Closing bell: ಏರಿಳಿತದ ವಹಿವಾಟಿನಲ್ಲಿ ಮೂರು ದಿನದ ಏರಿಕೆ ಹಾದಿ ತುಂಡರಿಸಿದ ಷೇರು ಮಾರ್ಕೆಟ್
ಏರಿಳಿತದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್, ನಿಫ್ಟಿ ಡಿಸೆಂಬರ್ 24ನೇ ತಾರೀಕಿನ ಶುಕ್ರವಾರದಂದು ಕುಸಿತವನ್ನು ದಾಖಲಿಸಿದೆ.
ಮೂರು ದಿನದಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 24ನೇ ತಾರೀಕಿನ ಶುಕ್ರವಾರದಂದು ಏರಿಳಿತ ವಹಿವಾಟಿನಲ್ಲಿ ದಿನದ ಕೊನೆಗೆ ಇಳಿಕೆ ದಾಖಲಿಸಿವೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 190.97 ಪಾಯಿಂಟ್ಸ್ ಅಥವಾ ಶೇ 0.33ರಷ್ಟು ಇಳಿಕೆ ಕಂಡು, 57,124.31 ಪಾಯಿಂಟ್ಸ್ನೊಂದಿಗೆ ವ್ಯವಹಾರವನ್ನು ಚುಕ್ತಾ ಮಾಡಿದೆ. ಇನ್ನು ನಿಫ್ಟಿ ಸೂಚ್ಯಂಕವು ಶೇ 0.40ರಷ್ಟು ಕುಸಿತ ಕಂಡು, 17,003.45 ಪಾಯಿಂಟ್ಸ್ನೊಂದಿಗೆ ವಹಿವಾಟು ಕೊನೆಗೊಳಿಸಿದೆ. ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳನ್ನು ಹೊರತುಪಡಿಸಿದಂತೆ ಇತರ ಎಲ್ಲ ವಲಯಗಳೂ ಕುಸಿತ ಕಂಡವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 0.5ರಿಂದ ಶೇ 1ರಷ್ಟು ಕುಸಿತ ಕಂಡವು.
ಇಂದಿನ ಷೇರು ಮಾರುಕಟ್ಟೆ ವಹಿವಾಟು ಏರಿಳಿತಗಳಿಂದ ಕೂಡಿತ್ತು. ಈಚೆಗೆ ಸತತ ಏರಿಕೆ ಕಂಡಿದ್ದ ಸೂಚ್ಯಂಕಗಳಲ್ಲಿ ಹೂಡಿಕೆದಾರರು ಲಾಭವನ್ನು ತೆಗೆದುಕೊಂಡಿದ್ದರಿಂದ ಹೆಚ್ಚಳದಲ್ಲಿ ಮಾರುಕಟ್ಟೆ ಇಳಿಕೆ ಕಾಣುವಂತಾಯಿತು. ಮಾಹಿತಿ ತಂತ್ರಜ್ಞಾನ ಹಾಗೂ ಎಫ್ಎಂಸಿಜಿ ವಲಯದಲ್ಲಿ ಖರೀದಿ ಕಂಡುಬಂದಿದ್ದರಿಂದ ಇಳಿಕೆಯು ಸ್ವಲ್ಪ ಮಟ್ಟಿಗೆ ಕಡಿಮೆ ಆಯಿತು. ಕೊವಿಡ್ ಪರಿಸ್ಥಿತಿ ಚೇತರಿಸಿಕೊಳ್ಳಬಹುದು ಹಾಗೂ ಸಕಾರಾತ್ಮಕ ಸುದ್ದಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಸದ್ಯಕ್ಕೆ ಷೇರು ಮಾರ್ಕೆಟ್ ಇದೆ. ಟ್ರೆಂಡ್ ಮಿಶ್ರವಾಗಿದ್ದು, ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಟ್ರೇಡರ್ಗಳು ಮಾಹಿತಿ ತಂತ್ರಜ್ಞಾನ, ಆಯ್ದ ಎಫ್ಎಂಸಿಜಿ, ಫಾರ್ಮಾದಲ್ಲಿ ಖರೀದಿಗೆ ನೋಡಬೇಕು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಎಚ್ಸಿಎಲ್ ಟೆಕ್ ಶೇ 3.08 ಟೆಕ್ ಮಹೀಂದ್ರಾ ಶೇ 2.38 ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ 2.02 ವಿಪ್ರೋ ಶೇ 0.56 ಏಷ್ಯನ್ ಪೇಂಟ್ಸ್ ಶೇ 0.52
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಗ್ರಾಸಿಮ್ ಶೇ -2.93 ಎನ್ಟಿಪಿಸಿ ಶೇ -2.65 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.72 ಐಷರ್ ಮೋಟಾರ್ಸ್ ಶೇ -1.71 ಐಒಸಿ ಶೇ -1.69
ಇದನ್ನೂ ಓದಿ: Data Patterns India: ಸಾರ್ವಜನಿಕರಿಗೆ 585 ರೂ.ಗೆ ವಿತರಿಸಿದ್ದ ಡೇಟಾ ಪ್ಯಾಟರ್ನ್ಸ್ ಷೇರು 864 ರೂ.ಗೆ ಲಿಸ್ಟಿಂಗ್