AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ

Youngest Self-made Billionaire: ಅಮೆರಿಕದ 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್ ಅವರು ವಿಶ್ವದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಎನಿಸಿದ್ದಾರೆ. ಸ್ಕೇಲ್ ಎಐ ಕಂಪನಿಯ ಸಹ-ಸಂಸ್ಥಾಪಕರಾದ ವ್ಯಾಂಗ್ ಕಾಲೇಜು ಓದನ್ನು ಅರ್ಧಕ್ಕೆ ಬಿಟ್ಟವರು...

Alexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ
ಅಲೆಕ್ಸಾಂಡರ್ ವ್ಯಾಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 29, 2023 | 3:06 PM

Share

ಯಾವುದೇ ಬ್ಯುಸಿನೆಸ್ ಬ್ಯಾಕ್​ಗ್ರೌಂಡ್ ಇಲ್ಲದೇ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದು ಬಹಳ ಕಷ್ಟ. ಇಂಥ ಸ್ವಯಂ ನಿರ್ಮಾಣದ ಉದ್ಯಮಿಗಳು ಈಗ ಬಹಳಷ್ಟು ಇದ್ದಾರೆ. ಅಂಥವರಲ್ಲಿ ಸ್ಕೇಲ್ ಎಐ ಸಂಸ್ಥೆಯ ಸಹಸಂಸ್ಥಾಪಕ ಅಲೆಕ್ಸಾಂಡರ್ ವ್ಯಾಂಗ್ (Alexander Wang) ಒಬ್ಬರು. ಕೇವಲ 26 ವರ್ಷದ ಇವರು ವಿಶ್ವದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಎನಿಸಿದ್ದಾರೆ. ಅಮೆರಿಕದ ಈ ಯುವಕ ಯಾವುದೋ ಲಕ್ ಮೇಲೆ ದಿಢೀರ್ ಶ್ರೀಮಂತನಾದುದಲ್ಲ. ಕಾಲೇಜಿಗೆ ಹೋಗಿ ಒಂದು ವರ್ಷಕ್ಕೆ ಬಿಟ್ಟು ಸ್ವಂತ ಕಂಪನಿ ಕಟ್ಟಿ ಇವತ್ತು ಬಿಲಿಯನೇರ್ ಆಗಿದ್ದಾರೆ ವ್ಯಾಂಗ್.

ಕಾಲೇಜಿಗೆ ಸೇರುವ ಮುನ್ನವೇ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದ ವ್ಯಾಂಗ್

ಅಲೆಕ್ಷಾಂಡರ್ ವ್ಯಾಂಗ್ ಚಿಕ್ಕಂದಿನಿಂದಲೂ ಅಗಾಧ ಪ್ರತಿಭೆ ಹೊಂದಿದ್ದವರು. ಇವರ ತಂದೆ ಮತ್ತು ತಾಯಿ ಇಬ್ಬರೂ ವಿಜ್ಞಾನಿಗಳೇ ಆಗಿದ್ದು, ಅಮೆರಿಕದ ಮಿಲಿಟರಿ ಪ್ರಾಜೆಕ್ಟ್​ಗಳಿಗೆ ಕೆಲಸ ಮಾಡುತ್ತಿದ್ದವರು. ಇವರು ಶಾಲೆ ಮುಗಿಸಿ ಪ್ರತಿಷ್ಠಿತ ಎಂಐಟಿ ಕಾಲೇಜಿಗೆ ಸೇರುವ ಮುಂಚಿನ ದಿನಗಳವು. ಇವರ ಸಹಪಾಠಿಗಳು ಕಾಲೇಜು ಸೇರಲು ಅಣಿಗೊಳ್ಳುತ್ತಿದ್ದ ಕಾಲದಲ್ಲಿ ಅಲೆಕ್ಷಾಂಡರ್ ವ್ಯಾಂಗ್ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅದು 2014. ಅದೇ ವರ್ಷ ಅವರು ಕ್ವೋರಾ ಸಂಸ್ಥೆಗೆ ಕೆಲಸಕ್ಕೆ ಸೇರಿದರು.

