Aadhaar Card Alert: ಆಧಾರ್​ ಕಾರ್ಡ್​ದಾರರೇ ಗಮನಿಸಿ, ಒಂದು ವೇಳೆ ಇಂಥ ತಪ್ಪಾದಲ್ಲಿ 10 ಸಾವಿರ ರೂ. ದಂಡ ಬೀಳುತ್ತೆ!

ಆಧಾರ್​ ಕಾರ್ಡ್​ದಾರರು ಎಚ್ಚರಿಕೆಯಿಂದ ಗಮನಿಸಬೇಕಾದ ಸಂಗತಿಯೊಂದಿದೆ. ಒಂದು ವೇಳೆ ಇಂಥ ತಪ್ಪಾದಲ್ಲಿ 10 ಸಾವಿರ ರೂಪಾಯಿ ದಂಡ ಬೀಳಬಹುದು.

Aadhaar Card Alert: ಆಧಾರ್​ ಕಾರ್ಡ್​ದಾರರೇ ಗಮನಿಸಿ, ಒಂದು ವೇಳೆ ಇಂಥ ತಪ್ಪಾದಲ್ಲಿ 10 ಸಾವಿರ ರೂ. ದಂಡ ಬೀಳುತ್ತೆ!
ಆಧಾರ್ ಕಾರ್ಡ್ (ಪ್ರಾತಿನಿಧಿಕ ಚಿತ್ರ)

ಆಧಾರ್ ಕಾರ್ಡ್‌ದಾರರೇ ಗಮನಿಸಿ. ಇದೀಗ ನಿಯಮಗಳಲ್ಲಿ ಪ್ರಮುಖವಾದ ಅಪ್‌ಡೇಟ್‌ ಆಗಿದೆ. ಒಂದು ವೇಳೆ ನೀವೇನಾದರೂ ತಪ್ಪಾದ 12-ಅಂಕಿಯ ಬಯೋಮೆಟ್ರಿಕ್ ಐಡಿ ಸಂಖ್ಯೆಯನ್ನು ಒದಗಿಸಿದರೆ ರೂ. 10,000 ದಂಡ ವಿಧಿಸಬಹುದು. ಆದ್ದರಿಂದ ಆಧಾರ್ ಕಾರ್ಡ್ ಸಂಖ್ಯೆಯನ್ನು ಉಲ್ಲೇಖಿಸುವಾಗ ಜಾಗರೂಕರಾಗಿ ಇರಬೇಕು. ಆದಾಯ ತೆರಿಗೆ ಕಾಯ್ದೆ 1961ರ ಇತ್ತೀಚಿನ ತಿದ್ದುಪಡಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ಈಗ ಆಧಾರ್ ಕಾರ್ಡ್ ಹೊಂದಿರುವವರಿಗೆ ಪರ್ಮನೆಂಟ್​ ಅಕೌಂಟ್​ ನಂಬರ್ (PAN) ಬದಲಿಗೆ 12-ಅಂಕಿಯ ಬಯೋಮೆಟ್ರಿಕ್ ಐಡಿ ಸಂಖ್ಯೆಯನ್ನು ಬಳಸಲು ಅನುಮತಿ ನೀಡಿದೆ. ಹಣಕಾಸು ಮಸೂದೆ 2019ರಲ್ಲಿ ತಿಳಿಸಿದಂತೆ, ಪ್ಯಾನ್ ಬದಲಿಗೆ ಆಧಾರ್ ಅನ್ನು ಬಳಸಲು ಅವಕಾಶ ನೀಡಲಾಗಿದೆ. ಇದು ತಪ್ಪು ಆಧಾರ್ ಸಂಖ್ಯೆಯನ್ನು ನೀಡಿದಲ್ಲಿ ದಂಡವನ್ನು ಸಹ ಪರಿಚಯಿಸಿದೆ. ಹೊಸ ದಂಡದಲ್ಲಿ ಒಬ್ಬರು ಪ್ಯಾನ್ ಬದಲಿಗೆ ಆಧಾರ್ ಅನ್ನು ಬಳಸಿದರೆ ಮತ್ತು ತಪ್ಪು ಸಂಖ್ಯೆಯನ್ನು ಒದಗಿಸಿದರೆ ಮಾತ್ರ ನಿಯಮಗಳು ಅನ್ವಯಿಸುತ್ತವೆ. ಆದಾಯ ತೆರಿಗೆ ರಿಟರ್ನ್ಸ್ (ITR), ಬ್ಯಾಂಕ್ ಖಾತೆ ತೆರೆಯುವುದು ಇಂತಹ ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ PAN ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುವ ಕಡೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಬಹುದು.

