Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Council Meet: ಡಿಸೆಂಬರ್ 31ರ ಜಿಎಸ್​ಟಿ ಸಮಿತಿ ಸಭೆಯಲ್ಲಿನ ಪ್ರಮುಖ ನಿರೀಕ್ಷೆ, ಬೇಡಿಕೆಗಳೇನು

ಡಿಸೆಂಬರ್ 31ನೇ ತಾರೀಕಿನ ಶುಕ್ರವಾರ ದೆಹಲಿಯಲ್ಲಿ 46ನೇ ಜಿಎಸ್​ಟಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯ ಬಗ್ಗೆ ಇರುವ ನಿರೀಕ್ಷೆ, ಶಿಫಾರಸು ಮತ್ತಿತರ ವಿವರಗಳು ಇಲ್ಲಿವೆ.

GST Council Meet: ಡಿಸೆಂಬರ್ 31ರ ಜಿಎಸ್​ಟಿ ಸಮಿತಿ ಸಭೆಯಲ್ಲಿನ ಪ್ರಮುಖ ನಿರೀಕ್ಷೆ, ಬೇಡಿಕೆಗಳೇನು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 31, 2021 | 11:25 AM

ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಸಮಿತಿ ಸಭೆಯು ಡಿಸೆಂಬರ್ 31ನೇ ತಾರೀಕಿನ ಶುಕ್ರವಾರ ದೆಹಲಿಯಲ್ಲಿ ನಿಗದಿ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದರಗಳ ಬಗ್ಗೆ ರಾಜ್ಯ ಸಚಿವರ ಸಮಿತಿಯು ಮಾಡಿದ ಶಿಫಾರಸುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂದ ಹಾಗೆ ಇದು ಭೌತಿಕವಾದ ಸಭೆ ಆಗಿದ್ದು, ಕೆಲವು ಸರಕುಗಳ ಮೇಲಿನ ಸುಂಕದ ರಚನೆಯ ಬಗ್ಗೆ ಕೂಡ ಮಾತುಕತೆ ನಡೆಯಲಿದೆ. ಸಚಿವರ ಗುಂಪು (GoM) ತೆರಿಗೆ ದರಕ್ಕೆ ಸಂಬಂಧಿಸಿದಂತೆ ಸಮಿತಿಗೆ ವರದಿಯನ್ನು ಸಲ್ಲಿಸಲಿದೆ. ಇನ್ವರ್ಟೆಡ್ ಸುಂಕ ರಚನೆಯಲ್ಲಿ ಸಮಿತಿಯು ವಸ್ತುಗಳ ಪರಿಶೀಲನೆ ಮಾಡಿ, ರೀಫಂಡ್ ಪಾವತಿಯನ್ನು ಕನಿಷ್ಠಗೊಳಿಸುವುದಕ್ಕೆ ಸಹಾಯ ಮಾಡಲಿದೆ.

ಜಿಎಸ್​ಟಿ ಸಮಿತಿ ಸಭೆಯ ಕಾರ್ಯಸೂಚಿ ಏನು? ಇತರ ವಿಚಾರಗಳನ್ನು ಚರ್ಚಿಸುವುದರ ಜತೆಗೆ ಪಾದರಕ್ಷೆ ಮತ್ತು ಜವಳಿ ಮೇಲೆ ತೆರಿಗೆ ಏರಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲಿದೆ. ಸರ್ಕಾರದ ಅಧಿಸೂಚನೆ ಪ್ರಕಾರ, 1000 ರೂಪಾಯಿ ಒಳಗಿನ ಪಾದರಕ್ಷೆಗಳಿಗೆ ಶೇ 12ರಷ್ಟು ಜಿಎಸ್​ಟಿ ಆಗಲಿದೆ. ಮತ್ತೊಂದು ಕಡೆ, ಎಲ್ಲ ಸಿದ್ಧ ಜವಳಿಗೆ (ಹತ್ತಿಯಿಂದ ಸಿದ್ಧವಾದದ್ದನ್ನು ಹೊರತುಪಡಿಸಿ) ಕೂಡ ಶೇ 12ರಷ್ಟು ಜಿಎಸ್​ಟಿ ಆಗಲಿದೆ. ಈ ಹಿಂದೆ, ಇವೆಲ್ಲವುಗಳನ್ನು ಶೇ 5ರ ಜಿಎಸ್​ಟಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಏರಿಕೆ ನಿರ್ಧಾರವನ್ನು ಮುಂದೂಡುವಂತೆ ರಾಜ್ಯ ಸರ್ಕಾರಗಳು, ವರ್ತಕರು ಒಕ್ಕೂಟಗಳು ಒತ್ತಾಯಿಸಿವೆ. ಇದರಿಂದ ಹಲವು ಸಣ್ಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು ಎಂಬ ಆತಂಕದಲ್ಲಿ ಈ ಬೇಡಿಕೆ ಇಟ್ಟಿವೆ. ಇನ್ನು ಹೀಗೆ ಮಾಡಿದರೆ ಬಡವರಿಗೆ ಹೊರೆ ಆಗಲಿದೆ. ಜೀವನಾವಶ್ಯಕ ಆದ ಬಟ್ಟೆ ಖರೀದಿ ಕಷ್ಟ ಆಗಲಿದೆ ಎಂದಿದ್ದಾರೆ.