ಇದನ್ನೂ ಓದಿNikhil Kamath: ಶಾಲೆಯೆಂದರೆ ತಿರಸ್ಕಾರ, ಟೀಚರ್​ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ ಸಂಸ್ಥಾಪಕ

ಅದಾದ ಬಳಿಕ ಅಲೆಕ್ಸಾಂಡರ್ ವ್ಯಾಂಗ್ ಅವರು ಎಂಐಟಿ ಸೇರಿದರು. ಅದರ ಜೊತೆಗೆ ಅಲ್ಗಾರಿದಂ ಡೆವಲಪರ್ ಕೆಲಸ ಕೂಡ ಮಾಡುತ್ತಿದ್ದರು. ಕೋರಾದಲ್ಲಿ ಕೆಲಸ ಮಾಡುತ್ತಿರುವಾಗಲೇ ಲೂಸಿ ಜಿಯೊ ಎಂಬುವರು ಪರಿಚಯವಾಗಿದ್ದರು. ಇಬ್ಬರೂ ಸೇರಿ ಸ್ಕೇಲ್ ಎಐ ಎಂಬ ಕಂಪನಿ ಆರಂಭಿಸಿದರು. ಆಗ ವ್ಯಾಂಗ್ ಎಂಐಟಿಯಲ್ಲಿ ಮೊದಲ ವರ್ಷ ಮುಗಿಸಿದ್ದರು. ಕಾಲೇಜಿಗೆ ಗುಡ್​ಬೈ ಹೇಳಿ ಸ್ಕೇಲ್ ಎಐ ಸ್ಥಾಪಿಸಿದರು. ಅಮೆರಿಕದ ಫಂಡಿಂಗ್ ಸಂಸ್ಥೆ ವೈ ಕಾಂಬಿನೇಟರ್​ನಿಂದ ಬಂಡವಾಳವೂ ಸಿಕ್ಕಿತು.

ಕುತೂಹಲ ಎಂದರೆ, ಅಲೆಕ್ಸಾಂಡರ್ ವ್ಯಾಂಗ್ ಸ್ಕೇಲ್ ಎಐ ಶುರು ಮಾಡಿದ್ದು ಅವರ ಅಪ್ಪ ಅಮ್ಮನಿಗೆ ಗೊತ್ತಾಯಿತು. ಆದರೆ, ಇದು ಕೇವಲ ಬೇಸಿಗೆಯೊಳಗೆ ಮಾಡುವ ಪ್ರಾಜೆಕ್ಟ್ ಎಂದು ವ್ಯಾಂಗ್ ಸುಳ್ಳು ಹೇಳಿದ್ದರು. ಆದರೆ, ವ್ಯಾಂಗ್ ಮತ್ತೆ ಶಾಲೆ ಮರಳಲಿಲ್ಲ.

ಇದನ್ನೂ ಓದಿArjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?

ಅಲೆಕ್ಸಾಂಡರ್ ವ್ಯಾಂಗ್ ಮತ್ತು ಲೂಸಿ ಜಿಯೊ ಸ್ಥಾಪಿಸಿದ ಸ್ಕೇಲ್ ಎಐ ಕಂಪನಿಗೆ ಬಂಡವಾಳ ಹರಿವು ಹೆಚ್ ಆಯಿತು. ಆದಾಯವೂ ಬರತೊಡಗಿತು. ಸ್ಕೆಲ್ ಎಐ ಮೌಲ್ಯ 7.3 ಬಿಲಿಯನ್ ಡಾಲರ್​ಗೆ ಏರಿದೆ. ಫೋರ್ಬ್ಸ್ ಪ್ರಕಾರ ವ್ಯಾಂಗ್ ಅವರ ನಿವ್ವಳ ಆಸ್ತಿ ಮೌಲ್ಯ 1 ಬಿಲಿಯನ್ ಡಾಲರ್ ಇದೆ. ಇದರೊಂದಿಗೆ ಅವರು ಬಿಲಿಯನೇರ್ ಎನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?