ಹೊಸ ಆಧಾರ್ ನಿಯಮ: ಆಧಾರ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ. ಆದರೆ ಆದಾಯ ತೆರಿಗೆ ಇಲಾಖೆಯು UIDAIನಿಂದ ದಂಡವನ್ನು ವಿಧಿಸುವುದಿಲ್ಲ. ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 272B ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು PANಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸುವಲ್ಲಿ ವಿಫಲರಾದ ಸಂದರ್ಭದಲ್ಲಿ ವ್ಯಕ್ತಿಗಳಿಗೆ ದಂಡ ವಿಧಿಸಬಹುದು. ಅಂದರೆ, PAN ಪಡೆಯಲು, ಉಲ್ಲೇಖಿಸಲು ಅಥವಾ ದೃಢೀಕರಿಸಲು ವಿಫಲವಾದರೆ ದಂಡ ಹಾಕಬಹುದು. ಪ್ರತಿ ಬಾರಿ ವಿಫಲವಾದಾಗಲೂ ದಂಡದ ಮೊತ್ತ 10,000 ರೂಪಾಯಿ ಆಗಿರುತ್ತದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಈ ಮೊದಲು ದಂಡವು ಪ್ಯಾನ್‌ಗೆ ಸೀಮಿತವಾಗಿತ್ತು. ಆದರೆ ಕಳೆದ ಸೆಪ್ಟೆಂಬರ್‌ನಿಂದ ಪ್ಯಾನ್-ಆಧಾರ್ ವಿನಿಮಯ ಸಾಧ್ಯತೆ ಜಾರಿಗೆ ಬಂದಾಗಿನಿಂದ ದಂಡವನ್ನು ಆಧಾರ್‌ಗೂ ವಿಸ್ತರಿಸಲಾಗಿದೆ.

ಒಂದು ವೇಳೆ ನೀವು ಹೀಗೆ ಮಾಡಿದಲ್ಲಿ ದಂಡ ವಿಧಿಸಬಹುದು: 1) ನೀವು PANಗೆ ಬದಲಾಗಿ ಸುಳ್ಳು ಆಧಾರ್ ಸಂಖ್ಯೆಯನ್ನು ಒದಗಿಸಿದಲ್ಲಿ.

2) ನಿರ್ದಿಷ್ಟ ವಹಿವಾಟುಗಳಲ್ಲಿ ನಿಮ್ಮ ಪ್ಯಾನ್ ಅಥವಾ ಆಧಾರ್ ಅನ್ನು ಒದಗಿಸಲು ವಿಫಲರಾದಲ್ಲಿ.

3) ಆಧಾರ್ ಸಂಖ್ಯೆಯನ್ನು ಮಾತ್ರ ನೀಡಿದ್ದು, ಬಯೋಮೆಟ್ರಿಕ್ ಗುರುತನ್ನು ದೃಢೀಕರಿಸಲು ವಿಫಲವಾದಲ್ಲಿ ಭಾರೀ ದಂಡ ಬೀಳುತ್ತದೆ.

ಗಮನಿಸಿ: ಹೊಸ ನಿಯಮಗಳ ಅಡಿಯಲ್ಲಿ ಪ್ಯಾನ್ ಅಥವಾ ಆಧಾರ್ ಅನ್ನು ಸರಿಯಾಗಿ ಉಲ್ಲೇಖಿಸಲಾಗಿದೆ ಮತ್ತು ದೃಢೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಫಲವಾದಲ್ಲಿ ವ್ಯಕ್ತಿಗಳು ಮಾತ್ರವಲ್ಲದೆ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳಿಗೂ ದಂಡ ವಿಧಿಸಬಹುದು.

ಅಂತಹ ಪ್ರತಿಯೊಂದು ಪ್ರಕರಣಕ್ಕೆ ರೂ 10,000 ದಂಡವನ್ನು ವಿಧಿಸಲಾಗುತ್ತದೆ ಅಂದರೆ ಒಬ್ಬರು 2 ನಮೂನೆಗಳಲ್ಲಿ ತಪ್ಪಾದ ಆಧಾರ್ ಸಂಖ್ಯೆಯನ್ನು ನೀಡಿದರೆ ನಿಮಗೆ ₹ 20,000 ದಂಡ ವಿಧಿಸಬಹುದು.

ಇದನ್ನೂ ಓದಿ: Aadhaar Card: ಆಧಾರ್​ ಕಾರ್ಡ್​ ಮೊಬೈಲ್ ನಂಬರ್​ ಅಪ್​ಡೇಟ್​ ಮಾಡಿದ್ದೀರಾ? ವಂಚನೆ ತಪ್ಪಿಸಲು ಹೀಗೆ ಮಾಡಿ

Click on your DTH Provider to Add TV9 Kannada