ಸಚಿವರ ಗುಂಪಿಗೆ ಸ್ಲ್ಯಾಬ್​ಗಳು ಮತ್ತು ದರ ಬದಲಾವಣೆಗಳು ಹಾಗೂ ವಿನಾಯಿತಿ ಪಟ್ಟಿಯಿಂದ ಹೊರಗಿಡುವ ಪಟ್ಟಿಯ ಬಗ್ಗೆ ಶಿಫಾರಸುಗಳನ್ನು ಮಾಡಲಾಗಿದೆ. ಸದ್ಯಕ್ಕೆ ಶೇ 5, ಶೇ 12, ಶೇ 18 ಮತ್ತು ಶೇ 28 ಜಿಎಸ್​ಟಿ ದರ ನಾಲ್ಕು ಹಂತದ ಸ್ಲ್ಯಾಬ್ ರಚನೆ ಹೊಂದಿದೆ. ಅಗತ್ಯ ವಸ್ತುಗಳು ಒಂದೋ ವಿನಾಯಿತಿ ಪಡೆದಿರುವುದೋ ಅಥವಾ ತೆರಿಗೆ ಹಾಕುವುದು ಆಗಿರುತ್ತದೆ. ವಿಲಾಸಿ ಹಾಗೂ ಕೆಲವು ನಿರ್ದಿಷ್ಟ ವಸ್ತುಗಳ ಮೇಲೆ ಹೆಚ್ಚಿನ ಸ್ಲ್ಯಾಬ್ ಇದೆ. ಇದಕ್ಕಿಂತ ಹೆಚ್ಚಾಗಿ ಇವುಗಳ ಮೇಲೆ ಸೆಸ್ ಕೂಡ ಇರುತ್ತದೆ.

ರಾಜ್ಯಗಳು ಬಯಸುವುದು ಏನು? ಪಶ್ಚಿಮ ಬಂಗಾಲದ ಮಾಜಿ ಹಣಕಾಸು ಸಚಿವರಾದ ಅಮಿತ್ ಮಿಶ್ರಾ ಅವರು, ಜವಳಿ ಮೇಲಿನ ಜಿಎಸ್​ಟಿಯನ್ನು ಶೇ 5ರಿಂದ ಶೇ 12ಕ್ಕೆ ಏರಿಕೆ ಮಾಡದಂತೆ, ಹಾಗೆ ಮಾಡಿದರೆ ಒಂದು ಲಕ್ಷ ಜವಳಿ ಘಟಕ ಮುಚ್ಚಬೇಕಾಗುತ್ತದೆ ಮತ್ತು 15 ಲಕ್ಷ ಉದ್ಯೋಗ ನಷ್ಟವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರನ್ನು ಆಗ್ರಹಿಸಿದ್ದಾರೆ.​ ಜವಳಿ ಮೇಲಿನ ಜಿಎಸ್​ಟಿ ದರ ಹಿಂಪಡೆಯುವಂತೆ ತೆಲಂಗಾಣ ಕೈಗಾರಿಕೆ ಸಚಿವರಾದ ಕೆ.ಟಿ.ರಾಮರಾವ್ ಆಗ್ರಹಿಸಿದ್ದಾರೆ.

ಇವುಗಳನ್ನು ಹೊರತುಪಡಿಸಿ, ಜಿಎಸ್​ಟಿ ಪರಿಹಾರ ಸೆಸ್​ ಅನ್ನು ಮತ್ತೆ ಐದು ವರ್ಷ ವಿಸ್ತರಿಸುವಂತೆ ಹಲವು ರಾಜ್ಯಗಳು ಮನವಿ ಮಾಡಿವೆ. ಜಿಎಸ್​ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಆಗುವ ತೆರಿಗೆ ಆದಾಯದ ನಷ್ಟವನ್ನು ತುಂಬಿಕೊಡುವುದಾಗಿ ಕೇಂದ್ರ ಹೇಳಿತ್ತು. ಹಾಗೂ ಅದು 2022ರ ಜೂನ್​​ಗೆ ಕೊನೆ ಆಗಲಿದೆ. ಇದೀಗ ಕೊವಿಡ್ 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಿಎಸ್​ಟಿ ಪರಿಹಾರ ಸೆಸ್​ ಅನ್ನು ಮತ್ತಷ್ಟು ಸಮಯ ವಿಸ್ತರಿಸುವಂತೆ ಕೇಳಲಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ದೆಹಲಿ, ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ, ಛತ್ತೀಸ್​ಗಢ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಈ ಬೇಡಿಕೆಯನ್ನು ಇಟ್ಟಿವೆ.

ಇದನ್ನೂ ಓದಿ: GST rate hike on textiles: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆಗೆ ಹಲವು ರಾಜ್ಯಗಳ ವಿರೋಧ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