಕಿಂ) 11 ಜನವರಿ: ಮಿಷನರಿ ಡೇ (ಮಿಜೋರಾಂ) ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನ 14 ಜನವರಿ: ಮಕರ ಸಂಕ್ರಾಂತಿ/ಪೊಂಗಲ್ (ಹಲವು ರಾಜ್ಯಗಳು) 15 ಜನವರಿ: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಾಘ ಸಂಕ್ರಾಂತಿ/ಸಂಕ್ರಾಂತಿ/ಪೊಂಗಲ್/ತಿರುವಳ್ಳುವರ್ ದಿನ (ಆಂಧ್ರ ಪ್ರದೇಶ, ಪುದುಚೇರಿ, ತಮಿಳುನಾಡು) 18 ಜನವರಿ: ಥೈ ಪೂಸಂ (ಚೆನ್ನೈ) 26 ಜನವರಿ: ಗಣರಾಜ್ಯೋತ್ಸವ (ದೇಶದಾದ್ಯಂತ) 31 ಜನವರಿ: ಮಿ-ಡ್ಯಾಮ್-ಮಿ-ಫೈ (ಅಸ್ಸಾಂ)

ಈ ಕೆಳಕಂಡ ದಿನಗಳು ವಾರಾಂತ್ಯ ಕಾರಣಕ್ಕೆ ಬ್ಯಾಂಕ್​ಗಳು ಮುಚ್ಚಿರುತ್ತವೆ 2 ಜನವರಿ: ಭಾನುವಾರ 8 ಜನವರಿ: ಎರಡನೇ ಶನಿವಾರ 9 ಜನವರಿ: ಭಾನುವಾರ 16 ಜನವರಿ: ಭಾನುವಾರ 22 ಜನವರಿ: ನಾಲ್ಕನೇ ಶನಿವಾರ 23 ಜನವರಿ: ಭಾನುವಾರ 30 ಜನವರಿ: ಭಾನುವಾರ

ಇದನ್ನೂ ಓದಿ: ATM Withdrawal: ಹೊಸ ವರ್ಷಕ್ಕೆ ಬ್ಯಾಂಕ್​ ಗ್ರಾಹಕರಿಗೆ ಶುಲ್ಕ ಏರಿಕೆ ಹೊರೆ; ಎಟಿಎಂ ವಿಥ್​ಡ್ರಾ ಆಗಲಿದೆ ದುಬಾರಿ

Follow us on

Related Stories

Most Read Stories

Click on your DTH Provider to Add TV9 Kannada